ವಸು ವತ್ಸಲೆ ಅವರು ಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ... ಸಣ್ಣಕಥೆ ಹಾಗೂ ಕವಿತೆಗಳನ್ನು ಬರೆಯುವ ಹವ್ಯಾಸ... ನಾಲ್ಕು ಸ್ವಂತ ಪುಸ್ತಕಗಳು, ಮೂರು ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ. ಐದು ಭಾವಗೀತೆಗಳ ಧ್ವನಿ ಸಾಂದ್ರಿಕೆಗಳು ಹೊರ ಬಂದಿವೆ. ನಾಡಿನ ಹಲವು ಪ್ರಸಿದ್ಧ ಗಾಯಕರು ಹಾಡಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾಕ್ಕೂ ಸಾಹಿತ್ಯ ನೀಡಿದ್ದಾರೆ.
ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಸಾಧನಕೇರಿ ಪ್ರತಿಷ್ಠಾನ ವನ್ನು ಸಂಸ್ಥಾಪಿಸಿ ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇನೆ.