ಲೇಖಕ ವಡ್ಡರ್ಸೆ ಪ್ರಕಾಶ ಆಚಾರ್ಯರ ಕವನ ಸಂಕಲನ ‘ಭಾವದ ಬೆನ್ನೇರಿ’. ಈ ಕೃತಿಗೆ ಮುನ್ನುಡಿ ಬರೆದ, ಜೆ.ಸಿ. ನರೇಂದ್ರ ಕುಮಾರ್ ಕೋಟ, ‘ಭಾವಗಳ ಗುಂಜನಗಳನ್ನು ತೋರಣವಾಗಿ ನೀಡಿದ್ದಾರೆ. ಗಂಭೀರವಾಗಿ ಪ್ರಶ್ನೆಗಳು ಹೆಡೆ ಎತ್ತಿ ನಿಲ್ಲುತ್ತವೆ. ಅವರು ಬಳಸುವ ಕ್ಲೀಷೆ, ಪದಗಳ ಪುಂಜ, ನುಡಿ ಚಿತ್ರಣ, ಗಟ್ಟಿಪದಗಳ ತಹತಹಿಕೆ ನುಡಿ ಜಾತ್ರೆಯನ್ನು ನೀಡುತ್ತವೆ. ಸಮಾಜದ ಓರೆ-ಕೋರೆಗಳಿಗೆ ಕನ್ನಡಿಯಾಗುವ ದನಿಯಾಗುವ ಕವಿತೆಗಳು ಕೆನೆಗಟ್ಟಿವೆ.ಹೀಗೆ ಪದಗಳ ಮೆರವಣಿಗೆಯೊಂದಿಗೆ ಸಾಗುವ ಈ ಕವನ ಸಂಕಲನ ಸಂಚಲನ ಮೂಡಿಸುತ್ತದೆ’ ಎಂದು ಪ್ರಶಂಸಿದ್ದಾರೆ.
ಲೇಖಕ ವಡ್ಡರ್ಸೆ ಪ್ರಕಾಶ ಆಚಾರ್ಯ ಇವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆಯವರು. ತಂದೆ-ಸುಬ್ರಾಯ ಆಚಾರ್ಯ, ತಾಯಿ- ಭವಾನಿ. ಎಂ.ಎ ಮತ್ತು ಬಿ.ಎಡ್ ವಿದ್ಯಾಭ್ಯಾಸ ಪೂರೈಸಿರುವ ಅವರು ಪ್ರಸ್ತುತ ಡ್ಯುಯಲ್ ಸ್ಟಾರ್ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಬಳಿ ಯಿಂದ ರಾಷ್ಟ್ರ ಮಟ್ಟದ ವರೆಗೆ ಕವಿ ಗೋಷ್ಟಿ ಯಲ್ಲಿ ಭಾಗವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದೊಂದಿಗೆ ಸಾಹಿತ್ಯಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ವಡ್ಡರ್ಸೆ ಪ್ರಕಾಶ ಆಚಾರ್ಯ ಅವರು ಪಿಸುನುಡಿದ ಅಂತರಂಗ, ಮೌನ ನಿನಾದ, ಭಾವ ನಿನಾದ, ಒಡಲ ಪ್ರೀತಿ ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಧ್ವನಿ ಸುರುಳಿ ...
READ MORE