ವರ್ತಮಾನದ ತಲ್ಲಣಗಳಿಗೆ ತೀವ್ರವಾಗಿ ತುಡಿಯುವ, ಸದಾ ಜೀವಪರತೆಯನ್ನು ಉಸಿರಾಡುವ, ಒಲವಿನ ಬಳ್ಳಿಯ ಮೇಲೆ ಹೂ ಅರಳಿಸಲು ಸದಾ ಯತ್ನಿಸುತ್ತಲೇ ಇರುವ ಕವಿ ಶಶಿ ಸಂಪಳ್ಳಿ. ಮುಗ್ಧ ಬೆರಗು ಅವರ ಕವಿತೆಗಳಲ್ಲಿ ಕಂಡು ಬರುವ ಸಹಜ ಸೌಂದರ್ಯ.
’ಚರಿತ್ರೆಯ ಜಾಡಿನಾಚೆಗೆ’ ಕೃತಿಯ ಕುರಿತು ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡಿರುವ ಕತೆಗಾರ, ಅನುವಾದಕ ಎಸ್. ಗಂಗಾಧರಯ್ಯ “...ಈ ಕವಿತೆಗಳ ಒಡನಾಟ ಬಿರುಬಿಸಿಲಿನಲ್ಲಿ ಹರಿವ ಹೊಳೆಯ ತಂಪಿನಲ್ಲಿ ಕಾಲುಬಿಟ್ಟು ಕೂತಂಥ ಅನುಭವ ಕೊಡುತ್ತದೆ. ಕದ್ದಿಂಗಳ ರಾತ್ರಿಯಲ್ಲಿ ಅರಳಿದ ಕಾಡುಮಲ್ಲಿಗೆಯ ಕಂಪು ನೀಡುತ್ತದೆ…” ಎಂದಿದ್ದಾರೆ. ಶಶಿಯವರ ಕವಿತೆಗಳ ಚಂದವನ್ನು ಬಣ್ಣಿಸಲು ಇದಕ್ಕಿಂತ ಉತ್ತಮ ಪದಗಳು ಬೇಕಿಲ್ಲ.
ಶಶಿ ಸಂಪಳ್ಳಿ ಅವರು ಸಾಗರ ತಾಲೂಕಿನ ಪುಟ್ಟ ಸಂಪಳ್ಳಿಯಲ್ಲಿ ಜನಿಸಿದರು. ಕುವೆಂಪು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ವಿಜಯ ಕರ್ನಾಟಕ, ಪ್ರಜಾವಾಣಿ , ಕನ್ನಡ ಪ್ರಭ, ದಿ ಸಂಡೆ ಇಂಡಿಯನ್ ಪತ್ರಿಕೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಪರಿಸರ ಅಭಿವೃದ್ಧಿ, ಗ್ರಾಮೀಣ, ಕೃಷಿ ಹಾಗು ರಾಜಕೀಯ ವಿಶ್ಲೇಷಣೆ ಮೊದಲಾದ ಕ್ಷೇತ್ರಗಳಲ್ಲಿ ಇವರು ಪರಿಣತಿಯನ್ನು ಹೊಂದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ-ಕೃಷಿ ಬಿಕ್ಕಟ್ಟುಗಳು, ಡಾ.ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಕುರಿತು ಲೇಖನಗಳನ್ನು ರಚಿಸಿದ್ದಾರೆ. ಕೆಲವು ಸಾಹಿತ್ಯ ವಿಮರ್ಶನಾ ಲೇಖನಗಳನ್ನ ಕೂಡ ರಚಿಸಿದ್ದಾರೆ. ವನ್ಯ ...
READ MORE