ವಿಮರ್ಶೆ, ಕವಿತೆ ಮತ್ತು ಅಂಕಣ ಬರಹಗಳನ್ನು ಕಳೆದ ಮೂವತ್ತು ವರ್ಷಗಳಿಂದ ಬರೆಯುತ್ತಿರುವ ಸಬಿತಾ ಬನ್ನಾಡಿಯವರು ಸಮಗ್ರ ವಚನ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು, “ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿಯ ಅಂತರ್‍ಸಂಬಂಧಗಳು” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ(ಚಿನ್ನದ ಪದಕ) ಪಡೆದ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ತರೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಇವರು ಪ್ರಸ್ತುತ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾರ್ಗದರ್ಶಕರಾಗಿದ್ದಾರೆ.
ಪ್ರಮುಖ ಕೃತಿಗಳು:
1. ಇದಿರು ನೋಟ – ಅಂಕಣ ಬರಹ (2022), ಬಹುರೂಪಿ ಪ್ರಕಾಶನ, ಬೆಂಗಳೂರು.
2. ಆಲಯವು ಬಯಲಾಗಿ - ಸಂಶೋಧನೆ (2010), ತಿಂಗಳ ಬೆಳಕು ಪ್ರಕಾಶನ, ಕುಂದಾಪುರ.
3. ಹೊಸ್ತಿಲಾಚೆ ಈಚೆ - ಹೆಣ್ಣುನೋಟದ ಬರಹಗಳು, ವಿಮರ್ಶಾ ಸಂಕಲನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. (2020)
4. ನಿರಿಗೆ - ಕವಿತಾ ಸಂಕಲನ (2017), ಕವಿ ಪ್ರಕಾಶನ, ಕವಲಕ್ಕಿ, ಉತ್ತರ ಕನ್ನಡ.
5. ಗೂಡು ಮತ್ತು ಆಕಾಶ – ಅಂಕಣ ಬರಹ (2017), ಚಿಂತನ ಪ್ರಕಾಶನ, ಹೊನ್ನಾವರ.
6. ಸಾಹಿತ್ಯ ನಿರೂಪಣೆಗಳು –ವಿಮರ್ಶಾ ಲೇಖನ (2007), ಕಿಟಕೆ ಪ್ರಕಾಶನ, ಮೈಸೂರು.
7. ಅವಳ ಕಾವ್ಯ -2015-16- ಸಂಪಾದನೆ. ಕವಿ ಪ್ರಕಾಶನ, ಕವಲಕ್ಕಿ
8. ಹೆಣ್ಣು ನೋಟ, ಸಬಾಲ್ಟರ್ನ್ ಸಂಪುಟ - ಸಹ ಸಂಪಾದನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, (2017)
9. ಅರಿವಿನೊಂದಿಗೆ ನಮ್ಮ ಪಯಣ - ಸಹ ಸಂಪಾದನೆ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಶಿವಮೊಗ್ಗ. (2019)
10.‘ಪ್ರಾತಿನಿಧಿಕ ಮಹಿಳಾ ಸಾಹಿತ್ಯ ಮಾಲಿಕೆ’ ಸಂಪುಟ 5 ಆತ್ಮಕಥೆ - ಸಂಪಾದನೆ. ಕುವೆಂಪು ಭಾಷಾ ಪ್ರಾಧಿಕಾರ, ಬೆಂಗಳೂರು. (2019)
11. ಭಾಷೆ-ಬಳಕೆ, ಸಾಹಿತ್ಯ ಸಂಕಥನ - ಪಠ್ಯ ಪುಸ್ತಕ ಸಂಪಾದನೆ. (2003), ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ.
12.ಸಾಹಿತ್ಯ ಸಂಕಥನ - ಪಠ್ಯ ಪುಸ್ತಕ ಸಂಪಾದನೆ. (2010), ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ.
13. ಮುಕ್ತ ಆಯ್ಕೆ -2. (2022), ಕುವೆಂಪು ವಿಶ್ವವಿದ್ಯಾಲಯ.
14. ಅನುವಾದ: ಅಂಬೇಡ್ಕರ್ ಬದುಕು - ಹೋರಾಟ( ಇಂಗ್ಲಿಷ್ ಮೂಲ: ಸಾಂಝಗಿರಿ)- ಕಿರು ಪುಸ್ತಕ (1998, 2015), ಕ್ರೀಯಾ ಪ್ರಕಾಶನ, ಬೆಂಗಳೂರು
ಪ್ರಶಸ್ತಿ:
1. ಅಮ್ಮ ಪ್ರಶಸ್ತಿ, ಸೇಡಂ, ಕಲ್ಬುರ್ಗಿ
2. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ
3. ಬೆಂಗಳೂರಿನ ಅತ್ತಿಮಬ್ಬೆ ಟ್ರಸ್ಟ್‍ನ ಪುಸ್ತಕ ಪ್ರಶಸ್ತಿ
ಅಂಕಣಗಳು:
1. ‘ಮರುಮಾತು’ ಸಂವಾದ ಪತ್ರಿಕೆಯಲ್ಲಿ – 2016ರಿಂದ 2019ರ ತನಕ.
2. ಪ್ರಜಾವಾಣಿಯಲ್ಲಿ : ‘ವಿಶ್ಲೇಷಣೆ’ – ಮುಂದುವರೆದಿದೆ.
ಪಠ್ಯವಾಗಿರುವ ಬರಹಗಳು:
1. ಗಾರ್ಮೆಂಟ್ ಹುಡುಗಿ – ಕವನ ಸಾಹಿತ್ಯ ಮಂದಾರ, ದ್ವಿತೀಯ ಬಿ.ಎಸ್ಸಿ ಕನ್ನಡ ನುಡಿಪಠ್ಯ,ಮಂಗಳೂರು ವಿಶ್ವವಿದ್ಯಾನಿಲಯ 2014-17
2. ನಡುಗನ್ನಡ ಸಾಹಿತ್ಯದಲ್ಲಿ ಮಹಿಳೆ ಸೊಲ್ಲು – 3, ದ್ವಿತೀಯ ಬಿ.ಎ ಕನ್ನಡ ಪಠ್ಯ ಪುಸ್ತಕ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.2018-20
3 ಗಾರ್ಮೆಂಟ್ ಹುಡುಗಿ - ಪ್ರಥಮ ಪದವಿ ಭಾಷಾ ಪಠ್ಯ, ಮೈಸೂರು ವಿಶ್ವವಿದ್ಯಾಲಯ-2021-22
4 ದೋರೆಗಾಯಿ ಸವಿ ಕಟ್ಟುವ ಮುನ್ನ-ಪ್ರಥಮ ಬಿ.ಬಿ.ಎ ಭಾಷಾ ಪಠ್ಯ, ಬೆಂಗಳೂರು ವಿಶ್ವವಿದ್ಯಾನಿಲಯ 2022-23