‘ಬೇವು ಬೆಲ್ಲ’ ಮಾಲತೇಶ ಮರಳಿಹಳ್ಳಿ ಅವರ ಕವನಸಂಕಲನವಾಗಿದೆ. ಶಿಕ್ಷಕ ಸಾಹಿತಿ, ಶ್ರೀ ಮಾಲತೇಶ ಮರಳಿಹಳ್ಳಿ ಅವರ ಬೇವು ಬೆಲ್ಲ ಕವನದ ಸಂಕಲನದಲ್ಲಿ ಒಟ್ಟು 63 ಕವಿತೆಗಳಿವೆ. ತುಂಬ ಸರಳವಾಗಿ, ಸಹಜವಾಗಿ ತಮಗನಿಸಿದ್ದನ್ನು ಬರೆದಿರುವ ಕವಿತೆಗಳು ಕವಿಯ ಅಂತರಂಗವನ್ನು ಬಿಚ್ಚಿಟ್ಟಿವೆ. ತನ್ನ ಸುಖ ದುಃಖ ಮಾನಾಪಮಾನಗಳನ್ನೆಲ್ಲ ಭಾವನಾತ್ಮಕವಾಗಿ ಕವಿತೆಗಳ ರೂಪದಲ್ಲಿ ಬರೆದಿದ್ದಾರೆ. ನಿತ್ಯ ಸಮಾಜದಲ್ಲಿ ಕಾಣುವ, ಅನೇಕ ಸಂಗತಿಗಳಿಗೆ ತಣ್ಣನ ಸಿಟ್ಟಿನಲ್ಲಿ ಪ್ರತಿರೋಧಿಸಿದ ಬಹಳಷ್ಟು ಕವಿತೆಗಳು ಇಲ್ಲಿವೆ. ವಿಷಾದ, ನೋವು, ಹತಾಶೆ, ತಳಮಳ ಇವೆಲ್ಲ ಭಾವಗಳು ಇಲ್ಲಿನ ಕವಿತೆಗಳ ಭೂಮಿಕೆಯಾಗಿದೆ.
ಮಾಲತೇಶ ಮರಳಿಹಳ್ಳಿ ಅವರು ಮೂಲತಃ ಹಾವೇರಿ ಜಿಲ್ಲೆಯ ಸವಣೂರಿನವರು. ತಂದೆ ಕರಿಯಪ್ಪ ತಾಯಿ ಶಾಂತವ್ವ. ಬೆಂಗಳೂರು ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಲೇಖಕ. ‘ಬೇವು ಬೆಲ್ಲ’ ಅವರ ಮೊದಲ ಕವನಸಂಕಲನವಾಗಿದೆ. ...
READ MORE