ಶಶಿ ಸಂಪಳ್ಳಿ ಅವರು ಸಾಗರ ತಾಲೂಕಿನ ಪುಟ್ಟ ಸಂಪಳ್ಳಿಯಲ್ಲಿ ಜನಿಸಿದರು. ಕುವೆಂಪು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ವಿಜಯ ಕರ್ನಾಟಕ, ಪ್ರಜಾವಾಣಿ , ಕನ್ನಡ ಪ್ರಭ, ದಿ ಸಂಡೆ ಇಂಡಿಯನ್ ಪತ್ರಿಕೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಪರಿಸರ ಅಭಿವೃದ್ಧಿ, ಗ್ರಾಮೀಣ, ಕೃಷಿ ಹಾಗು ರಾಜಕೀಯ ವಿಶ್ಲೇಷಣೆ ಮೊದಲಾದ ಕ್ಷೇತ್ರಗಳಲ್ಲಿ ಇವರು ಪರಿಣತಿಯನ್ನು ಹೊಂದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ-ಕೃಷಿ ಬಿಕ್ಕಟ್ಟುಗಳು, ಡಾ.ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಕುರಿತು ಲೇಖನಗಳನ್ನು ರಚಿಸಿದ್ದಾರೆ. ಕೆಲವು ಸಾಹಿತ್ಯ ವಿಮರ್ಶನಾ ಲೇಖನಗಳನ್ನ ಕೂಡ ರಚಿಸಿದ್ದಾರೆ. ವನ್ಯ ಜೀವಿ ಛಾಯಾಗ್ರಹಣ ಆಸಕ್ತಿಯ ಕ್ಷೇತ್ರವಾಗಿದೆ.