ಪುಟ್ಟ ಮಕ್ಕಳ ಮನಸ್ಸನ್ನು ಅರಳಿಸುವಂತಹ ಕವನಗಳ ಕೃತಿ-ಅಂಬರ ಚಂದಿರ. ಕ್ಕಳು ಒಮ್ಮೆ ಈ ಕೃತಿಯನ್ನು ಕೈಗೆತ್ತಿಕೊಂಡರೆ ಸಾಕು, ಒಂದೇ ಪಟ್ಟಿಗೆ ಓದಿ ಮುಗಿಸುವಂತಹದ್ದಾಗಿದೆ. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸುವ 'ಚಿತ್ತಾರ', `ಹಳದ ದಂಡೆ ಕಲ್ಲು', 'ನಮ್ಮೂರ ಹಳ್ಳ', 'ಮಳೆ', 'ಬೆಳೆ' ಹೀಗೆ ಹತ್ತಾರು ಗೀತೆಗಳು ಬಹಳ ಸರಳವಾಗಿ ಮುದ ನೀಡುತ್ತವೆ.
ಶಂಕರದೇವರು ಹಿರೇಮಠ ಅವರು ಜನಿಸಿದ್ದು 1985ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇವರ ತಂದೆ ಕಂಬಸಯ್ಯ ಸ್ವಾಮಿ ಹಿರೇಮಠ ಮತ್ತು ತಾಯಿ ಶ್ರೀಮತಿ ಗಿರಿಜಾದೇವಿ ಹಿರೇಮಠ, ಶಂಕರದೇವರು ಹಿರೇಮಠ ಅವರು 14 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಭಾಮಿನಿಷಟ್ನದಿಯಲ್ಲಿ ಪುರಾಣಗಳು ಸೇರಿದಂತೆ 16 ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಸೇವೆಯಲ್ಲಿ ತೊಡಗಿದ್ದಾರೆ. ತಾಯಿಯವರು ಶ್ರೀ ಶಾರದಾ ಪ್ರಕಾಶನದ ಅಡಿಯಲ್ಲಿ ಸಾಹಿತ್ಯಕೃತಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಶ್ರೀಮತಿ ಅಶ್ವಿನಿ ವಿಹಿರೇಮಠ ಅವರು ಬಣ್ಣದ ಬುಗುರಿ ಎಂಬ ಶಿಶುಗೀತೆಗಳ ಸಂಕಲನ ಪ್ರಕಟಿಸಿ ಮಕ್ಕಳ ...
READ MORE