‘ಬೆವರ ಹನಿಯ ಜೀವ’ ಲೇಖಕ ಕಗ್ಗೆರೆ ಪ್ರಕಾಶ್ ಅವರ ಕವನ ಸಂಕಲನ. ಕೃತಿಯ ಕುರಿತು ತಿಳಿಸುತ್ತಾ 1988 ರಲ್ಲಿ ಎಸ್ಎಸ್ಎಲ್ಸಿ ಪಾಸ್ ಮಾಡಿಕೊಂಡು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಲೇ ಓದು ಮುಂದುವರಿಸಿದ ನಾನು, 2024ರ ಕಾಲಮಾನಕ್ಕೆ ಪತ್ರಿಕೋದ್ಯಮ, ಸಾಹಿತ್ಯ, ಅಕಾಡೆಮಿಕ್ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡುತ್ತಾ ಲೇಖಕ-ಪತ್ರಕರ್ತನಾಗಿದ್ದು, ಪ್ರಕಾಶಕ ಆಗಿದ್ದು ನನ್ನ ಹೆಚ್ಚುಗಾರಿಕೆಯಲ್ಲ; ಜೀವನದ ಏಳು-ಬೀಳುಗಳ ನಡುವೆ ಕುಗ್ಗದೆ ಹಿಗ್ಗದೆ ಬದುಕು ಕಟ್ಟಿಕೊಂಡಿದ್ದು ಮಾತ್ರ ಸಾಮಾನ್ಯ ಸಂಗತಿಯಂತೂ ಅಲ್ಲ. ಆ ಎಲ್ಲ ಬದುಕು-ಬವಣೆಗಳ ಪ್ರತಿಫಲವೇ ಇಲ್ಲಿನ ಕವಿತೆಗಳು. ಈ ಕವಿತೆಗಳು ನಿಮ್ಮ ಜೊತೆ ಮಾತಾಡುತ್ತವೆ. ಇವು ಬದುಕಿನ ಜೀವಂತಿಕೆಯ ಕವಿತೆಗಳು. ಈ ಕವಿತೆಗಳಲ್ಲಿ ಅಂತ್ಯ ಪ್ರಾಸ ಕೂಡ ಸರಾಗವಾಗಿ ಹರಿದು ಬಂದಿದೆ. ಇಲ್ಲಿನ ಎಲ್ಲ ಕವಿತೆಗಳು ಸರಳವಾಗಿ ಕಂಡರೂ ಸಂಕೀರ್ಣಮಯಗೊಂಡಿವೆ. ಕಾವ್ಯದ ಆಳಕ್ಕೆ ಇಳಿಯುತ್ತಾ ಹೋದ ಹಾಗೆ ಒಂದು ಅಮೂರ್ತ ಚಿತ್ರದಂತೆ ಹೊಸಹೊಸ ಹೊಳವುಗಳನ್ನು ಬಿಚ್ಚಿಡುವ ಇಲ್ಲಿನ ಕವಿತೆಗಳು ಚಲನಶೀಲವಾಗಿವೆ. ಯಾವ ಕವಿತೆಗಳಲ್ಲೂ ಜಡತ್ವ ಕಾಡದೆ ಲವಲವಿಕೆಯಿಂದ ಓದಿಸಿಕೊಳ್ಳುತ್ತವೆ ಎಂಬುದು ನನ್ನ ಭಾವನೆ. ಬಹುತೇಕ ಎಲ್ಲ ಕವಿತೆಗಳಲ್ಲೂ ಪ್ರಾಸಪ್ರಿಯತೆ ಕಂಡು ಬರುವ ಮೂಲಕ ಪದ್ಯಗಳಿಗೆ ಮೆರಗು ದಕ್ಕಿದೆ. ಮನುಷ್ಯ ಸಂಬಂಧ ಹಾಗೂ ಕೌಟುಂಬಿಕ ವಿಚಾರವಷ್ಟೇ ಅಲ್ಲ; ಪರಿಸರ, ಸುತ್ತಮುತ್ತಲ ವಾತಾವರಣ, ಪ್ರಕೃತಿ-ಪುರುಷರ ನಡುವಿನ ವಾಸ್ತವಿಕ ಅಂಶಗಳನ್ನು ಕವಿತೆಗಳ ಮೂಲಕ ಬಿಚ್ಚಿಡುತ್ತಾ ಹೋಗಿದ್ದೇನೆ. ಇಷ್ಟು ಸಾಕು. ಇನ್ನು ನೀವುಂಟು ಈ ಕವಿತೆಗಳುಂಟು. ನಿಮ್ಮ ಮುಕ್ತ ಮನಸ್ಸಿನ ಅಭಿಪ್ರಾಯಗಳನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...
READ MORE