‘ಭಾವಶ್ರುತಿ’ ಕೃತಿಯು ಸುರಭಿಲತಾ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ; ಮನದ ಭಾವನೆಗಳನ್ನು ಬರಿಯ ಮಾತಲ್ಲಿ ಹೇಳಲು ಕೆಲವಷ್ಟೇ ಸುಲಭದ ಮಾತುಗಳು ಸಾಕು. ಅದನ್ನೇ ವಿಶೇಷವಾಗಿ ಒಬ್ಬ ಪ್ರೇಮಿ ಅದನ್ನ ತನ್ನ ಸ್ತ್ರೀಯರಿಗೆ ಬರೆಯುವ ಪ್ರೇಮ ಪತ್ರದ ಸಾಲುಗಳಿಗಾಗಿ ಚಡಪಡಿಸುವ ಅಕ್ಷರಗಳ ಅನ್ವೇಷಣೆಯ ತುಡಿತ ಆತನ ಅಂತರಾಯತ್ಮಕ್ಕೇ ಗೊತ್ತು. ಹಾಗೆಯೇ ತನ್ನ ಮನದ ವಿಧ ವಿಧದ ಭಾವನೆಗಳನ್ನು ಕವಿತೆಯಾಗಿಸುವ ಕವಿಯ ಆ ಏಕಾಗ್ರತೆಯ ಸಮಯ, ಮೌನದಾ ಮೈಮರೆಯುವ ಆ ಕ್ಷಣಗಳು ಕಾಣುವುದೇ ಚಂದ. ಚಂದದ ಕನಸುಗಳ ಬಿತ್ತಬೇಕು. ಸುಂದರ ಭಾವನೆಯನ್ನು ಬಡಿದೇಳಿಸಬೇಕು. ಅನೇಕ ಪಾತ್ರಗಳ ಪರಕಾಯ ಪ್ರವೇಶವಾಗಬೇಕು. ಆ ಕ್ಷಣದಲ್ಲಿ ಮೂಡುವ ಸುಂದರ ಕವಿತಾ ಭಾವನೆಗಳನ್ನು ಹಿಡಿದಿಟ್ಟುಕೊಂಡು ಅವುಗಳನ್ನು ಲಯ, ಪ್ರಾಸಗಳ ಸುಂದರ ಅಕ್ಷರಗಳ ಮೂಲಕ ಚಿತ್ರಿಸಬೇಕು ಎಂದು ಇಲ್ಲಿ ತಿಳಿಸಿದ್ದಾರೆ.
ಸುರಭಿಲತಾ ಅವರು ಮೂಲತಃ ಬೆಂಗಳೂರಿನವರು. ಬರವಣಿಗೆಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಕಾವ್ಯ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೃತಿಗಳು: ಭಾವಶ್ರುತಿ ...
READ MORE