‘ಅವ್ವ ಬರಲೇ ಇಲ್ಲ’ ಲೇಖಕ ಬಸವರಾಜು ಕುಕ್ಕರಳ್ಳಿ ಅವರ ಪದ್ಯಗಳ ಸಂಕಲನ. ಕೃತಿಗೆ ಬೆನ್ನುಡಿ ಬರೆದ ಕವಿ ಅಭಿಷೇಕ್ ವೈ.ಎಸ್. ‘ ಈ ಸಂಕಲನ ಈ ಕಾಲಕ್ಕೆ ತೀರಾ ಕ್ಲಾಸಿಕ್ ಆಗಿರುವುದು ಇದರ ಬಹುದೊಡ್ಡ ಶಕ್ತಿ. ಭಾಷೆಯನ್ನು ಸುಲಭವಾಗಿ ಬಳಸುವ ಬಸವರಾಜು ಅವರು ಓದುಗರನ್ನು ಸುಲಭವಾಗಿ ತಲುಪುತ್ತಾರೆ. ಕೆಲವು ಕಡೆ ಬಳಸಿರುವ ಪದಗಳು ಆಡು ಮಾತಿನ ಮಾದರಿಯವು, ಇವುಗಳನ್ನು ಯಥಾವತ್ತಾಗಿ ಬಳಸಿದ್ದಾರೆ. ಅವು ಸ್ಥಳೀಯ ಭಾಷೆ ಮತ್ತು ಸಮುದಾಯದ ಸಾಂಸ್ಕೃತಿಕತೆಯ ಸೂಚಕಗಳಾಗಿರುವುದು ವಿಶೇಷ’ ಎಂದು ಅಭಿಪ್ರಾಯಪಟ್ಟಿದ್ದಾರೆ..
ಲೇಖಕ ಬಸವರಾಜು ಮೈಸೂರಿನ ಕುಕ್ಕರಹಳ್ಳಿ ಗ್ರಾಮದವರು. ತಂದೆ- ಧನಗಳ್ಳಿ ಸಿದ್ಧಯ್ಯ, ತಾಯಿ- ನಿಂಗಮ್ಮ. ಎಂ.ಲಿಬ್.ಸೈನ್ಸ್ ನಲ್ಲಿ ಪದವಿ ಪಡೆದಿರುವ ಬಸವರಾಜು ಅವರು ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳು ಡಿಪ್ಲೊಮಾ ಗ್ರಂಥಾಲಯ ವಿಜ್ಞಾನ ಬೋಧನೆ, ಗ್ರಂಥಪಾಲಕ, ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲು ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಲ್ಲಿ ಕಥೆಗಾರರಾಗಿರುವ ಅವರು ಸಾಹಿತ್ಯದಲ್ಲಿಯೂ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. ಕೆಲವು ಕಾಲ ರಂಗಕರ್ಮಿಯಾಗಿ ಬಿ.ವಿ.ಕಾರಂತರ ನಿರ್ದೇಶನದ ಹಯವದನ ನಾಟಕದ ಜೊತೆಗೆ, ಹಲವು ನಿರ್ದೇಶಕರ ನಾಟಕಗಳು ಹಾಗೂ ಸಾಕ್ಷರತೆಯ ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. ಪದವಿ ಓದುತ್ತಿದ್ದಾಗಲೇ ‘ಸ್ಟೂಡೆಂಟ್ ಫಾರ್ ಡೆಮಾಕ್ರಸಿ’ ವಿದ್ಯಾರ್ಥಿ ...
READ MOREಬಸವರಾಜು ಕುಕ್ಕರಹಳ್ಳಿ ಅವರ ‘ಅವ್ವ ಬರಲೇ ಇಲ್ಲ’ ಕೃತಿ ಲೋಕಾರ್ಪಣೆ