ಅಂಗಳದಲ್ಲಿ ಆಕಾಶ

Author : ರಾಜು ಹೆಗಡೆ

Pages 63

₹ 40.00




Year of Publication: 2010
Published by: ಬಂಡಾಯ ಪ್ರಕಾಶನ
Address: ಸಹಯಾನ ಕೆರೆಕೋಣ, ಅರೇಅಂಗಡಿ, ಹೊನ್ನಾವರ(ಉ.ಕ)- 581430

Synopsys

‘ಅಂಗಳದಲ್ಲಿ ಆಕಾಶ’ ಲೇಖಕ ರಾಜು ಹೆಗಡೆ ಅವರ ಕವನ ಸಂಕಲನ. ‘ಈಗ ಏನಾದರೂ ಮಾಡಬೇಕು, ಆಕಾಶವ ಅಲುಗಿಸಿದರೆ ನಕ್ಷತ್ರ ಉದುರಬಹುದು’ ಹೀಗೆ ಮಹತ್ವಾಕಾಂಕ್ಷೆಯನ್ನು ಕಾವ್ಯಾತ್ಮಕವಾಗಿ ವ್ಯಕ್ತಪಡಿಸುವ ರಾಜು ಹೆಗಡೆ ಅವರು ಕವಿತೆಗಳ ಮೂಲಕ ತಮ್ಮ ಆಶಾವಾದವನ್ನು ವಿವರಿಸುತ್ತಾರೆ. ‘ಸದ್ಯ ನಾನು ಮಧ್ಯದಲ್ಲಿದ್ದೇನೆ’ ಎಂಬ ಒಂದು ಸಾಲಿನಲ್ಲಿ ಕವಿ ತನ್ನ ನಿಲುವಿನ ಬಗ್ಗೆ ಹೇಳುವ ಕವಿತೆ ಇದೆ. ಈ ಸಾಲು ಕವಿತೆಗಳು ಬಹುದೊಡ್ಡ ಅಭಿವ್ಯಕ್ತಿ ಎಂಬುದಕ್ಕೆ ಸಾಕ್ಷಿ ನುಡಿದಂತಿದೆ.

About the Author

ರಾಜು ಹೆಗಡೆ
(17 July 1964)

ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ  17ರಂದು ಜನಿಸಿದರು.  ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ).   ...

READ MORE

Related Books