‘ಜ್ವಲಂತ’ ಲೇಖಕಿ ವಿಜಯಶ್ರೀ ಸಬರದ ಅವರ ಕವನ ಸಂಕಲನ. ಈ ಕೃತಿಗೆ ಚೆನ್ನವೀರ ಕಣವಿ, ಸೋಮಶೇಖರ ಇಮ್ರಾಪೂರ, ಬಸವರಾಜ ಸಬರದ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಮಹಿಳಾ ಕವಿಗಳಿಗೆ ಬಹುಮಟ್ಟಿಗೆ ಬರಗಾಲವಿದ್ದ ಇಂದಿನ ಈ ಸಂದರ್ಭದಲ್ಲಿ ತಮ್ಮ ಪ್ರಥಮ ಕೃತಿಯಿಂದಲೇ ತಮ್ಮ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ ಶ್ರೀಮತಿ ವಿಜಯಶ್ರೀ ಸಬರದ ಅವರ ಸಮಕಾಲೀನ ಸಮಾಜ ಪ್ರಜ್ಞೆ ಹಾಗೂ ಬದುಕು ಬರಹಗಳ ಸಾವಯುವ ಸಂಬಂಧ ಹೊಂದಿ ಬಾಳಬೇಕೆಂಬ ಹಟ ಪ್ರಯತ್ನ ನಿಜಕ್ಕೂ ಸ್ವಾಗತಾರ್ಹ ಎಂದಿದ್ದಾರೆ ಸೋಮಶೇಖರ ಇಮ್ರಾಪೂರ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE