ಲೇಖಕಿ ವೀಣಾ ಪಿ., ಪ್ರಭಾಕರ್ ಕೆ.ಎಸ್. ಹಾಗೂ ರೂಪಾ ದಂಪತಿಯ ಪುತ್ರಿ. ಎಂ.ಎ., ಎಂ.ಇಡಿ. ಪದವೀಧರೆ. ಪ್ರಸ್ತುತ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಇತಿಹಾಸ ಉಪನ್ಯಾಸಕಿ. ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಕ್ತನಾಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ. ಲೇಖನ ಹಾಗೂ ಪ್ರಬಂಧಗಳನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ್ದು, ಆ ಸಂಶೋಧನಾ ಬರಹಗಳುಸಂಪಾದಿತ ಹಾಗೂ ನಡಾವಳಿ ಗ್ರಂಥಗಳಲ್ಲಿ ಪ್ರಕಟಗೊಂಡಿವೆ.
ಇವರ ಬಿಡಿ ಕವಿತೆಗಳು ಹಾಗೂ ಲೇಖನಗಳು ವಿವಿಧ ಪತ್ರಿಕೆ ಹಾಗೂ ಸಾಹಿತ್ಯಕ ವೆಬ್-ಬ್ಲಾಗ್‌ಗಳಲ್ಲಿ ಪ್ರಕಟಗೊಂಡಿದ್ದು, ಉತ್ತಮ ಭಾಷಣಗಾರ್ತಿಯೂ ಆಗಿದ್ದು, ಇವರ ಭಾಷಣ ಕಲೆಯನ್ನು ಗುರುತಿಸಿ “ಕರುನಾಡು ಸಾಹಿತ್ಯ ಪರಿಷತ್ತು, ವಿಜಯಪುರ ಜಿಲ್ಲಾ ಘಟಕ” ಹಾಗೂ “ಸರ್ವೋದಯ ಸೌಹಾರ್ದ ವೇದಿಕೆ”ಯು 2020ನೇ ವರ್ಷದಲ್ಲಿ ರಾಜ್ಯ ಮಟ್ಟದ “ಸರ್ವೋದಯ ರತ್ನ ಪ್ರಶಸ್ತಿ” ನೀಡಿ ಗೌರವಿಸಿದೆ. ಇವರ ಪ್ರಥಮ ಕವನ ಸಂಕಲನ “ಭಾವೋದ್ದೀಪ್ತಿ’.