ಲೇಖಕ ಗವಿಸಿದ್ದಪ್ಪ ಅವರ ಮೊದಲ ಹನಿಗವನಗಳ ಸಂಕಲನ-ʻಗವಿ ಸವಿʼ. ಸಣ್ಣ-ಸಣ್ಣ ಸಾಲುಗಳಲ್ಲಿ ಪ್ರಾಸದೊಂದಿಗೆ ಕರುಣೆ, ಆರೋಗ್ಯ, ಹಾಸ್ಯ, ಆತಂಕ, ಪ್ರೀತಿ, ಭೀತಿ, ವ್ಯಂಗ್ಯ, ವಿಡಂಬನೆ, ದೇವರು, ಭಕ್ತಿ ಕುರಿತು ಚುಟುಕು ಹನಿಗವನಳಿವೆ. ಸಾಹಿತಿ ಡಾ. ಕೆ. ಶರಣಪ್ಪ ನಿಡಶೇಸಿ (ಶನಿ) ಅವರು ಈ ಕೃತಿಗೆ ಬೆನ್ನುಡಿ ಬರೆದು,ʻಚುಟುಕುಗಳಲ್ಲಿ ತಕ್ಷಣವೇ ಕಾಣುವುದು ಹುಡುಗಾಟ; ಒಳಾರ್ಥದಲ್ಲಿ ಅಗಾಧ ಹುಡುಕಾಟ! ಕೆಲವು ಪ್ರಾಪಂಚಿಕ ಗಾಂಭೀರ್ಯವನ್ನು ಹಿಡಿದಿಟ್ಟುಕೊಂಡರೆ, ಇನ್ನೂ ಕೆಲವು ಜೀವನ ಸತ್ಯವನ್ನು ಎತ್ತಿ ತೋರಿಸುತ್ತಿವೆ. ಕತ್ತಲು ಕವಿದ ಪರದೆಯನ್ನು ಸರಿಸಿ, ಸುತ್ತಲೂ ಇರುವ ಜೀವನ ಸೌಂದರ್ಯವನ್ನು ಎತ್ತಿ ತೋರುತ್ತಿರುವಂತಿವೆʼ, ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖಕ ಗವಿಸಿದ್ದಪ್ಪ ಉಪ್ಪಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದವರು. ತಂದೆ ದ್ಯಾಮಣ್ಣ ತಾಯಿ ಹುಚ್ಚಮ್ಮ. ಡಿಪ್ಲೊಮಾ ಇನ್ ಲ್ಯಾಬ್ ಟೆಕ್ನಾಲಜಿ ಪದವೀಧರರು. ಆರೋಗ್ಯ ಇಲಾಖೆಯ ಕಿರಿಯ ವೈದ್ಯಕೀಯ ಪ್ರಯೋಗಶಾಲೆ ತಜ್ಞರಾಗಿ ಕುಷ್ಟಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಓರೆ-ಕೊರೆಗಳು, ಪ್ರೀತಿ-ಪ್ರೇಮ, ಸ್ನೇಹ, ಸಂಬಂಧಗಳ ಕುರಿತು ಸರಳವಾದ ಚುಟುಕು, ಹನಿಗವನಗಳನ್ನ ರಚಿಸುತ್ತಿದ್ದಾರೆ. ʻಗವಿ ಸವಿʼ ಇವರ ಮೊದಲ ಹನಿಗವನ ಸಂಕಲನ. ...
READ MORE