ಹೊತ್ತು ಮೂಡುವ ಸಮಯ- ಜಾನಪದ ತಜ್ಞ ಶ್ರೀರಾಮ ಇಟ್ಟಣ್ಣವರ ವರು 5ನೇ ಕವನ ಸಂಕಲನ. ಆಧುನಿಕ ಬದುಕಿನ ವೈರುದ್ಧ್ಯ, ವಿಕಾರ, ವಿಷಣ್ಣತೆಗಳೇ ಪ್ರಧಾನವಾಗಿರುವ ಕವನಗಳು ಇಲ್ಲಿವೆ. ಇದುವರೆಗಿನ ಹಾಡಿನ ದಾರಿಯಿಂದ ಹೊರಬಂದ ಮುಕ್ತ ಛಂದಸ್ಸಿನ ಕವಿತೆಗಳಲ್ಲಿವೆ. ಬೆಳಗು, ಬೇಂದ್ರೆ, ಕಣವಿ, ಬಿಳಿ ಪಾರಿವಾಳ ಹೀಗೆ ಹಾಡಬಲ್ಲ ಕವಿತೆಗಳೂ ಇಲ್ಲಿವೆ. ನಗರ ಕೇಂದ್ರೀಕೃತ ಮತ್ತು ಕೃತ್ರಿಮ ಬದುಕನ್ನು ವಿಡಂಬಿಸುವ ರೀತಿ ಇಲ್ಲಿ ಕಾಣಬರುತ್ತದೆ.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE