ಕವಿ ಲಕ್ಷ್ಮಿಕಾಂತ ಮಿರಜಕರ ಅವರ ಗಜಲ್ ಗಳ ಸಂಕಲನ. ಇಲ್ಲಿಯ ಗಜಲ್ ಗಳಲ್ಲಿ ಪ್ರೇಮ, ವಿರಹ, ಶೃಂಗಾರ ಸಹಜವಾಗಿರುವಂತೆ ನೆಲದ ವ್ಯವಸ್ಥೆಯ ವಿರುದ್ಧ ಆಕ್ರೋಶವಿದೆ. ಪ್ರತಿಭಟನೆಯ ಮೂಲಕ ಹೋರಾಡುವ ಕಾವ್ಯ ಖಡ್ಗವಾಗಿವೆ. ಸಾಮಾಜಿಕ ವಿದ್ಯಮಾನಗಳು-ಸಮಸ್ಯೆಗಳು, ಹೆಣ್ಣಿನ ಶೋಷಣೆ, ರೈತಪರ ಕಾಳಜಿ ಇಲ್ಲಿಯ ಗಜಲ್ ಗಳ ವೈವಿಧ್ಯತೆ. ‘ದೇಶಕ್ಕೆ ಮತಾಂಧದ ಗ್ರಹಣ ಹಿಡಿಸಿದ್ದೇವೆ ಅಷ್ಟೇ, ಇಲ್ಲಿ ಎಲ್ಲವೂ ಚೆನ್ನಾಗಿದೆ ಭಕ್ತರನ್ನು ಸುಳ್ಳಿನ ಹಾಸಿಗೆಯಲ್ಲಿ ಮಲಗಿಸಿದ್ದೇನೆ ಅಷ್ಟೇ, ಇಲ್ಲಿ ಎಲ್ಲವೂ ಚೆನ್ನಾಗಿದೆ' ಎನ್ನುವ ವ್ಯಂಗ್ಯವೂ ಇದೆ. ಸಂಕಲನದಲ್ಲಿ ಒಟ್ಟು 63 ಗಜಲ್ ಗಳಿವೆ. ಗಜಲ್ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ ಯಂತಹ ಸಾಹಿತ್ಯಕ ಅಂಶಗಳಿಂದ ಈ ಸಂಕಲನವು ಓದುಗರ ಗಮನ ಸೆಳೆಯುತ್ತದೆ.
ಕವಿ ಲಕ್ಷ್ಮಿಕಾಂತ ಮಿರಜಕರ್ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನವರು. ತಂದೆ ನೇತಾಜಿ, ತಾಯಿ ಲಕ್ಷ್ಮಿ. ಶಿಗ್ಗಾಂವ್ ನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ, ಬೆಂಗಳೂರಿನ ಮಾರತಹಳ್ಳಿಯ ಎಂ.ಎ.ಜೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಇಡ್ ಪದವಿ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ ಎ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಮಾಧ್ಯಮ ಆಧ್ಯಯನ ಎಂ ಎ ಪದವಿ ಪೂರೈಸಿದ್ದಾರೆ. ಈಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ (ಪಿ.ಎಚ್.ಡಿ) ಸಂಶೋಧನಾ ವಿದ್ಯಾರ್ಥಿ. ಸದ್ಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರು. ರಾಜ್ಯ ...
READ MORE