‘ಬನದ ಹೂ ಮತ್ತು ಇತರ ಕವನಗಳು’ ಎಚ್.ವಿ.ವೆಂಕಟಸುಬ್ಬಯ್ಯ ಅವರ ಕವನ ಸಂಕಲನ. ಈ ಕೃತಿಯಲ್ಲಿನ ಕವನಗಳು ಅತ್ಯುತ್ತಮವಾಗಿವೆ. ಪ್ರಖರ ಚಿಂತನೆಯಿಂದ ಕೂಡಿದ್ದು ಪ್ರಸಕ್ತ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ. ಮೂರ್ತದಿಂದ ಅಮೂರ್ತಕ್ಕೆ ತೆರಳುವ ರೀತಿ ನಿಜಕ್ಕೂ ಬೆರಗುಗೊಳಿಸುವಂತಿದೆ. 'ಕಲ್ಪನಾ' (ಸುನೀತ) ಅತ್ಯುತ್ತಮ ಕವನಮನಸ್ಸಿನೊಳಗೆ ಮೂಡಿದ ಭಾವನೆಯನ್ನು ಕಾಗದದ ಮೇಲೆ ಅಭಿವ್ಯಕ್ತಿಸಲು ಲೇಖಕ ಪಡುವ ಶ್ರಮ, ಅವನೊಡನೆ ಆಟವಾಡುವ ಕಲ್ಪನಾವಿಲಾಸದ ವಿಹಂಗಮ ನೋಟ ಸುಂದರವಾಗಿ ಮೂಡಿಬಂದಿದೆ ಎನ್ನುತ್ತಾರೆ ವಿಶ್ವನಾಥ್ ಹುಲಿಕಲ್. “ಸಂದರ್ಶನ' ಚೆನ್ನಾಗಿದೆ 'ತುಳಸಿ' ಮಾನವ ನಿರ್ಮಿತ ಕೃತಕ ಗೋಡೆಗಳನ್ನೊಳಗೊಂಡು ಬೆಳೆವ ಪರಿಯನ್ನು ಅನಿರ್ಬಂಧಿತ ವಾತಾವರಣದಲ್ಲಿ ಬೆಳೆದ ತುಳಸಿಯೊಡನೆ ಹೋಲಿಸಿರುವ ಪರಿ ಚೆನ್ನಾಗಿದೆ.... 'ಬಲಸ್ಯ ಮೂಲಂ ವಿಜ್ಞಾನಮ್' ಅತ್ಯುತ್ತಮ ಕವನಗಳಲ್ಲಿ ಒಂದು! 'ಅಕ್ಕ ಹೇಳಕ್ಕ' - ಅಕ್ಕ ಮಹಾದೇವಿಯವರ ವಚನದ ಅಧುನಿಕ ರೂಪ! ಎನ್ನುತ್ತಾರೆ.
ಕನ್ನಡ ರಂಗಭೂಮಿಯಲ್ಲಿ ’ಸುಬ್ಬಣ್ಣ’ ಎಂದೇ ಜನಪ್ರಿಯರಿರುವ ಎಚ್.ವಿ. ವೆಂಕಟಸುಬ್ಬಯ್ಯ ಅವರು ಹುಟ್ಟಿದ್ದು 1936ರಲ್ಲಿ. ಮೂಲತಃ ಮೈಸೂರಿನ ಹಂಪಾಪುರದವರಾದ ವೆಂಕಟಸುಬ್ಬಯ್ಯ ಅವರು ಸೌಂಡ್ ಎಂಜಿನಿಯರಿಂಗ್ ಮತ್ತು ನಾಟಕ ಕಲೆಯಲ್ಲಿ ಡಿಪ್ಲೊಮಾ ಮಾಡಿದ್ದರು. ಎಲ್.ಆರ್. ಡಿ.ಇ.ಯಲ್ಲಿ ತಾಂತ್ರಿಕ ಅಧಿಕಾರಿಯಾಗಿ 1996ರ ತನಕ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವೆಂಕಟಸುಬ್ಬಯ್ಯ ಅವರಿಗೆ 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 1950ರಿಂದ ಕನ್ನಡ ರಂಗಭೂಮಿಯ ಭಾಗವಾಗಿರುವ ಹಿರಿಯ ರಂಗಕರ್ಮಿ ’ಸುಬ್ಬಣ್ಣ’ ಅವರು ರಂಗಭೂಮಿ, ರಂಗಭೂಮಿಯ ಕಲಾವಿದರು, ರಂಗಭೂಮಿಯ ತಂತ್ರಜ್ಞಾನ ಕುರಿತ ಯಾವುದೇ ಪ್ರಶ್ನೆಗೂ ಸುದೀರ್ಘ ಉತ್ತರ ನೀಡಬಲ್ಲರು. ಪ್ರದರ್ಶನ ಕಲೆಗಳ ಅಭಿವ್ಯಕ್ತಿಯ ಸೃಜನಶೀಲತೆ ಮತ್ತು ...
READ MORE