‘ದೀಪಿಕಾ ಕೃತಿಯು’ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ಭಾವಗೀತೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಕೃತಿಯು ಭಾವಗೀತೆಗಳ ಸಂಕಲನವಾಗಿದ್ದು, ಇಲ್ಲಿ ಕವಿ ವಿಚಾರಗಳನ್ನು ಭಾವನಗೆಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಹೆಣ್ಣಿನ ತುಮುಲಗಳನ್ನು ಭಿನ್ನವಾಗಿ ಕಟ್ಟಿಕೊಟ್ಟು, ಪ್ರತಿಯೊಂದು ಪದಗಳಲ್ಲಿಯೂ ಭಾವನೆಗಳನ್ನು ಬಿತ್ತರಿಸಿದನ್ನು ಕಾಣಬಹುದು.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...
READ MORE