ಡಾ. ಎಂ.ಜಿ. ದೇಶಪಾಂಡೆ ಅವರ ಹನಿಗವನಗಳ ಸಂಕಲನ-ಹನಿ ಹನಿ ಜೇನು ಹನಿ. ಒಂದು ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಸಂಕಲಿಸಲಾಗಿದೆ. ಬಹುತೇಕ ಹನಿಗವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮನಸ್ಸುಗಳು ಅರಳಿದಾಗ ಕನಸು ಹುಟ್ಟುತ್ತವೆ. ಸಪ್ನ ವಿಫಲವಾದಾಗ ಮನಸ್ಸು ಸಾಯುತ್ತೆ, ಸದಾ ಸತ್ಯ ಎನ್ನುವ ಒಂದು ಹನಿಗವನದಲ್ಲಿ ಕಾಸಿಗೆ ನೂರು ಕಾಲುಗಳು ಆದರೆ ಅದಕ್ಕೆ ಒಂದು ಹೃದಯವಿಲ್ಲ, ಬದುಕು ಸುಂದರ ಎಂಬ ಕವಿತೆಯಲ್ಲಿ ಬದುಕು ಬಹು ಸುಂದರ ಎಂದಾಗಲೆಲ್ಲ ಸಾವು ಬಂದು ನೆನಪಿನ ಅಂಗಳದಲ್ಲಿ ತೇಲಿ ಹೋಗುತ್ತದೆ....ಹೀಗೆ ನೂರಾರು ಹನಿಗವನಗಳು ಜೀವನಕ್ಕೆ ಸಂಬಂಧಿಸಿದಂತೆ, ಬದುಕಿಗೆ ಹತ್ತಿರವಾದ ಅನೇಕ ವಿಷಯಗಳು ಒಳಗೊಂಡ ಹನಿಗವನಗಳು ಇಲ್ಲಿವೆ. ಎಂದು ಕವಿಗಳು ಹೇಳಿದ್ದಾರೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE