ಹಿರಿಯ ಲೇಖಕ ಡಾ. ಎಂ.ಜಿ. ದೇಶಪಾಂಡೆ ಅವರ ಚುಟುಕುಗಳ ಸಂಕಲನ-ಹನಿ ಹನಿ ಸುಧೆ. ಪ್ರೀತಿ, ಹೂವಕೊರಗು ,ಹಾಗೆ, ವಾಂತಿ, ಬಿಳಿ, ಗವಿ ಅವಳು, ಜೀವನ, ರಸ ,ಮಂದಾರ ಸೇರಿದಂತೆ ನೂರಾರು ಪುಟ್ಟ ಚುಟುಕುಗಳು ಇಲ್ಲಿವೆ . ಕಟುಸತ್ಯ ಕವಿತೆಯಲ್ಲಿ 'ಅಂದು ಬ್ರಿಟಿಷರು ನಮ್ಮನ್ನಾಳಿದರೂ ಇಂದು ಇಂಗ್ಲಿಷ್ ನಮ್ಮನ್ನಾಳುತ್ತಿದೆ , 'ಪ್ರಕಟ' ಎನ್ನುವಂಥ ಕವಿತೆಯಲ್ಲಿ ,'ಅವಳು ಕವಿತೆ ಅವನು ಕತೆ ನಿತ್ಯ ಮನೆಯಲ್ಲಿ "ರಾದ್ಧಾಂತ" ಎಂಬ ಪತ್ರಿಕೆ ಪ್ರಕಟ', ವ್ಯಕ್ತಿತ್ವ ಎನ್ನುವ ಕವಿತೆಯಲ್ಲಿ 'ಉತ್ತಮ ಚರಿತೆ ನಿನ್ನ ಪಾಲಿಗೆ ಹಿಡಿತದಲ್ಲಿರಲಿ ನಿನ್ನ ನಾಲಿಗೆ' ಮತ್ತು' ಕವಿತೆಯಲ್ಲಿ ಮದಿರೆ ಕ್ಷಣ ಹೊತ್ತಿನ ಮತ್ತು ನಿನ್ನ ಸನಿಹ ಬಾಳೆಲ್ಲ ಗಮ್ಮತ್ತು' 'ಬದುಕು' ಕವಿತೆಯಲ್ಲಿ' ಕಾಂಚಾಣದ ಕಸರತ್ತಿನಲ್ಲಿ ಪುಡಿಪುಡಿಯಾಗುತ್ತದೆ ಮನಸ್ಸು ಮತ್ತೆ ಸುಂದರ ಕನಸುಗಳು ಮತ್ತೆ ಬದುಕಾಗುತ್ತದೆ ಹರಕು..ಹರಕು ಆಗ ಭಾವಗಳಿಂದ ತೇಪೆ ಹಚ್ಚಬೇಕೆನ್ನುವೆ ಮತ್ತೆ ಬಾಳಿನ ಇನ್ನೊಂದು ಮಗ್ಗುಲಲ್ಲಿ ಆಸೆ ಚಿಗುರೊಡೆಯುತ್ತದೆ' ( ಮಯೂರ) ಹೀಗೆ ಹಲವಾರು ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಈ ಕೃತಿಗೆ ರಾಜ್ಯ ಮಟ್ಟದ ದಿ. ಶ್ಯಾನ್ ಭೋಗರಾಮದಾಸಪ್ಪ( ಮಣಿವಾಲ) ಸ್ಮರಣಾರ್ಥ ಸಾಹಿತ್ಯ ಪ್ರಶಸ್ತಿ (27.10.2013) ದೊರೆತಿದೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE