‘ಬಂದೂಕಿನ ಮನುಷ್ಯ’ ಬಸವರಾಜ ಕುಂಬಾರ ಅವರ ಕವನಸಂಕಲನವಾಗಿದೆ. ಬಡವರ್ಗಗಳ, ಮುಗ್ದರ ಬಗ್ಗೆ ಮಾತಾಡುತ್ತಾ ಪ್ರೀತಿಯ ಸೋಪಾನಗಳನ್ನು ಕಟ್ಟಿಕೊಟ್ಟು ಬದುಕನ್ನು ಪ್ರೀತಿಸಲು ಈ ಕವನಗಳು ಪ್ರೇರೇಪಿಸುತ್ತವೆ. ಮನುಷ್ಯ ಮನುಷ್ಯನಾಗಿದ್ದಾನೆಯೇ ಪುಟ್ಟ ಕವಿತೆ "ಪ್ರಶ್ನೆ'' ಕೇಳುತ್ತದೆ.
ಬರಹಗಾರ ಬಸವರಾಜ ಕುಂಬಾರ್ ಅವರು ಜನಿಸಿದ್ದು 1987 ಜೂನ್ 1ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಅರಳಹಳ್ಳಿಯವರಾದ ಬಸವರಾಜರ ತಂದೆ ಶಿವಪ್ಪ ಕುಂಬಾರ್, ತಾಯಿ ಕಲ್ಯಾಣಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಭರವಸೆಯೇ-ಬದುಕು ಮತ್ತು ನಕ್ಷತ್ರ ಮಾಲೆ. ...
READ MOREಹೊಸತು- ಆಗಸ್ಟ್-2002
ಮನುಷ್ಯ ಬಂದೂಕಿನ ಜೊತೆಗೂಡಿದಾಗ ರಾಕ್ಷಸನಾಗುತ್ತಾನೆ ; ಬೆಂಕಿ ಸಿಡಿಸುತ್ತಾನೆ. ಹೃದಯದೊಂದಿಗೆ ಸಂವಾದಿಸಿದಾಗ ಮಾತ್ರ ಎಂದೂ ಆರದ ಬೆಳಕನ್ನು ಕೊಡುವ ನಂದಾದೀಪದಂತೆ ಕತ್ತಲೆ ಕಳೆಯಬಲ್ಲ, ಅವನಿಂದ ಬಂದೂಕನ್ನು ಕಿತ್ತುಕೊಂಡು ಹೂವಿನ ಪರಿಮಳವನ್ನು ಪರಿಚಯಿಸುವುದು ಹೇಗೆ ? ಇಲ್ಲಿನ ಕವನಗಳು ಆ ಬಗ್ಗೆ ಚಿಂತಿಸಿವೆ. ಬಡವರ್ಗಗಳ, ಮುಗ್ಧರ ಬಗ್ಗೆ ಮಾತಾಡುತ್ತಾ ಪ್ರೀತಿಯ ಸೋಪಾನಗಳನ್ನು ಕಟ್ಟಿಕೊಟ್ಟು ಬದುಕನ್ನು ಪ್ರೀತಿಸಲು ಈ ಕವನಗಳು ಪ್ರೇರೇಪಿಸುತ್ತವೆ. ಮನುಷ್ಯ ಮನುಷ್ಯನಾಗಿದ್ದಾನೆಯೇ ಪುಟ್ಟ ಕವಿತೆ ''ಪ್ರಶ್ನೆ '' ಕೇಳುತ್ತದೆ.