About the Author

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. 

ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ಡೌನ್ ಸನ್ನಿವೇಶದಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನಲ್ ಆರಂಭಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿಭಾವಂತರನ್ನು ಗೌರವಿಸುವ ಇವರ ವ್ಯಕ್ತಿತ್ವದ ಒಂದು ಭಾಗ. 2021ರಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಜೀವನ ಆಧರಿಸಿದ "ಕನ್ನಡ ಕುವರ ಡಾ.ಚನ್ನಬಸವ ಪಟ್ಟದ್ದೇವರು" ಎನ್ನುವ ಚಲನಚಿತ್ರದಲ್ಲಿ ಆರ್ . ವಿ. ಬೀಡಪ್ಪ ದಿ. ಮುತ್ಸದಿಗಳ  ಪಾತ್ರಮಾಡಿದ್ದಾರೆ. 

ಧರಿನಾಡು ಕನ್ನಡ ಸಂಘ ಜಿಲ್ಲಾ ಘಟಕ,  ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ , ಆಧುನಿಕ ವಚನ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಸಮ್ಮೇಳನಗಳು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು  ಹೀಗೆ 6ಸಮ್ಮೇಳನಗಳ ಸರ್ವಾಧ್ಯಕ್ಷ ರಾಗಿದ್ದರು. ಇವರ  ಕವಿತೆಗಳು,ಕೃತಿಗಳು ಪ್ರಾಥಮಿಕ ಶಾಲೆ ಹಾಗೂ ಪದವಿ ವಿದ್ಯಾರ್ಥಿಗಳಿಗೂ ಪಠ್ಯ ವಾಗಿವೆ.

ಕೃತಿಗಳು: ಪ್ರಕಾಶ ಜ್ಯೋತಿ (ಕಾದಂಬರಿ-1974), ಹೂ ಬಾಡಿದಾಗ (ಕಾದಂಬರಿ-1976), ಭ್ರಮೆ (ಕಥಾ ಸಂಕಲನ-1986), ಅನ್ವೇಷಣೆ (ಕವನ ಸಂಕಲನ-1996), ಒಲವಿನ ಚಿತ್ತಾರಗಳು (ಮಿನಿಗವಿತೆ ಸಂಕಲನ-1997), ಪಾರಿಜಾತ (ಮಿನಿಗಥೆ ಸಂಕಲನ-1998), ಗೀತ ಮಾನಸ
(ಭಕ್ತಿ ಕಾವ್ಯ ಸಂಕಲನ-2006), ಭಕ್ತಿ ಕುಸುಮಾಂಜಲಿ (ಭಕ್ತಿ ಕಾವ್ಯ ಸಂಕಲನ-2006), 
ಮನಃಸಾಕ್ಷಿ (ಅನುವಾದ-2008), ಕಾವ್ಯ ಚಿತ್ರಾಂಬರಿ (ಕಾವ್ಯ ಸಂಕಲನ-2009), 
ಚಿಂತನ ಮಂದಾರ (ಚಿಂತನೆಗಳು-2009), ಇಂಚರ (ಹನಿಗಾವ್ಯ ಸಂಕಲನ-2009), ವಚನ ಚಂದ್ರಿಕೆ (ವಚನ ಸಂಕಲನ-2010), ಶ್ರಾವಣಿ (ಕಥಾಸಂಕಲನ-2010), ದೇವಯಾನಿ (ಕಥಾಸಂಕಲನ-2010), ಅಜ್ಜನ ಹಳ್ಳಿ (ಶಿಶು ಕಾವ್ಯ ಸಂಕಲನ-2010), ವಿರಹ ಪ್ರೀತಿ (
ಕಾವ್ಯ ಸಂಕಲನ-2010), ವಿದುರ ನಗರಿ (ಲೇಖನಗಳ ಮಾಲೆ-2010), 
ಲೋಕಾನುರಾಗಿ ಗುರುಪಾದಪ್ಪ ನಾಗಮಾರಪಳ್ಳಿ (ವ್ಯಕ್ತಿ ಚಿತ್ರ-2010), ಶ್ರೀ ಜಗನ್ನಾಥ್ ಮಹಾರಾಜ್ (ಚರಿತ್ರೆ--2010), ಶ್ರೀ ಹರಿದತ್ತ ಭಜನಾಮೃತ (ಗೀತೆಗಳ ಸಂಕಲನ-2010), ಮೀರಾ ಬಾಯಿ (ಕಾದಂಬರಿ-2011), ಕಥೆಯಾದ ಬದುಕು (ಕಥಾ ಸಂಕಲನ-2011), ಬದುಕು (ಬಸವಣ್ಣನವರ ವಚನಗಳನ್ನಾಧರಿಸಿ ಚರಿತ್ರೆ ಹಾಗೂ ಲೇಖನಗಳು -2011), ದೇವನ ಜೋಕಾಲಿ (ತತ್ವಪದಗಳ ಸಂಕಲನ-2010), ನಾಗಲಿಂಗ ತತ್ವಪದಗಳು (ಸಂಪಾದಕೀಯ-2011), ಆಶಾ ಕಿರಣ (ಕಾದಂಬರಿ-2011), ಯಾವುದು ಸತ್ಯ (ಕಥೆ-2012), ಚುಟುಕು ಸೌರಭ (ಸಂಪಾದಕೀಯ-2012), ಹನಿ ಹನಿ ಸುಧೆ (ಚುಟುಕು ಸಂಕಲನ-2012), ಪರಾಗ (ಚುಟುಕು ಸಂಕಲನ-2012), ಸಾಹಿತ್ಯರತ್ನಗಳು (ವ್ಯಕ್ತಿ ಚಿತ್ರಗಳು-2012)., ಒಡೆದ ಕನ್ನಡಿ (ಸಮಗ್ರ ಕಥೆಗಳು-2012), ಪ್ರೀತಿ ತಂದ ಫಜೀತಿ (ನಾಟಕ-2012), ಧವಳಗಿರಿ (ಕೀರ್ತನೆಗಳ ಸಂಕಲನ-2012), ತವನಿಧಿ (ತತ್ವಪದಗಳ ಸಂಕಲನ-2012), ರತ್ನಧವಳ (ಸಂಪಾದಕೀಯ-2012), ಒಂದು ಮತ್ತೊಂದು (ಕಾದಂಬರಿ-
2012), ಕಾಮನ ಬಿಲ್ಲು(ಶಿಶು ಕವಿತೆಗಳ ಸಂಕಲನ-2012), ಹೂಬಿಡದಗುಲಾಬಿ ಗಿಡ (ಕಥಾಸಂಕಲನ-2013),  ಝೇಂಕಾರ (ಹನಿಗವನ ಸಂಕಲನ-2014), ಶ್ರೀ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜರು (ಜೀವನ ಚರಿತ್ರೆ-2014), ನಗುವೇ ಅಮೃತ (
ನಗೆ ಹನಿಗಳು-2014), ಚಂದ್ರಹಾರ (ಮಕ್ಕಳ ಕವನ ಸಂಕಲನ-2014), ಶ್ರೀ ಗೋವಿಂದದಾಸ ಮಹಾರಾಜರು (ಚರಿತ್ರೆ-2015), ಶ್ರೀ ವಿಶ್ವಂಭರಾನಂದ ಸ್ವಾಮಿ (ಚರಿತ್ರೆ -2015), ಶ್ರೀ ರೇಕುಳಗಿ ಶಂಭುಲಿಂಗೇಶ್ವರ (ಚರಿತ್ರೆ -2015), ಶ್ರೀ ಕರಕನ್ನಳ್ಳಿ ಬಕ್ಕಪ್ಪ ಪ್ರಭುಗಳು (ಅನುವಾದ-2015), ಮಾಣಿಕ್ಯ ದೀಪ್ತಿ (ಸಮಗ್ರ ಕವಿತೆಗಳು-2015), ರತ್ನ ಮಂಜರಿ (ಚುಟುಕುಗಳು-2015), ಕಾವ್ಯ ಸೌರಭ (ಕÀವಿತೆಗಳು-2015), ಗ್ರಾಮ ಚೇತನ (ಅಭಿನಂದನ ಗ್ರಂಥ-ಸಂಪಾದನೆ-2017), ಶ್ರೀ ಸದ್ಗುರು ದರ್ಶನ ಮಂತ್ರ ಮಹರ್ಷಿ ಶ್ರೀ ಗುರೂಜಿ (ಚರಿತ್ರೆ-
2017), ‘ಸಾಹಿತ್ಯ ಮಂದಾರ’ (ಇವರಿಗೆ 2011ರಲ್ಲಿ ಸಮರ್ಪಿಸಿದ ಅಭಿನಂದನಾ ಗ್ರಂಥ)

ಪುರಸ್ಕಾರಗಳು: ಇವರ 'ಚಾಂದಿನಿ' ಕಥೆ  ಚಂದನ ದೂರದರ್ಶನದಲ್ಲಿ ಕಿರುಚಿತ್ರವಾಗಿ ಪ್ರಸಾರವಾಗಿದ್ದು, ಇವರ ವ್ಯಕ್ತಿತ್ವವನ್ನು ಆಧರಿಸಿ ಪಬ್ಲಿಕ್ ಟಿ.ವಿಯು  "ಪಬ್ಲಿಕ್ ಹೀರೋ" ಎಂದು ಬಿರುದು ನೀಡಿ ಗೌರವಿಸಿದೆ. ಭಾರತ ಜ್ಯೋತಿ, ಬಸವ ಸಾಹಿತ್ಯರತ್ನ, ಬಸವ ಶಿರೋಮಣಿ, ಕಲ್ಯಾಣ ಕರ್ನಾಟಕ ರತ್ನ, ಕಲ್ಯಾಣ ಕರ್ನಾಟಕ ಮೇರು ಸಾಹಿತಿ ,ಜಿಲ್ಲಾ ರಾಜ್ಯೋತ್ಸವ,  ಗುಲಬರ್ಗಾ ವಿಶ್ವವಿದ್ಯಾಲಯದಿಂದ "ದೇವಯಾನಿ" ಕೃತಿಗೆ ಪ್ರಶಸ್ತಿ, ಕಲ್ಯಾಣ ಕರ್ನಾಟಕ ರತ್ನ , ಅಣ್ಣ , ದಾಸ ಸಾಹಿತಿ, ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ , ಸಾಹಿತ್ಯ ಭೀಷ್ಮ ,ಸಾಹಿತ್ಯ ಮಂದಾರ ಭೀಷ್ಮ, ಸಾಹಿತ್ಯ ರತ್ನ , ಸಗರನಾಡು ಸೇವಾ ರತ್ನ ಪ್ರಶಸ್ತಿ , ಕನ್ನಡ ಸೇನಾನಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ನ್ಯಾಷನಲ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್&ಎಜುಕೇಷನ್ ವಿಶ್ವವಿದ್ಯಾಲಯದಿಂದ ( 23.11.2019ರಲ್ಲಿ ಮೈಸೂರಿನಲ್ಲಿ) ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಇವರ ಕನ್ನಡ ಕೈಂಕರ್ಯ ಪರಿಗಣಿಸಿ (18-04-2021)  ರಾಜ್ಯಮಟ್ಟದ ಪ್ರಶಸ್ತಿ  ‘ಕಡಲತೀರದ ಭಾರ್ಗವ ಕಾರಂತ ಪ್ರಶಸ್ತಿ’ ಪ್ರಧಾನ ಮಾಡಿ ಗೌರವಿಸಲಾಗಿದೆ.

 

ಎಂ.ಜಿ. ದೇಶಪಾಂಡೆ

(21 Mar 1952)

Books by Author