ವೀಣಾ.ಪಿ ಅವರ ಚೊಚ್ಚಲ ಕೃತಿ ’ಭಾವೋದ್ದೀಪ್ತಿ’ ಕವನ ಸಂಕಲನ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ದೊಡ್ಡರಂಗೇಗೌಡ, ’ಈ ಬರಹಗಾರ್ತಿ ಮುಗ್ಧೆ; ಭಾವನೆಗಳೂ ಮುಗ್ಧ; ಆದರೆ ಒಳ ಹೊಕ್ಕು ನೋಡಿದರೆ (ಓದಿದರೆ) ಇಲ್ಲಿಯ ಕಾವ್ಯ ಹೂರಣದಲ್ಲಿ ಚಿಂತನಶೀಲ ಅಂಶಗಳಿವೆ. ಆ ಕಾರಣ ಕವಯತ್ರಿಯ ಕಾವ್ಯವು ಸ್ವಾಗತಾರ್ಹವಾಗಿದೆ.’ ಎಂದು ಪ್ರಶಂಸಿದ್ದಾರೆ. ಜೊತೆಗೆ ಈಕೆಯ ಕವಿತೆಗಳನ್ನು ಆಯ್ಕೆ ಮಾಡುವ ಮೂಲಕ ನಮ್ಮ ನೆಚ್ಚಿನ “ಕನ್ನಡ ಪುಸ್ತಕ ಪ್ರಾಧಿಕಾರ” ಒಳ್ಳೆಯ ಕೆಲಸ ಮಾಡಿದೆ. ಯಾವತ್ತೂ ಕಾವ್ಯ ಹೃದಯಾಂತರಾಳದ ಭಾವ ಸರಿತೆ. ಅದು ನಿರಂತರವಾಗಿ, ನಿರುಂಬಳವಾಗಿ ಹರಿಯಬೇಕು. ಅದು ಒಂದು ದಿನದಲ್ಲಿ ಒಂದು ಪದ್ಯದಲ್ಲಿ ಮಾಡಿ ಮುಗಿಸುವ ಕಾರ್ಯವಲ್ಲ. ಕವಿ-ಕರ್ಮ ಒಂದು ತಪಸ್ಸು. ಬದುಕು ಒಂದು ಅಗಣಿತ, ಅನುಪಮ, ಅನನ್ಯ-ಭಾವ ಸರಸ್ಸು! ಅಲ್ಲಿ ಬದುಕಿರುವಾಗ ನಾವು ಮಾಡಬಹುದಾದ ಒಳ್ಳೆಯ ಕೆಲಸ - ಒಂದು ಬೊಗಸೆ ಅನುಭವವನ್ನು ಮೊಗೆದು ಅದಕ್ಕೆ ಸೂಕ್ತ ಅಭಿವ್ಯಕ್ತಿಯ ಚೌಕಟ್ಟು ಹಾಕಿ ನಾಲ್ಕು ಜನ ಸಹೃದಯರ ಗಮನಕ್ಕೆ ತರುವ ಕಾರ್ಯ. ಇಂಥ ಸತ್ಕಾರ್ಯವನ್ನು ನಮ್ಮ ನಲ್ಮೆಯ ಕವಯತ್ರಿ ವೀಣಾ ಪಿ. ಆಗು ಮಾಡಿದ್ದಾರೆ. ಅದೇ ಸಂತೋಷ. ಇನ್ನಷ್ಟು ಮತ್ತಷ್ಟು ರೀತಿಯಲ್ಲಿ ಇವರು ಸೃಜನಶೀಲತೆಯಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ.
ಲೇಖಕಿ ವೀಣಾ ಪಿ., ಪ್ರಭಾಕರ್ ಕೆ.ಎಸ್. ಹಾಗೂ ರೂಪಾ ದಂಪತಿಯ ಪುತ್ರಿ. ಎಂ.ಎ., ಎಂ.ಇಡಿ. ಪದವೀಧರೆ. ಪ್ರಸ್ತುತ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಇತಿಹಾಸ ಉಪನ್ಯಾಸಕಿ. ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಕ್ತನಾಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ. ಲೇಖನ ಹಾಗೂ ಪ್ರಬಂಧಗಳನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದು, ಆ ಸಂಶೋಧನಾ ಬರಹಗಳುಸಂಪಾದಿತ ಹಾಗೂ ನಡಾವಳಿ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಇವರ ಬಿಡಿ ಕವಿತೆಗಳು ಹಾಗೂ ಲೇಖನಗಳು ವಿವಿಧ ಪತ್ರಿಕೆ ಹಾಗೂ ಸಾಹಿತ್ಯಕ ವೆಬ್-ಬ್ಲಾಗ್ಗಳಲ್ಲಿ ಪ್ರಕಟಗೊಂಡಿದ್ದು, ಉತ್ತಮ ಭಾಷಣಗಾರ್ತಿಯೂ ಆಗಿದ್ದು, ಇವರ ಭಾಷಣ ಕಲೆಯನ್ನು ಗುರುತಿಸಿ ...
READ MORE