ಹೂಬುಟ್ಟಿ

Author : ವೇದಾಮಂಜುನಾಥನ್ ಬೆಳಗೆರೆ

₹ 150.00




Year of Publication: 2011
Published by: ಸಪ್ತಗಿರಿ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್

Synopsys

ಲೇಖಕಿ ವೇದಾಮಂಜುನಾಥನ್ ಬೆಳಗೆರೆ ಅವರ ಕವನ, ಲೇಖನ, ಹಾಸ್ಯ, ಚುಟುಕುಗಳ ಸಮ್ಮಿಲನವಾದ ಕೃತಿ 'ಹೂಬುಟ್ಟಿ'. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದ ವಿಭಿನ್ನ ಕೃತಿ. ಇದರಲ್ಲಿ ಕವನ, ಚುಟುಕು, ಹಾಸ್ಯ ಜೊತೆಗೆ ಲೇಖನಗಳ ಸಂಗ್ರಹವಿದೆ. ಅದುವರೆಗೂ ಕಥಾಸಂಕಲನ, ಕಾದಂಬರಿಗಳು, ಕವನ ಸಂಕಲನ ಎಂದು ಪ್ರತ್ಯೇಕವಾಗಿ ಬರೆದು ಪ್ರಕಟಿಸುತ್ತಿದ್ದ ಲೇಖಕಿ, ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಬೇರೆ ಬೇರೆ ವಿಧದ ಪ್ರಾಕಾರಗಳನ್ನು ಒಟ್ಟಾಗಿ ಸೇರಿಸಿ ಒಂದು ಪುಸ್ತಕ ಮಾಡಿದ್ದಾರೆ.. ಕೃತಿಯಲ್ಲಿ ನಾನಾ ತರಹದ ಪ್ರಕಾರಗಳಿರುವುದರಿಂದ ಇದಕ್ಕೆ ಹೂಬುಟ್ಟಿ ಎಂದು ಹೆಸರಿಟ್ಟೆ. ತರತರದ ಹೂಗಳನ್ನು ಆಯ್ದು ಮಾಲೆಯಾಗಿ ಕಟ್ಟಿದ ಪ್ರಯತ್ನ ಇಲ್ಲಿದೆ.

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books