ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ 17ರಂದು ಜನಿಸಿದರು. ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ.
ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ).