ರುದ್ರಪ್ಪ ಹನಗವಾಡಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಳಿಕ ಕರ್ನಾಟಕ ಆಡಳಿತ ಸೇವೆಯಲ್ಲೂ ಸೇವೆ ಸಲ್ಲಿಸಿದ್ದಾರೆ. 'ಸೆಳೆತ' - ಕವನ ಸಂಕಲನ 2010 'ಊರು – ಬಳಗ' ಕವನ ಸಂಕಲನ 2013 ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ‘ಎಲೆ ಮುಗಿಲ ಬೆಳಕು' ಕವನ ಸಂಕಲನ 2021, 'ಋಣದ ಗಣಿ' ಆತ್ಮಕಥೆ 2021, ಇವರ ಕೃತಿಗಳು.
ಸಂಪಾದನೆ: ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬಿ.ಆರ್.ಪಿ. 'ದಶಮಾನ' ಸಂಚಿಕೆ 1979 .ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ 'ಅಭಿವೃದ್ಧಿ' ವಿಶೇಷ ಸಂಚಿಕೆ – 2006 'ಮೈತ್ರಿ - ದಲಿತ ಲೇಖಕರ ಕಲಾವಿದರ ಸಮ್ಮೇಳನದ ವಿಶೇಷ ಸಂಚಿಕೆ 2010. ಜನಪರ ಹಾಡುಗಳ ಸಂಕಲನ (ಅರಿವಿನ ಹಾಡುಗಳು) 2014.