ಸವಿತಾ ಬನ್ನಾಡಿ ಅವರು ಸಂಪಾದಿಸಿರುವ ’ಅವಳ ಕವಿತೆ’ ಸಂಕಲನ ೨೦೧೫-೧೬ನೇ ಸಾಲಿನಲ್ಲಿ ಪ್ರಕಟವಾದ ಮಹಿಳೆಯರು ಕವಿತೆಗಳನ್ನು ಒಳಗೊಂಡಿದೆ. ಶಾರದಾ ಎ. ಅಂಚನ್, ಅಕ್ಷತಾ ಹುಂಚದಕಟ್ಟೆ, ಅನಸೂಯಾ ಕಾಂಬಳೆ, ವೈದೇಹಿ, ನಳಿನಾ ಡಿ., ಪ್ರಜ್ಞಾ ಮತ್ತೀಹಳ್ಳಿ, ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ್, ಲಲಿತಾ ನಾಯಕ್, ಲಲಿತಾ ಸಿದ್ದಬಸವಯ್ಯ, ಮಮತಾ ಅರಸೀಕರೆ, ಸಂಘಮಿತ್ರೆ ಸೇರಿದಂತೆ ವಿವಿಧ ವಯೋಮಾನದ ಕವಯತ್ರಿಯರ ದನಿ ಇಲ್ಲಿದೆ. ಒಟ್ಟು 56 ಕವಿಗಳ ನೂರಕ್ಕೂ ಹೆಚ್ಚು ಕವಿತೆಗಳು ಸಂಕಲನದಲ್ಲಿವೆ.
'ಹುತ್ತದ ಬಾಯಿಗಳೆಲ್ಲವೂ ಯೋನಿಗಳಾದವು/ ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು/ ಸಹಸ್ರ ಯೋನಿಗಳ ದೇಹ/ ಸರ್ವಋತು ಸ್ರಾವ' ಎಂದು ಎಚ್. ಎಸ್. ಅನುಪಮಾ ಬಾಲಕಿಯರ ಅಸಹಾಯಕತೆಯನ್ನು ಬಿಂಬಿಸುತ್ತಾರೆ.
'ಕವಿತೆ ಅನ್ನುವುದು ಹೆಣ್ಣಿನ ಭಾಷೆ, ಒಡಲ ಹಾಡು ಮತ್ತು ಮಡಿಲ ಮಗು ಬೇರೆ ಬೇರೆಯೇನಲ್ಲ. ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಅವಕಾಶ ನಿರಾಕರಿಸಲಾದ ಕಾಲದಿಂದಲೂ ಹೆಣ್ಣು ತನ್ನ ಕನಸನ್ನು ತನ್ನ ಹಾಡುಗಳ ಮರೆಯಲ್ಲಿ ಕಾಪಿಟ್ಟುಕೊಂಡಿದ್ದಾಳೆ,’ ಎಂಬ ಎಚ್ಚರದಲ್ಲಿ ಇಲ್ಲಿನ ಕವಿತೆಗಳನ್ನು ಸವಿತಾ ಬನ್ನಾಡಿ ಸಂಪಾದಿಸಿದ್ದಾರೆ.
“ತಾಯಿ ದೇವಿ' ಕವಿತೆಯಲ್ಲಿ ಅಕ್ಷತಾ ಹುಂಚದ ಕಟ್ಟೆ ಅವರು 'ಮೂರು ದಿನ ಹಸಿದಿದ್ದರೂ | ಉಸುರದಿರು ಹೊರಗೆ' ಎಂದು ಹೆಣ್ಣಿನ ಸುತ್ತ ಹೆಣೆದಿರುವ ಬಲೆಯನ್ನು ಚಿತ್ರಿಸುತ್ತಾರೆ.
ವಿಮರ್ಶೆ, ಕವಿತೆ ಮತ್ತು ಅಂಕಣ ಬರಹಗಳನ್ನು ಕಳೆದ ಮೂವತ್ತು ವರ್ಷಗಳಿಂದ ಬರೆಯುತ್ತಿರುವ ಸಬಿತಾ ಬನ್ನಾಡಿಯವರು ಸಮಗ್ರ ವಚನ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು, “ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿಯ ಅಂತರ್‍ಸಂಬಂಧಗಳು” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ(ಚಿನ್ನದ ಪದಕ) ಪಡೆದ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ತರೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಇವರು ಪ್ರಸ್ತುತ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥರಾಗಿ ...
READ MORE