ಕವಿ ದಿವಾಕರ ಡೋಂಗ್ರೆ ಅವರ ‘ಭಾವ ಮೌಕ್ತಿಕ’ ಕೃತಿಯು ಕವನಸಂಕಲನವಾಗಿದೆ. ಜೀವನ ಒಂದು ಅನುಭೂತಿ. ಅದರ ಸೂತ್ರಗಳು ಸರ್ವಮಾನ್ಯವಾದಾಗ ಅದು ಒಂದು ದರ್ಶನ. ಜೀವ ಭಾವಗಳ ಹೊರತಾಗಿ ಬದುಕೆಲ್ಲಿಯದು? ನಮ್ಮ ಅನುಭವಗಳೆಲ್ಲ ಅಕ್ಷರರೂಪಿಗಳಾದಾಗ ಅದು ಸಾಹಿತ್ಯ. ಕಾವ್ಯ ಸಾಹಿತ್ಯದ ಪ್ರಕಾರಗಳಲ್ಲೊಂದು. ಕವಿತೆಯೊಂದಕ್ಕೆ ಅಂದು ಸಿಗುವುದು ಅದರ ನಿರ್ಮಿತಗೊಳಪಟ್ಟ ಸೂತ್ರಗಳಲ್ಲಿ ಅದು ಬಂಧಿತವಾದಾಗ ಎಂದು ಲೇಖಕರು ಇಲ್ಲಿ ಹೇಳುತ್ತಾರೆ. ‘ಭಾವ ಮೌಕ್ತಿಕ’ ದ ಇಲ್ಲಿಯ ನನ್ನ ರಚನೆಗಳು ಅಂತಹ ಸೂತ್ರಗಳಿಗೊಳಪಡದೆ ಮುಕ್ತವಾಗಿ ಇವೆ. ಇಲ್ಲಿ ಭಾವ ಅನುಭಾವಗಳಿಗಷ್ಟೇ ಪ್ರಾಧಾನ್ಯತೆ. ಇಲ್ಲಿನ ರಚನೆಗಳಲ್ಲಿ ಆಧ್ಯಾತ್ಮಿಕತೆ, ಬದುಕನ್ನು ವಿಭಿನ್ನ ದೃಷ್ಟಿಕೋನದಿಂದ ಕಂಡ ಸೊಬಗು, ಜೀವನದ ವಾಸ್ತವತೆ, ಕೊನಗೊಂದಿಷ್ಟು ಸುಜ್ಞಾನದಿಂದ ಕಂಡ ಅರಿವು-ಇವೆಲ್ಲವು ಇಲ್ಲಿ ,ಮೇಳೈಸಿವೆ ಎನ್ನುತ್ತಾರೆ ಲೇಖಕ ದಿವಾಕರ ಡೋಂಗ್ರೆ.
ಕವಿ ದಿವಾಕರ ಡೋಂಗ್ರೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ಬರವಣಿಗೆ, ನಟನೆ, ಸಂಗೀತ ರಂಗಭೂಮಿ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು, ಶುಭೋದಯ ಪ್ರಿಂಟ್ ಹಾಗೂ ಪ್ರಕಾಶನದ ಮಾಜಿ ಮಾಲಿಕರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕೃತಿಗಳು: ಭಾವ ಮೌಕ್ತಿಕ (ಕವನ ಸಂಕಲನ) ...
READ MORE