" ಹದುಳ ತೆಕ್ಕೆಯಲಿ ಗೂಡು ಕಟ್ಟಿದ ಕವಿತೆಗಳು" ವಸು ವತ್ಸಲೆ ಅವರ ಕವನ ಸಂಕಲನ. ಈ ಸಂಕಲನವು ವರ್ತಮಾನದ ಹಲವು ಸಮಸ್ಯೆಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ತರ್ಕಿಸುತ್ತದೆ. ಹಲವು ಭಾವನೆಗಳ ಸಮ್ಮಿಲನದ ಅಭಿವ್ಯಕ್ತಿಯನ್ನು ಇಲ್ಲಿಯ ಕವಿತೆಗಳು ಎತ್ತಿ ಹಿಡಿದೆವೆ. ಹೊಸ ಬಗೆಯ ಪ್ರತಿಮೆಗಳಿಂದ ಕಾವ್ಯ ರಸಿಕರ ಮನಗೆಲ್ಲುವಲ್ಲಿ ಸಾಧಿತವಾಗಿವೆ. ಪದ್ಮಶ್ರೀ ಪ್ರೊ. ದೊಡ್ಡರಂಗೇಗೌಡರ ಮುನ್ನುಡಿಯಿಂದ ಅಲಂಕೃತಗೊಂಡ ಕೃತಿ ಹಿರಿಯ ಲೇಖಕಿ ವೈದೇಹಿಯವರ ಬೆನ್ನುಡಿಯಿಂದ ಶೋಭಾಯಮಾನವಾಗಿದೆ. ವಿಶಿಷ್ಟ ಮುಖಪುಟದಿಂದ ಆಕರ್ಷಿತಗೊಳಿಸುವ ಈ ಕವನ ಸಂಕಲನ ಅದ್ಭುತ ಕವನಗಳಿಂದ ಮನಸೂರೆಗೊಳಿಸುವುದು ಖಚಿತ.
ವಸು ವತ್ಸಲೆ ಅವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ... ಸಣ್ಣಕಥೆ ಹಾಗೂ ಕವಿತೆಗಳನ್ನು ಬರೆಯುವ ಹವ್ಯಾಸ... ನಾಲ್ಕು ಸ್ವಂತ ಪುಸ್ತಕಗಳು, ಮೂರು ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ. ಐದು ಭಾವಗೀತೆಗಳ ಧ್ವನಿ ಸಾಂದ್ರಿಕೆಗಳು ಹೊರ ಬಂದಿವೆ. ನಾಡಿನ ಹಲವು ಪ್ರಸಿದ್ಧ ಗಾಯಕರು ಹಾಡಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾಕ್ಕೂ ಸಾಹಿತ್ಯ ನೀಡಿದ್ದಾರೆ. ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಸಾಧನಕೇರಿ ಪ್ರತಿಷ್ಠಾನ ವನ್ನು ಸಂಸ್ಥಾಪಿಸಿ ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ. ...
READ MORE