ದೇಶಾಂಶ ಹುಡಗಿ

Author : ಭೀಮಾಶಂಕರ ಬಿರಾದಾರ

Pages 184

₹ 180.00




Year of Publication: 2023
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ
Address: ಸರಸ್ವತಿ ಗೋದಾಮು, ಕಲಬುರಗಿ- 585101
Phone: 9448124431

Synopsys

‘ದೇಶಾಂಶ ಹುಡಗಿ’ ಭೀಮಾಶಂಕರ ಬಿರಾದಾರ ಅವರ ಸಂಪಾದಿತ ಕೃತಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಈ 'ವಾಚಿಕೆ' ಪ್ರಕಾರ ತೀರ ಅಪರೂಪವಾಗಿರುವುದರಿಂದ ಇದರ ಬಗ್ಗೆ ಸರಿಯಾದ ಸ್ಪಷ್ಟವಾದ ಪರಿಕಲ್ಪನೆ ಇಲ್ಲದೆ ಇರುವುದರಿಂದ 'ವಾಚಿಕೆ` ಓದುಗರಿಗೆ ಹೊಸತು ಎನಿಸುತ್ತದೆ. ಸಾಹಿತಿಯೊಬ್ಬರನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಕೊಡುವ ಕಾರ್ಯ ಇದಾಗಿದೆ. ಕಥೆ, ಕಾವ್ಯ, ನಾಟಕ, ಪ್ರಬಂಧ, ಹಾಸ್ಯ, ವಿಡಂಬನೆ ಮುಂತಾದ ಸೃಜನಶೀಲ ಅವರ ಸಮಗ್ರ ಸಾಹಿತ್ಯ ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಂಡು ಸಂಕ್ಷಿಪ್ತಗೊಳಿಸಿ ಕೊಡುವಿಕೆಯೇ ವಾಚಿಕೆಯಾಗಿದೆ. ಸಾಮಾನ್ಯವಾಗಿ ನಾವು ಸ್ಯಾಂಪಲೀಕರಣ ಸಾಹಿತ್ಯವೆಂದು ಹೇಳಬಹುದು. ಅಂದರೆ ಓದುಗನಿಗೆ ಶ್ರೇಷ್ಠ ಸಾಹಿತಿಯೊಬ್ಬನ ಸಮಗ್ರ ಸಾಹಿತ್ಯ ಪರಿಚಯಿಸುವಿಕೆ, ಸ್ಯಾಂಪಲೀಕರಣ ಅಥವಾ ವಾಚಿಕೆಯೆಂದು ಕರೆಯೋಣ. ಈ ವಾಚಿಕೆಗಳನ್ನು ಈ ಹಿಂದೆ 'ಪ್ರಶಸ್ತಿ'ಗಳೆಂದು ಕರೆಯಲಾಗಿದೆ. ಅದೇ ಹೆಸರಲ್ಲಿ ಮುದ್ರಣಗೊಂಡಿದ್ದು ನಮ್ಮ ಗಮನಕ್ಕೆ ಬರುತ್ತವೆ. ಒಟ್ಟಾರೆ ಹೇಳುವುದಾದರೆ ವಾಚಿಕೆಗಳು ಸಾಹಿತ್ಯದ ಸತ್ವಯುತವಾದ ಸಂಗ್ರಹದ ಭಾಗಗಳಾಗಿವೆ. ಓದುಗರನ್ನು ಸಾಹಿತ್ಯದತ್ತ ಆಕರ್ಷಿಸಲು ಈ ವಾಚಿಕೆಗಳು ಹೆಚ್ಚು ಉಪಯುಕ್ತವಾಗಿವೆ. ಒಂದು ಕಾಲದಲ್ಲಿ ವಾಚಿಕೆಯೆಂದರೆ ಮೌಖಿಕ ಪರಂಪರೆಯಿಂದ ಸುರಕ್ಷಿತವಾಗಿ ಉಳಿಸಿ ಬೆಳೆಸಿಕೊಂಡು ಬಂದ ಲಿಖಿತ ಸಾಹಿತ್ಯವೆಂಬ ಅರ್ಥ ಬರುತ್ತದೆ.

About the Author

ಭೀಮಾಶಂಕರ ಬಿರಾದಾರ

ಭೀಮಾಶಂಕರ ಬಿರಾದಾರ ಅವರು ಮೂಲತಃ ಕಲಬುರಗಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನ್ನಡ ಸಾಹಿತ್ಯ ಸಂಚಯ, ದೇಶಾಂಶ ಹುಡಗಿ ...

READ MORE

Related Books