About the Author

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ. 

ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ.

ವೇದಾಮಂಜುನಾಥನ್ ರವರ ಮಕ್ಕಳ ಕಥೆಯೊಂದು ಚಲನಚಿತ್ರಕ್ಕೆ ಆಯ್ಕೆಯಾಗಿರುತ್ತದೆ. ಇದಕ್ಕೆ ಸ್ವತಃ ವೇದಾರವರೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗು ಸಾಹಿತ್ಯವನ್ನು ಬರೆದಿರುತ್ತಾರೆ.

ವೇದಾಮಂಜುನಾಥನ್ ರವರು ಚಳ್ಳಕೆರೆಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಮಹಿಳಾ ಸಂಚಾಲಕಿಯಾಗಿದ್ದರು. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್, ಹಾಗು ಲೇಖಕಿಯರ ಸಂಘದ ಸದಸ್ಯೆಯಾಗಿದ್ದು, ಹಿರಿಯ ಕವಯಿತ್ರಿಯರ ಕಾದಂಬರಿಗಳ ವಿಮರ್ಶೆ, ಪುಸ್ತಕಪರಿಚಯ, ಕವಿಗೋಷ್ಠಿಗಳು, ವಿಚಾರ ಸಂಕಿರಣಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ  ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಅನೇಕ ಸ್ಮರಣಿಕೆಗಳು, ಪ್ರಶಸ್ತಿಪತ್ರಗಳನ್ನು ಪಡೆದಿದ್ದಾರೆ.

ಪ್ರಶಸ್ತಿಗಳು: ಸ್ತ್ರೀ ಸದ್ಭಾವನಾ ಪ್ರಶಸ್ತಿ, ಕರುನಾಡ ರತ್ನ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಲಲಿತಾ ಪುರಸ್ಕಾರ, ಕವಿ ವಿಭೂಷಣ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಸನ್ಮಾನ ಗೌರವಗಳು ಸಂದಾಯವಾಗಿವೆ.

ಕೃತಿಗಳು: ಬೀಸಿ ಬಂತು ತಂಗಾಳಿ, ಕಾನನದ ಸುಮವೊಂದು,ಬಾಳೆಂಬ ಈ ಪಥದಲ್ಲಿ,  ಆ ಘಟನೆಯ ಸುತ್ತಾ.., ಮರಳಿ ಗೂಡು ಸೇರಿದ ಹಕ್ಕಿಗಳು, ಉನ್ಮಾದದ ಬದುಕು,  ಹೂವು-ಹಣ್ಣು, ಹೊಂಗೆಹೂವ ತೊಂಗಲಲ್ಲಿ,  ಸಾಧನ, ಓ ಮನಸೇ ನೀನೇಕೆ ಹೀಗೆ, ಸುಳಿ,  ಭೃಂಗದ ಸಂಗೀತ,  ಸೋಲು ಗೆಲುವಿನ ಸೋಪಾನ,  ಸುಮವೇ, ಮತ್ತೆ ಕೇಳಿ ಬರುತ್ತಿದೆ, ಅಮೃತಸಿಂಚನ,  ಬೆಳ್ಳಿಮೀನು, ಜಾಡು, ಬದಲಾಗದ ಬಣ್ಣಗಳು, ಅವಭೃಥ, ಬದಲಾವಣೆ ಜಗದ ನಿಯಮ, ಗೂಡಿನಿಂದ ಗಗನಕ್ಕೆ, ಸ್ವತಂತ್ರ ಹಕ್ಕಿ, ನಾಳೆಗಳು ನಿನ್ನೆಗಳಂತಿಲ್ಲ, ಅಂತರಾಳ, ಅತ್ತಿಹಣ್ಣು, ತುಂಬೆ ಹೂ, ಅಂತರ್ಮುಖಿ, ಇಳಿಹೊತ್ತು, ಅಂತ್ಯ ಅಲ್ಲದ ಆರಂಭ, ನೀ ಬರುವ ಹಾದಿಗೆ, ಅಸ್ತಂಗತ, ನನ್ನ ನಲವಿನ ಬಳ್ಳಿ, ಆ ಮೂರು ಘಂಟೆಗಳು, ಅಂತಿಮ ನಿರ್ಣಯ ಭಾಗ -1-, ಅಂತಿಮ ನಿರ್ಣಯ ಭಾಗ -2-, ಜೀವನ ನೂರು ಭಾವಗಳ ಸಂಗಮ, ಅವಳು ಮತ್ತು ಗುಲಾಬಿ, ಅಜ್ಞಾತವಾಸ, ವಸಂತದ ಕೋಗಿಲೆ, ಬಾಳ ಸಂಕೋಲೆ, ಒಂದೇ ದೋಣಿಯ ಪಯಣಿಗರು, ಚೆಲ್ಲಿದ ಬೆಳದಿಂಗಳು, ಸರಿದ ತೆರೆ (ಕಥಾಸಂಕಲನ),  ಕಾಮನಬಿಲ್ಲು (ಕಥಾಸಂಕಲನ), ಬ್ಯೂಟಿ ಅಂಡ್ ಹೆಲ್ತ್ ಟಿಪ್ಸ್,  ಸವಿ ಸವಿ ಸವಿರುಚಿಗಳು, ಹೆಜ್ಜೆ ಗುರುತು (ಕವನ ಸಂಕಲನ), ಹೂ ಬುಟ್ಟಿ (ಲೇಖನ, ಕವನ, ಹಾಸ್ಯ), ಬೀಸಿ ಬಂತು ತಂಗಾಳಿ (ಮರುಮುದ್ರಣ), ಸಿಂಧೂರ (ಲೇಖನಗಳ ಸಂಗ್ರಹ). 

ವೇದಾಮಂಜುನಾಥನ್ ಬೆಳಗೆರೆ

Stories/Poems