About the Author

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ಕೃತಿ). ಒಂದು ಸ್ವರ್ಗಕ್ಕಾಗಿ (೧೯೯೯), ಕರಗಿ ಹೋದವಳು (೨೦೦೨),ನೀರು ನಿಂತ ನೆಲ (೨೦೦೭), ಕತೆಗೂ ಊರಿಗೂ ಅಪಾರ ನಂಟು (೨೦೦೯) (ಸಮಗ್ರ ಕಥಾ ಸಂಕಲನ), ಮನುಷ್ಯರನ್ನು ತಿನ್ನುವ ಹುಡುಗ (೨೦೧೨-ಕಥಾ ಸಂಕಲನ), ಮಂಡ್ಯ ಜಿಲ್ಲಾ ಗ್ರಾಮ ಚರಿತ್ರೆ ಕೋಶ (೨೦೧೮) ಮಂಡ್ಯ ಜಿಲ್ಲೆಯ ಸ್ಥಳನಾಮ, ಶಾಸನ, ನಾಗರಿಕ ಸೌಲಭ್ಯ, ದೇಗುಲ, ಹಬ್ಬಹರಿದಿನ, ಕಲಾವಿದರ ಸಮಗ್ರ ವಿವರವುಳ್ಳ ಎರಡು ಸಂಪುಟ ಸಂಪಾದನೆ)

ಪ್ರಶಸ್ತಿ-ಪುರಸ್ಕಾರ: ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರಶಸ್ತಿ, ಡಾ.ಪುಟ್ಟರಾಜಗವಾಯಿ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಹೂಗಾರ ಸಾಹಿತ್ಯ ಪ್ರಶಸ್ತಿ, ವಸುದೇವ ಭೂಪಾಲಂ ಕೇಂದ್ರ ಕಸಾಪ ದತ್ತಿ ಪ್ರಶಸ್ತಿ, ಕನ್ನಡ ಪ್ರಭ- ಸಪ್ನ ಬುಕ್ ಹೌಸ್, ಸಂಕ್ರಮಣ ಸೇರಿದಂತೆ ಹಲವು ಕಥಾ ಸ್ಪರ್ಧೆಯಲ್ಲಿ ಬಹುಮಾನ, ಕೆ.ವಿ. ಶಂಕರಗೌಡ ಸ್ಮರಣಾರ್ಥ ಪ್ರಶಸ್ತಿ

 

ಸಂತೆಕಸಲಗೆರೆ ಪ್ರಕಾಶ್‌