`ಕಡಲಂಚಿನ ಅಲೆಗಳು’ ಗಣಪತಿ ಹೆಗಡೆ ಅವರ ಕವನಸಂಕಲನವಾಗಿದೆ. ಅತಿ ಸರಳ ಸುಂದರ ಪದಗಳಿಂದ ರಚಿತವಾದ ಬದುಕಿನ ವಿವಿಧ ಮಜಲುಗಳ, ಪಾತ್ರಗಳ, ಜನ ಸಾಮಾನ್ಯರ ಭಾವಗಳ ಪ್ರತಿಫಲನ "ಕಡಲಂಚಿನ ಅಲೆಗಳು" ಕವನ ಸಂಕಲನ. ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದ ಹೃದಯವಂತಿಕೆಯ ಕವಿಗಳಾದ ಗಣಪತಿ ಹೆಗಡೆ ದಾಂಡೇಲಿ ಈ ಕವನ ಸಂಕಲನದ ಕರ್ತೃ. ಶ್ರೀಯುತರು ಬಾಲ್ಯದಿಂದಲೂ ಕಷ್ಟಗಳನ್ನು ಕಂಡುಂಡವರು. ಜನಸಾಮಾನ್ಯರ ಹೃದಯದ ನೋವುಗಳನ್ನು ಹತ್ತಿರದಿಂದ ಕಂಡವರು ಮತ್ತು ಸ್ವಯಂ ಅನುಭವಿಸಿದವರು. ಎಲ್ಲರ ಜೊತೆ ನಗುತ್ತಾ ಅರಳು ಹುರಿದಂತೆ ಮಾತನಾಡುತ್ತಾ ಅಸಂಖ್ಯಾತ ಗೆಳೆಯರ ಬಳಗ ಹೊಂದಿರುವ ಇವರ ನಗುಮೊಗದ ಹಿಂದೆ ಅದೆಷ್ಟೋ ನೋವಿನ ಕಥೆಗಳಿವೆ. ಈ ಭಾವ ಜೀವಿಯ ಬದುಕಿನ ಅಂತಹ ಘಟನೆಗಳ ನೋವಿನ ಸಿಂಚನವೇ ಅವರ ಕವಿ ಹೃದಯಕ್ಕೆ ನೋವುಗಳನ್ನು ಕೃತಿಯನ್ನಾಗಿಸಲು ಒಂದು ಕಾರಣವಾಗಿರಬಹುದು.
ಗಣಪತಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾರ್ಸಿಕಟ್ಟಾದವರು. ಪ್ರಸ್ತುತ್ತ ದಾಂಡೇಲಿಯವರು. ತಂದೆ ಕೃಷ್ಣಪ್ಪ ಹೆಗಡೆ ,ತಾಯಿ ಕಮಲಾಕ್ಷಿ ಹೆಗಡೆ . ಎಮ್ ಎ ಕನ್ನಡ, ಎಮ್ ಎ ಎಕಾನಾಮಿಕ್ಸ್ , ಬಿ ಎಡ್ ಪದವಿಯನ್ನು ಹೊಂದಿದ್ದಾರೆ. ಕೃತಿಗಳು: ನೆಲೆಸಿರೋದು ದಾಂಡೇಲಿ, ಮರಳಿನ ಮನೆ ,ವಿಜಯ್ ಕೃತಿ ಸ್ಪಂದನ ,ಮೌನಸೆರೆ, ಕಾರ್ಮುಗಿಲು, ಕಡಲಂಚಿನ ಅಲೆಗಳು ...
READ MORE