ಬೆಳಕ ಬೆನ್ನ ಹಿಂದೆ

Author : ಸಾರಿಕ ಶೋಭಾ ವಿನಾಯಕ

Pages 126

₹ 120.00




Year of Publication: 2023
Published by: ಸವಿನಾಡು ಪ್ರಕಾಶನ
Address: ಎಮ್.ಎಲ್.ಎ ಲೇಔಟ್, ಕಾಲೇಳ ಅಗ್ರಹಾರ, ಬನ್ನೇರುಘಟ್ಟ, ರಸ್ತೆ, ಬೆಂಗಳೂರು- 560076
Phone: 9902995116

Synopsys

“ಬೆಳಕ ಬೆನ್ನ ಹಿಂದೆ” ಸಾರಿಕ ಶೋಭ ವಿನಾಯಕರವರ ಕವನ ಸಂಕಲನ. ಈ ಕೃತಿಗೆ ಡಾ. ಎಸ್. ಎನ್. ಮಂಜುನಾಥ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ಸಾರಿಕ ಶೋಭ ವಿನಾಯಕ ಅವರ ಈ ಕವನ ಸಂಕಲನವು ಹಲವು ರೀತಿಯಲ್ಲಿ ವಿಶೇಷ ಎನಿಸುತ್ತದೆ. ರಚನಕಾರ್ತಿ ಶ್ರೀಮತಿ ಸಾಲಿಕ ಅವರ ಬಹುಮುಖ ವ್ಯಕ್ತಿತ್ವ ಒಂದು ವಿಶೇಷವಾದರೆ ಕವನಗಳ ವಿಷಯಗಳು ಮತ್ತು ತ್ರಿಪದಿ, ಚತುಷ್ಪದಿ ಯಾವುದೇ ಚೌಕಟ್ಟಿಗೆ ಒಳಪಡದೆ ಮುಕ್ತವಾಗಿ ರಚಿಸುವುದು ಇವರ ವಿಶೇಷಗಳಾಗಿವೆ ಎಂದಿದ್ದಾರೆ. ಜೊತೆಗೆ ತಮ್ಮ ಬೇರುಗಳನ್ನೇ ಕತ್ತರಿಸಿ ದೂರ ಹೋಗುತ್ತಿರುವ ಈ ಯುಗದಲ್ಲಿ, ತಮ್ಮ ಮಣ್ಣಿನ ಸೊಗಡನ್ನ ಮರೆಯದೆ ಕಂಕಣ ಬದ್ಧರಾಗಿ ದುಡಿಯುತ್ತಿರುವವರು ಅತ್ಯಂತ ವಿರಳ ಎಂದೇ ಹೇಳಬಹುದು. ಜೀವನದ ಎಲ್ಲಾ ನೋವುಗಳನ್ನು ಉಂಡು ಪಕ್ವವಾದ ಸಾಲಿಕಾರವರ ವ್ಯಕ್ತಿತ್ವದಿಂದ ಈ ಕವನಗಳು ಪ್ರೇರಣೆ ಪಡೆದಿವೆ ಎಂಬುದು ನನ್ನ ಅನಿಸಿಕೆ. ಈ ಕವನಗುಚ್ಚ ನನಗೆ ಕಾಮನಬಿಲ್ಲಿನಂತೆ ಕಾಣುತ್ತದೆ. ಕನ್ನಡ ನಾಡು, ನುಡಿಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗಾಗಿ ಹೋರಾಟ ನಡೆಯುತ್ತಿರುವ ಶ್ರೀಮತಿ ಸಾಲಿಕರವರು ಅನೇಕ ವೇದಿಕೆಗಳ ಮುಖಾಂತರ ಕಾರ್ಯತತ್ಪರರಾಗಿರುತ್ತಾರೆ. ಇದರ ಅನುಭವವು ಅವರ ಹಲವು ಕವನಗಳಿಗೆ ಪ್ರೇರಣೆ ಎಂಬುದರಲ್ಲಿ ಸಂಶಯವಿಲ್ಲ. ಕುವೆಂಪುರವರ ಅಭಿಮಾನಿಯಾದ ಸಾಲಿಕರವರು ಪ್ರಗತಿಪರ ಚಿಂತಕರ ಸಾಲಿಗೆ ಸೇರುತ್ತಾರೆ. ವೈಯಕ್ತಿಕ ಜೀವನದ ಜೀವನದ ಹಲವು ಸವಾಲುಗಳನ್ನ ಸಮರ್ಥವಾಗಿ ಎದುರಿಸುವಲ್ಲಿ ಅವರಿಗೆ, ಅವರ ಈ ಸಾಹಿತ್ಯದ ಕೃಷಿ ಬೆಂಬಲ ನೀಡಿದೆ ಎಂಬೋದು ನನ್ನ ಅಂಬೋಣ. ಇದು ಸಾಲಿಕರವರ ಚೊಚ್ಚಲ ಕವನ ಸಂಗ್ರಹವಾಗಿದ್ದರೂ ಸಹ ನಾವು ಇದರಲ್ಲಿ ಅವರ ಭಾಷೆಯ ಮೇಲಿನ ಹಿಡಿತವನ್ನೂ, ನಿರೂಪಣ ಶೈಲಿಯನ್ನೂ ಸಾಂದರ್ಭಿಕ ಪ್ರಾಸವನ್ನೂ ಗಮನಿಸಬಹುದು. ಸಾಲಿಕರವರ ಈ ಕವನಸಂಕಲನ ಸ್ವಾಗತಾರ್ಹವಷ್ಟೇ ಅಲ್ಲ ಅಭಿನಂದನಾರ್ಹವೂ ಆಗಿದೆ. ಬದುಕು ಹೊರೆಯಾದಾಗ, ವ್ಯಕ್ತಿಯ ಮನಸ್ಥಿತಿಯನ್ನು (ಬದುಕೆಂಬ ಹೊರೆ ಕವನ) ಚಿಂಚಿಸುತ್ತಾ, ಕನಸುಗಳು ಬತ್ತಿದರೂ ಪ್ರಯತ್ನಗಳು ಮುಂದುವರೆಯಬೇಕು ಎಂಬ ಆಶಾವಾದವನ್ನು, ಸ್ಥೈರ್ಯವನ್ನು ಹತಾಶರಿಗೆ ತುಂಬುವುದು ಎಲ್ಲಿಯೋ ಬೇಂದ್ರೆಯವರ ನೆನಪನ್ನು ತರುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಸಾರಿಕ ಶೋಭಾ ವಿನಾಯಕ

ಸಾರಿಕ ಶೋಭಾ ವಿನಾಯಕ ಅವರು ಮೂಲತಃ ದಾವಣಗೆರೆ ಹತ್ತಿರದ ಹರಪನಹಳ್ಳಿಯವರು. ದಾವಣಗೆರೆಯಲ್ಲಿ ಬಿ.ಇ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು, ಸುಮಾರು 20 ವರ್ಷಗಳ ಖಾಸಗಿ ಕಂಪನಿಯಲ್ಲಿಯ ಕೆಲಸದ ಅನುಭವಿದೆ. ಈಗಲೂ ಪ್ರತಿಷ್ಟಿತ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಉದ್ಯೋಗದ ಜೊತೆಗೆ ಸಾಹಿತ್ಯ ಕೃಷಿ, ಕನ್ನಡ, ಕನ್ನಡ ಸಂಘಟನೆಗಳೊಂದಿಗೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಮತ್ತು ವೃತ್ತಿ ವಲಯಗಳು ಸಾಹಿತ್ಯಕ್ಕೆ ಸಂಬಂಧ ಪಟ್ಟಿಲ್ಲದಿದ್ದರೂ ಸಾರಿಕ ಅವರು ಸ್ವಂತ ಆಸಕ್ತಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. ಇವರ ಸಾಂಸ್ಕೃತಿಕ ಅರಿವು ಪ್ರಶಂಸನೀಯವಾಗಿದ್ದು, ಕನ್ನಡ ಭಾಷೆಯ ಬದ್ಧತೆಯಿಂದ ಕ್ರೀಯಾಶೀಲರಾಗಿರುವುದು ಮತ್ತೊಂದು ವಿಶೇಷ. ಕರ್ನಾಟಕದಲ್ಲಿ ...

READ MORE

Related Books