ಗೆರೆ ಏಕೆ ಕೊರೆದೆ

Author : ಡಿ.ಎನ್‌. ಅಕ್ಕಿ

Pages 128

₹ 140.00




Year of Publication: 2024
Published by: ಕವಿಕುಂಚ ಪ್ರಕಾಶನ
Address: ಅಂಚೆ: ಗೋಗಿ, ತಾ: ಶಹಾಪುರ, ಜಿ: ಗುಲಬರ್ಗಾ-585309
Phone: 9448577898

Synopsys

`ಗೆರೆ ಏಕೆ ಕೊರೆದೆ’ ಡಿ.ಎನ್. ಅಕ್ಕಿ ಅವರ ಕವನ ಸಂಕಲನವಾಗಿದೆ. ಇದಕ್ಕೆ ವೆಂಕಟೇಶ ಮಾನು ಅವರು ಬರೆದ ಬೆನ್ನುಡಿ ಬರಹ ಹೀಗಿದೆ; ಸರಳ ಬದುಕು-ಎತ್ತರದ ಚಿಂತನೆ, ಮಾನವೀಯ ಕಳಕಳಿಯ ಕಾಣ್ಕೆಗೆ ಅವರ ಸಾಹಿತ್ಯ-ಸಂಶೋಧನಾಸಕ್ತಿಯ ಕೃತಿಗಳೇ ಕಿಟಕಿ. ಶ್ರೀ ಡಿ.ಎನ್.ಅಕ್ಕಿ ಅವರ ವ್ಯಕ್ತಿತ್ವದ ಅನಾವರಣಕ್ಕೆ ಹೆಬ್ಬಾಗಿಲು. ಗೋಗಿಯಲ್ಲಿರುವ ಅವರ ಮನೆಗೊಮ್ಮೆ ಹೋಗಿ ಬನ್ನಿ: ನೆಲದಿಂದ ಸುಮಾರು ಎಂಟು ಅಡಿ ಎತ್ತರದ ಮೇಲೆ ಒಂದು ದೊಡ್ಡ ಬಾಗಿಲು, ಎತ್ತರದ ಹೊಸ್ತಿಲು, ಗಾಳಿ- ಬೆಳಕಿಗೆ ತೆರೆದುಕೊಂಡ ಚೌಕಾಕಾರದ ವಿಶಾಲ ಅಂಗಳ. ಮತ್ತೆ ನೀವು ಪಾವಟಿಗೆ ಹತ್ತಿ ಎಂಟು ಅಡಿ ಎತ್ತರಕ್ಕೇರಬೇಕು. ಅಂಗಳಕ್ಕೆ ಕಟ್ಟೆ ಕಟ್ಟಿರುವಂತೆ ವಿಶಾಲವಾದ ಪಡಸಾಲೆ. ನಮಗರಿವಿಲ್ಲದಂತೆ ನಾವು ಕಂಬಗಳನ್ನು ಎಣಿಸುತ್ತಿರುತ್ತೇವೆ. ಅಂಗಳದ ಎಡ-ಬಲಕ್ಕೆ ದನ-ಎತ್ತುಗಳ ಕೊಟ್ಟಿಗೆಗಳು, ಅಂದಿನ ವೈಭವ ಇಂದಿಲ್ಲದಿರಬಹುದು. ಆದರೆ, ಅಂತಹ ಮನೆಯ ಸಾಂಸ್ಕೃತಿಕ ಸಿರಿವಂತಿಕೆಯನ್ನು ತಮ್ಮ ನಡೆ-ನುಡಿಯ ಕ್ರಿಯಾಶೀಲತೆಯಿಂದ ಶ್ರೀ ಡಿ.ಎನ್.ಅಕ್ಕಿ ಅವರು ಕಾಪಿಟ್ಟುಕೊಂಡು ಬಂದಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಡಿ.ಎನ್‌. ಅಕ್ಕಿ
(03 October 1948)

ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು.  ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ.  ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...

READ MORE

Related Books