ಭೂಮಿ ಬಾನಿನ ನಡುವೆ ಲತಾ ಗುತ್ತಿಯವರ ಕವನ ಸಂಕಲನ. ವಿಮಾನ ಯಾನದಲ್ಲಿ ಪ್ರಕೃತಿಯ ಚಿತ್ತಾರಗಳೂ ವಿಶಿಷ್ಟತೆಯನ್ನು ಹಾಗೂ ನೀಲಿಕಾಡು, ಆಕಾಶಭಿತ್ತಿ ಮೇಲೆ ಸಂಚರಿಸುವ ವಿಮಾನಯಾನವನ್ನು ಕವಿಯತ್ರಿ ಕವನಗಳಲ್ಲಿ ಹಿಡಿದಿಟ್ಟಿದ್ದಾರೆ. ಭೂಮಿ, ಆಕಾಶ, ಇವುಗಳ ನಡುವಿನ ಬದುಕೆಲ್ಲ ಲತಾ ಕೆಣಕುವಂತೆ ತೋರುತ್ತದೆ. ಹಳ್ಳಿಯ, ನಗರದ, ಮಹಾನಗರದ ಪರಿಸರವೆಲ್ಲ ಅವರ ಕವಿತೆಯ ವಸ್ತುವಾಗಿ, ಒಮ್ಮೊಮ್ಮೆ ಸವಾಲಾಗಿ ನಿಲ್ಲುವುದನ್ನು ಕಾಣಬಹುದಾಗಿದೆ. ಇವರ ಈವರೆಗಿನ ಸಮಗ್ರ ಕವನ ಸಂಕಲನ ಭೂಮಿ-ಬಾನಿನ ನಡುವೆ ಸಹೃದಯರನ್ನು ಸೆರೆಹಿಡಿಯುವ ಕಾವ್ಯ.
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MORE