ಬೆಟ್ಟಗುಡ್ಡಗಳ ಬೋಗುಣಿಯಲ್ಲಿ, ಕವಿ ಎಂ. ವೆಂಕಟಸ್ವಾಮಿ ಅವರ ಕವನ ಸಂಕಲನ. ಚಿಂತಕ ಕೋಟಿಗಾನಹಳ್ಳಿ ರಾಮಯ್ಯ. ಅವರು ಈ ಕೃತಿಗೆ ಬೆನ್ನುಡಿ ಬರೆದು ‘ಯಾವತ್ತೂ ತುಟಿ ಮೀರದ ಮಾತು; ತುಟಿ ಕಚ್ಚಿ ಬದುಕುವ ಛಲ... ಅದರಾಚೆಗೂ ಹುಗಿದು ಹೋಗಿರುವುದೇನನ್ನೋ ಹುಡುಕುವ ತುಡಿತ... ಇದು ಈ ವೆಂಕಟಸ್ವಾಮಿ. ಆದರೇಕೋ ಈ ವೆಂಕಟಸ್ವಾಮಿ ಇತ್ತ ದಸಂಸದ ತೆಕ್ಕೆಗೂ ದಕ್ಕದೆ, ಅತ್ತ ಬಂಡಾಯದ ಬಿರುಗಾಳಿಯ ಚೀರಾಟದಲ್ಲೂ ಕರಗಿಹೋಗದೆ ಆಮೆಯಂತೆ ಕತ್ತನ್ನು ಒಳಗೆಳೆದುಕೊಂಡು ತನ್ನೊಳಗೆ ನೋಡಿಕೊಳ್ಳುತ್ತಾ... ಅಗತ್ಯಬಿದ್ದಾಗ ಹೊರಹಾಕಿ... ಬೆಚ್ಚಿಬೆರಗಾಗಿ ಮತ್ತೆ ಒಳಗೆಳೆದುಕೊಳ್ಳುತ್ತಾ... ಹೀಗೆ ಬರೆದರು. ಅವರು ಬರೆದ ಎಲ್ಲವನ್ನೂ ಗಮನಿಸಿದಾಗ ಥಟ್ಟನೆ ಸೆಳೆಯುವುದು ಪದ್ಯ ಕಟ್ಟುವಲ್ಲಿನ ಅವರ ಪ್ರಾಮಾಣಿಕತೆ ಪರಿಶ್ರಮ, ಬೆರಗು ತರುವ ಮುಗ್ಧ ಪ್ರತಿಮಾಲೋಕ, ಸಮಕಾಲೀನ ಕ್ಲೀಷೆ, ಗೊಂದಲಗಳನ್ನು ಮೀರಿದ ವಸ್ತು... ವಿನ್ಯಾಸ, ಹೊರ ಒತ್ತಡಗಳನ್ನು ಕೇರು ಮಾಡದೆ ತನಗನ್ನಿಸಿದ್ದನ್ನು ಕವಿತೆ ಮಾಡುವ ಕಳಿಕಳಿ... ಇವು ಕಾವ್ಯದಲ್ಲಿ ತನ್ನತನ ಕಂಡುಕೊಳ್ಳಬಯಸುವ ಕವಿಯೊಬ್ಬನ ಜರೂರಿಗಳು. ಈ ಕಾರಣಕ್ಕಾಗಿಯೇ ವೆಂಕಟಸ್ವಾಮಿ ಮುಂದೊಂದು ದಿನ ನೆನಪಿಟ್ಟಿಕೊಳ್ಳುವಂಥ ಕವಿಯಾಗುವ ಸಾಮರ್ಥ್ಯ ಸಾಧ್ಯತೆಯುಳ್ಳವರು. ಇವತ್ತಿನ ಬಹುಪಾಲು ಚಲಾವಣೆಯಲ್ಲಿರುವ ಕವಿಗಳ ಕಾವ್ಯಕ್ಕಿಂತ ಇವರದು ಬೇರೆಯೇ ನಿಲ್ಲುವಂಥ ಕಾವ್ಯ ಎಂದು ಧಾರಾಳವಾಗಿ ಹೇಳಬಹುದು’ ಎಂದು ಪ್ರಶಂಸಿಸಿದ್ದಾರೆ.
ವಿಮರ್ಶೆ 1. ವಿಜ್ಞಾನದ ವಿದ್ಯಾರ್ಥಿ ಎಂ.ವೆಂಕಟಸ್ವಾಮಿ ಹೊರತಂದ `ಬೆಟ್ಟಗುಡ್ಡಗಳ ಬೋಗುಣಿಯಲ್ಲಿ' ಕವನ ಸಂಕಲನದ ಶುರುವಿಗೆ ಕಪ್ಪು ಮನುಷ್ಯರ ಬಗ್ಗೆ, ನೀಗ್ರೋಗಳ ಬಗ್ಗೆ, ಕಪ್ಪುಹುಡುಗಿಯ ಬಗ್ಗೆ ಬರೆದ ಕವನಗಳನ್ನು ಕಂಡ ತಕ್ಷಣ ಯಾವ ಕಾವ್ಯದ್ರವದ ಹ್ಯಾಂಗೋವರ್ ಈ ಕವಿಯನ್ನು ಹೀಗೆ ಬರೆಸುತ್ತಿದೆ ಎಂಬುದು ಹೊಳೆದುಬಿಡುತ್ತದೆ. ಹಾಗಿದ್ದೂ ಬೆಟ್ಟಗುಡ್ಡಗಳ ಬೋಗುಣಿಯಲ್ಲಿ ಎಂಬ ಕವಿತೆಯ ಕೊನೆಯಲ್ಲಿ ತಮ್ಮ ಪೂರ್ವಜರು...`ನೀರುಗಾಳಿ ಜೀವಸೆಲೆ ಕಿರಣಗಳಲ್ಲಿ ಹರಪ್ಪ ಮಹೆಂಜೊದಾರೊ ಗಿಡಬಳ್ಳಿಗಳಲ್ಲಿ ಬೆಟ್ಟಗುಡ್ಡಗಳ ಬೋಗುಣಿಯಲ್ಲಿ’ ಎನ್ನುತ್ತ ತಮ್ಮ ಚರಿತ್ರೆ ಹುಡುಕುವ ಚಿತ್ರದಲ್ಲಿರುವ ಗಾಂಭೀರ್ಯ ಕಂಡರೆ ಈ ಕವಿ ಹಿರಿಯ ದಲಿತ ಕವಿಗಳ ಕುರುಡು ಅನುಕರಣೆ ಮಾಡದೆ ಬೇರೆಡೆ ನಡೆಯ ಹೊರಟಿರುವಂತೆ ಕಾಣುತ್ತದೆ. ಅಲೆಮಾರಿಯಂತೆ ಕಾಣುವ ವೆಂಕಟಸ್ವಾಮಿಯವರ ಕಾವ್ಯ ಲೋಕಕ್ಕೆ ಲಕ್ನೋ, ಕಾಶಿ, ಹಿಮಾಲಯ ಮುಂತಾಗಿ ಹಲವು ದಿಕ್ಕುಗಳಿಂದ ಬಾಹ್ಯವಿವರಗಳು ಹರಿದು ಬಂದು ಈ ಕವಿ ದಲಿತತ್ವದ ಸ್ವಮರುಕದಲ್ಲಿ ಸಿಕ್ಕಿಬೀಳುವುದನ್ನು ತಪ್ಪಿಸುತ್ತದೆ. ಲಕ್ನೋ ಬೀದಿಗಳಲ್ಲಿ ಕಂಡ ಜನ `ನಿಂಬೂ ನೀರಿನಲ್ಲಿ ಗಟಕ್ಕನೆ ಬಿಸಿಲ ನುಂಗುವುದನ್ನು' ಅಥವಾ `ರಾತ್ರಿ ಜೇಬಿನಲ್ಲಿ ಕೈಯಾಕಿ ಚಳಿಯನ್ನು ಹಿಸಕುವುದನ್ನು (!)' ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲರು. ಶಿಷ್ಟ ಮಧ್ಯಮ ವರ್ಗದ ಭಾಷೆಯನ್ನೇ ಬಳಸುವ ವೆಂಕಟಸ್ವಾಮಿ `ಸಿಗ್ನಲ್ಲಾಕಿ', `ಮೋಘಲರಚ್ಚಿದ ಗಿಡಗಳು,' `ಮೊಟ್ಟೆಗಳಾಕುತ್ತಿರಲು' ಎಂಬಂಥ ಕರ್ಕಶ ಪ್ರಯೋಗಗಳನ್ನು ಬಿಡುವುದೊಳ್ಳೆಯದು. ತಮ್ಮ ಮೊದಲ ಸಂಕಲನದ ನಡುಭಾಗದಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬಲ್ಲ ಕೆಲವು ಕವಿತೆಗಳನ್ನಾದರೂ ಬರೆದಿರುವ ವೆಂಕಟಸ್ವಾಮಿ ಭಾಷಿಕ ಪ್ರಯೋಗಗಳ ಬಗ್ಗೆ ಇನ್ನಷ್ಟು ಎಚ್ಚರ ತೋರುವುದು ಕೂಡ ಅಗತ್ಯ
- ಡಾ.ನಟರಾಜ್ ಹುಳಿಯಾರ್, ಲಂಕೇಶ್ ಪತ್ರಿಕೆ, 30.4.19197.
