ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ಕಂದಗಲ್ಲ, ಸ್ಮೃತಿ ವಾತ್ಸಲ್ಯ, ಹಾಲಕೆನೆ (ಸಂಪಾದಿತ), ಕೌಜಲಗಿ ನಿಂಗವ್ವ; ಸ್ವಾತಂತ್ರ ಹೋರಾಟಗಾರ್ತಿ ಸೀತಾಬಾಯಿ ತಿಮಸಾನಿ (ಜೀವನ ಚರಿತ್ರೆ) ಪ್ರಕಟಿತ ಕೃತಿಗಳು.
ಅವರಿಗೆ ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್; ಜಾನಪದ ತಜ್ಞ ಪ್ರಶಸ್ತಿ: ಮೇಘಮಿತ್ರ ಸಾಹಿತ್ಯ ಪುರಸ್ಕಾರಗಳು ಸಂದಿವೆ.