'ಅರಿವಿನ ಹಾಡುಗಳು’ ರುದ್ರಪ್ಪ ಹನಗವಾಡಿ ಅವರ ಸಂಪಾದಕತ್ವದ ಕೃತಿ. ದಲಿತ ಹೋರಾಟದ ಭಾಗವೇ ಆಗಿರುವುದು ಹಾಡುಗಳು. ತತ್ವಪದಗಳು, ವಚನಗಳು, ಜಾನಪದ ಹಾಡುಗಳು ಎಲ್ಲವೂ ಹೋರಾಟದ ಹಾಡುಗಳಲ್ಲಿ ಸೇರುತ್ತವೆ. ಅಂಥ ಹಾಡುಗಳನ್ನು ಅರಿವಿನ ಹಾಡುಗಳೆಂದು ಇಲ್ಲಿ ಸಂಕಲಿಸಲಾಗಿದೆ. ಒಂದು ಅಪರೂಪದ ಕೃತಿಯಾಗಿ ಇದು ಮೂಡಿದೆ.
ರುದ್ರಪ್ಪ ಹನಗವಾಡಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಳಿಕ ಕರ್ನಾಟಕ ಆಡಳಿತ ಸೇವೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 'ಸೆಳೆತ' - ಕವನ ಸಂಕಲನ 2010 'ಊರು – ಬಳಗ' ಕವನ ಸಂಕಲನ 2013 ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ‘ಎಲೆ ಮುಗಿಲ ಬೆಳಕು' ಕವನ ಸಂಕಲನ 2021, 'ಋಣದ ಗಣಿ' ಆತ್ಮಕಥೆ 2021, ಇವರ ಕೃತಿಗಳು. ಸಂಪಾದನೆ: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬಿ.ಆರ್.ಪಿ. 'ದಶಮಾನ' ಸಂಚಿಕೆ 1979 .ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ 'ಅಭಿವೃದ್ಧಿ' ವಿಶೇಷ ಸಂಚಿಕೆ ...
READ MORE