ಡಾ. ಎಂ.ಜಿ. ದೇಶಪಾಂಡೆ ಅವರು ರಚಿಸಿದ ಕೀರ್ತನೆಗಳ ಸಂಕಲನ-ಧವಳ ಗಿರಿ. ಹರಿದಾಸರ ಕೀರ್ತನೆಗಳ ಮಾದರಿಯನ್ನು ಹೋಲುತ್ತವೆ. ಒಟ್ಟು 112 ಕೀರ್ತನೆಗಳಿವೆ. ಸನ್ನಿಧಿ, ಬುತ್ತಿಗಂಟು, ರಾಧೆಗೋವಿಂದ ,ಮೋಹಾನಂದ ,ಕೃಪಾಸಾಗರ ,ವಿರಾಗ, ಆತ್ಮವಿಶ್ವಾಸ, ಒಡನಾಟ, ನಿನ್ನ ಲೀಲೆ, ಅಪೇಕ್ಷೆ ಉಪೇಕ್ಷೆ ,ಬೆಳಗಿತ್ತು ,ಚೈತನ್ಯ, ಪರಮಾನಂದ, ದೇವ ದರ್ಶನ ಸೇರಿದಂತೆ ಪ್ರಾಸಬದ್ಧವಾದ ಗೀತೆಗಳು ಹಾಡಲು ಅನುಕೂಲವಾಗುವಂತೆ ಇವೆ ಎಂದು ಕವಿಗಳು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE