About the Author

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. 

‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ದೊರಕಿದೆ. ಇದೇ ಮಹಾಪ್ರಬಂಧ ಕನ್ನಡದಲ್ಲಿ ``ಕೋಲಾರ ಚಿನ್ನದ ಗಣಿಗಳು'' ಮತ್ತು ಇಂಗ್ಲಿಷ್‍ನಲ್ಲಿ ``Kolar Gold Mines'   ಪುಸ್ತಕಗಳಾಗಿ ಪ್ರಕಟಣೆಯಾಗಿವೆ. ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಬಲ್ಲವರು. ಈಶಾನ್ಯ ಭಾರತ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು (ಇವುಗಳಲ್ಲಿ 5 ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟವಾಗಿವೆ) 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ. 

ಸಂಸ್ಥೆಗಳಲ್ಲಿ ಸದಸ್ಯತ್ವ: ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಗಮದ `ಪರಿಸರ ವಾಹಿನಿ'' (ಕನ್ನಡ-ಇಂಗ್ಲಿಷ್) ಮಾಸ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರು, `Bangaluru Envionmental Trust ಸದಸ್ಯರು,  ಭೂವಿಜ್ಞಾನ ಮತ್ತು ಗಣಿ ಸಂಸ್ಥೆಗಳಿಗೆ ಸಲಹೆಗಾರು, ಆಲ್ ಇಂಡಿಯಾ ಇಂಜಿನಿಯರ್ಸ್ ಅಸೋಸಿಯೇಸನ್ಸ್ ಸದಸ್ಯರು.  

ಭೂವಿಜ್ಞಾನದಲ್ಲಿ ಕೊಡುಗೆ: ಜಿ.ಎಸ್.ಐ.ನಲ್ಲಿ ಹೊಸದಾಗಿ ಆಯ್ಕೆಯಾಗುತ್ತಿದ್ದ ಭೂವಿಜ್ಞಾನಿಗಳಿಗೆ National Geo-Chemical Mapping ಮತ್ತು Hyperspetctral Mapping ಮತ್ತು ಭೂವೈಜ್ಞಾನಿಕ ವಿಷಯಗಳ ಬಗ್ಗೆ ದೇಶದ ತರಬೇತಿ ಕೇಂದ್ರಗಳಲ್ಲಿ ಉಪನ್ಯಾಸ ನೀಡಿದ್ದಾರೆ. 2019ರಲ್ಲಿ Kolar Gold Mining : way forward ದ ಬಗ್ಗೆ ಕಾರ್ಯಾಗಾರದ (ಕೆಜಿಎಫ್‍ನ ಡಾ.ಟಿ.ತಿಮ್ಮಯ್ಯ ಎಂಜಿನಿಯರಿಂಗ್ ಕಾಲೇಜ್‍ನಲ್ಲಿ ) ಮುಖ್ಯ  ಕಾರ್ಯದರ್ಶಿಯಾಗಿದ್ದರು.2013ರಲ್ಲಿ ಮೈಸೂರಿನಲ್ಲಿ ನಡೆದ  ``ಅಂತರರಾಷ್ಟ್ರೀಯ ಜಿಯೋ-ಮ್ಯಾಥೆಮ್ಯಾಟಿಕ್ಸ್ ಜೂನಿಯರ್ ಒಲಿಂಪಿಯಾಡ್'' ನಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕೃತಿಗಳು:  ಕೋಲಾರ ಚಿನ್ನದ ಗಣಿಗಳು (ಚಾರಿತ್ರಿಕ, ಸಾಂಸ್ಕೃತಿಕ, ವೈಜ್ಞಾನಿಕ, ಸಾಮಾಜಿಕ-ಆರ್ಥಿಕ ಅಧ್ಯಯನ), ಸುವರ್ಣ ಕಥನ (ಕೋಲಾರ ಚಿನ್ನದ ಗಣಿಗಳು ಪರಿಷ್ಕೃತ ಕೃತಿ,), ನಮ್ಮ ಭೂಮಿಯ ಹಾಡುಪಾಡು’, ‘ಜಾತಿ ಅಸ್ಪೃಶ್ಯತೆಯ ಸಂಘರ್ಷ’, ‘ಏಳು ಪರ್ವತಗಳು ಒಂದು ನದಿ’ ಅವರ ಪ್ರಮುಖ ಕೃತಿಗಳು. ಅಖಿಲ ಭಾರತ ಪ್ರವಾಸ ಕಥನ ‘ಅಲೆಮಾರಿಯ ಹೆಜ್ಜೆಗಳು’ , ಕವನ ಸಂಕಲನಗಳು: ಬೆಟ್ಟಗುಡ್ಡಗಳ ಬೋಗುಣಿಯಲ್ಲಿ,  ಹಕ್ಕಿಗಳಿಗೆ ವೀಸಾ ಕೊಟ್ಟವರ್‍ಯಾರು? ಈಶಾನ್ಯ ಭಾರತದ ಕವಿತೆಗಳು, ಕಾದಂಬರಿಗಳು: .ರೂಪರಾಶಿಯರು, ಮೂಡಲ ಮರೆಯಲ್ಲಿ,  ನೀ ನಡೆವ ದಾರಿಯಲ್ಲಿ, ಬೆಂಗಳೂರು ವೈ2ಕೆ50, ತಲೆಮಾರುಗಳ ಅಂತರ, ಚಂದ್ರನಿಲ್ಲದ ಆಕಾಶ, ಭೂಮಿ ತೂಕದ ಹುಡುಗ, ಇನ್ನಿಲ್ಲದ ಪ್ರೀತಿ, ವಿಜ್ಞಾನ: ನಮ್ಮ ಹಿಮಾಲಯ, ಭೂಮಿ ಗುಡುಗಿದಾಗ, ಸುನಾಮಿ ಸುತ್ತ, ಚಂಡಮಾರುತ,  ಪೃಥ್ವಿಯ ಯಶೋಗಾಥೆ, ಸರ್. ಚಾರ್ಲ್ಸ್ ಲಯಲ್,  ಮಾನವ ಮಿದುಳೆಂಬ ಮಹಾಅದ್ಭುತ, ಮನುಷ್ಯ ಛಲದ ಹೊಸ ರೂಪಕ, ವಿಮರ್ಶೆ ಕೃತಿ: ಓದುವ ಹಾದಿಯಲ್ಲಿ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲೂ ಇವರ ನೂರಾರು ಲೇಖನಗಳು ಪ್ರಕಟವಾಗಿದ್ದು ರೇಡಿಯೋ ಮತ್ತು ಟಿ.ವಿ ಕಾರ್ಯಕ್ರಮಗಳಲ್ಲೂ ಇವರ ವಿಚಾರಗಳು ಪ್ರಸಾರವಾಗಿವೆ.  2018ರಲ್ಲಿ ಬಂಗಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಂಗ್ಲಭಾಷೆಗೆ ಅನುವಾದ: ಬೆಂಗಳೂರು  Y2K50, ಕೋಲಾರ ಚಿನ್ನದ ಗಣಿಗಳು  (ಈ ಕೃತಿಗಳ ಅನುವಾದ: ಡಾ. ಎಚ್.ಎಸ್. ಎಂ. ಪ್ರಕಾಶ್) ಕೋಲಾರ ಚಿನ್ನದ ಗಣಿ : 
 

 

 

ಎಂ. ವೆಂಕಟಸ್ವಾಮಿ

BY THE AUTHOR