ವಿಮರ್ಶೆ 2. `ಬೆಟ್ಟಗುಡ್ಡಗಳ ಬೋಗುಣಿಯಲ್ಲಿ' ಕವನ ಸಂಕಲನದಲ್ಲಿ ಸಾಮಾಜಿಕ ಅನಿಷ್ಟಗಳ ವಿರುದ್ಧದ ಸೂಕ್ಷ್ಮ ಮನಸ್ಸಿನ ಅಭಿವ್ಯಕ್ತಿ ಇದೆ. ಬಂಡಾಯದ ಶೈಲಿಯಿಂದ ಬಿಡಿಸಿಕೊಂಡಂತಿರುವ ಈ ಕವಿಯ `ಇರುವೆಯ ಜೊತೆ' `ಬೆಟ್ಟಗುಡ್ಡಗಳ ಬೋಗುಣಿಯಲ್ಲಿ' `ಛಸ್ನಾಲಾ' `ವಿಕಾಶ' `ಪುಟ್ಟಹುಡುಗಿ' `ಲಕ್ನೋ ಬೀದಿ' `ಕಣ್ಣ ಕಿಟಿಕಿಗಳಿಂದ' `ಆ ದಿನ ಅವನ ಹೃದಯನಿಂತಾಗ' ಥರದ ಕವಿತೆಗಳಲ್ಲಿ ಹೊಸದೊಂದು ನುಡಿಗಟ್ಟು ಕೇಳಿಸಿದಂತಿದೆ. ದಲಿತ, ಬಂಡಾಯದ ಮಿತಿಗಳನ್ನು ದಾಟಲು ಬಯಸಿದಂತಿರುವ ಈ ಪದ್ಯಗಳಲ್ಲಿ ತಾಳ್ಮೆ, ಸಂಯಮ ಏಕಾಗ್ರತೆ, ವಿಶಾಲ ನೋಟವಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇವರ ಕವನಗಳಲ್ಲಿ ಸಾಂಸ್ಕೃತಿಕ ಚೇತನ ಹೊಂದಿರುವುದು ವಿಶೇಷ. ಅಬ್ಬರವಿಲ್ಲದೆ ಒಂದು ಮೌನದ ಕತೆಯನ್ನು ಬಣ್ಣ ಬಿಡಿಸಿ ಹೇಳುವಂತೆ ಕವಿತೆ ಬರೆಯಲು ತೊಡಗಿರುವ ಈ ಕವಿಯ ಕಾವ್ಯದ ಹಿಂದಿನ ಮನಸ್ಸು ಕಾವ್ಯದ ವಿವಿಧ ಬದ್ಧತೆಗಳಿಗೆ ಅಂಟಿಕೊಂಡಿಲ್ಲದಿರುವುದು ಗಮನ ಸೆಳೆಯುತ್ತದೆ. ಕಣ್ಣಗೆ ಕಟ್ಟುವಂತೆ ಚಿತ್ರಗಳನ್ನು ಭಾಷೆಯಲ್ಲಿ ಬಿಡಿಸುವ ಈ ಪದ್ಯಗಳಲ್ಲಿ ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣವಿದೆ. ಸಾಮಾಜಿಕ ವಿಕೃತಗಳನ್ನು ತೋರುವ ಹಾಗೆಯೇ ನ್ಯಾಯವನ್ನು ಕೇಳುವ ಕ್ರಮ ಇಲ್ಲಿ ಕುತೂಹಲಕರವಾಗಿದ್ದು ಆಸಕ್ತಿ ಕೆರಳಿಸುತ್ತದೆ. ವಾಚ್ಯವಾಗಿ ಹೇಳದೆ ಎಲ್ಲವನ್ನೂ ತನ್ಮತೆಯಿಂದ ಬರೆಯುವ ಗುಣದಿಂದ ಈ ಪದ್ಯಗಳಿಗೆ ಆಪ್ತವಾದ ಖಾಸಗೀತನ ಬಂದಿದೆ. ಒಂದೇ ಬಗೆಯ ಧೋರಣೆ ಹಾಗೂ ಒಂದೇ ವಸ್ತುವಿನ ಸುತ್ತ ಗಿರಿಕಿ ಹೊಡೆಯದೆ ಬೇರೆಬೇರೆ ಸಂಗತಿಗಳನ್ನು ಆವಾಹಿಸಿಕೊಂಡು ಭಿನ್ನಭಿನ್ನ ಅನುಭವಗಳನ್ನು ಕೊಡುವ ಇಂತ ಕವಿತಗಳಿಗೆ ಎಲ್ಲರ ಮನಸ್ಸು ತೆರೆದುಕೊಳ್ಳುತ್ತದೆ. ಇವರ ಮುಂದಿನ ಬರಹ ಸಹಜವಾಗಿಯೇ ಕುತೂಹಲ ಕೆರಳಿಸುತ್ತದೆ
- ಮೊಗಳ್ಳಿ ಗಣೇಶ್, ಕನ್ನಡ ಪ್ರಭ, 27.9.1997.
ವಿಮರ್ಶೆ: 3. This anthology of 50 poems stands out as something different from the general run of poetry writer's. It breaths freshness and refelects the writer's independence of thought and imagination, besides his courage of conviction and its expression. the angles from which he views the scenario and his comprehension are penetrating, particularly, when he focuses on the sense of right and wrong and fairplay, human dignity, inequalities, exploitation of the weaker sections of society, issues of poverty and hunger, pain and deprivation and several other such dark aspects of modernity and process. They are appealing the moving and stir one's conscience. The opening piece, `Shatavarshagala gatha vaibhava' eloquently conveys the agony of the poet's bleeding heart while describing the sweat and toil and frustration of the thousands of the gold digger fraternity in the forbidding depths of the Kolar Gold Fields as it is celeberated its centenary. In the `Negro galeyanige' there is streak of helplessness and pain of racial segregation and their Indian version of the plight of the Dalits struggling to find their identity. There are quite a few poems on the varients of this state of deprivation and outrage on human dignity. one can instinctly share the writer's wavelenght.
So strikingly honed is the sensitivity to everything around him that he dramatizes his perception of the core of even inanimate objects as if they are articulating their own make-up and role and inner structure. Satire is in plentiful supply as when shrine of Kashi is portrayed for the commercialization behind the fade of sancuty. On the poet's large canvas hover the tribes of unscrupulous and wayward politicians in their synthetic avatars. Hypocrites and imposters parading as informers and preachers and believers are ripped off their masks. Some of the Poet's reveries are both serene and joyous as the case may be. The language is simple and easy
- C.M.Ramachandra, The Hindu, 20.8.1997
©2024 Book Brahma Private Limited.