ಲೇಖಕ ವಡ್ಡರ್ಸೆ ಪ್ರಕಾಶ ಆಚಾರ್ಯ ಇವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆಯವರು. ತಂದೆ-ಸುಬ್ರಾಯ ಆಚಾರ್ಯ, ತಾಯಿ- ಭವಾನಿ. ಎಂ.ಎ ಮತ್ತು ಬಿ.ಎಡ್ ವಿದ್ಯಾಭ್ಯಾಸ ಪೂರೈಸಿರುವ ಅವರು ಪ್ರಸ್ತುತ ಡ್ಯುಯಲ್ ಸ್ಟಾರ್ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಬಳಿ ಯಿಂದ ರಾಷ್ಟ್ರ ಮಟ್ಟದ ವರೆಗೆ ಕವಿ ಗೋಷ್ಟಿ ಯಲ್ಲಿ ಭಾಗವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದೊಂದಿಗೆ ಸಾಹಿತ್ಯಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ವಡ್ಡರ್ಸೆ ಪ್ರಕಾಶ ಆಚಾರ್ಯ ಅವರು ಪಿಸುನುಡಿದ ಅಂತರಂಗ, ಮೌನ ನಿನಾದ, ಭಾವ ನಿನಾದ, ಒಡಲ ಪ್ರೀತಿ ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಧ್ವನಿ ಸುರುಳಿ - ಭಾವ ನಿನಾದ (ಭಾವಗೀತೆ ),ಅರ್ಕಗಣಪನ ವೈಭವ (ಭಕ್ತಿ ಗೀತೆಗಳು ).
ಶಿಕ್ಷಣ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ 2015-16ನೇ ಸಾಲಿನ "ಆದರ್ಶ ಶಿಕ್ಷಕ" ಪ್ರಶಸ್ತಿ, ರಾಜ್ಯಮಟ್ಟದ ಗಾಂಧೀ ವಿವೇಕಾನಂದ "ಸದ್ಭಾವನಾ ಪ್ರಶಸ್ತಿ - 2019" ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.