ಅಕ್ಷರ

Author : ಸುಷ್ಮಾ ಶಂಕ‌ರ್

Pages 112

₹ 150.00




Year of Publication: 2023
Published by: ದ್ರಾವಿಡಂ ಪಬ್ಲಿಕೇಶನ್ಸ್
Address: ದ್ರಾವಿಡ ಭಾಷ ಟ್ರಾನ್ಸ್‌ಲೇಟರ್‍ಸ್‌ ಎಸೋಸಿಏಶನ್ ಬೆಂಗಳೂರು.
Phone: 8147212724

Synopsys

ಡಾ. ಸುಷ್ಮಾ ಶಂಕರ್‌ ಅವರ ‘ಅಕ್ಷರ’ ಪುಸ್ತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳ ಕವಿ ಪ್ರೊ. ಒ. ಎನ್‌. ವಿ. ಕುರುಪ್ ಅವರ ಕೃತಿಯ ಅನುವಾದವಾಗಿದೆ. ಸಣ್ಣ ಸಣ್ಣ ವಿವರಗಳಲ್ಲಿಯೇ ರೂಪಕಗಳನ್ನು ಹೆಣೆಯುತ್ತ ಕವನ ಕಟ್ಟುವ ಅಪರೂಪದ ಕಲೆ ಒ.ಎನ್. ವಿ ಕುರುಪ್ ಅವರ ವಿಶಿಷ್ಟ ಕಲೆ. ಈ ಸಂಕಲನದ 'ಅಕ್ಷರ', 'ಸಣ್ಣದುಃಖ', 'ಸ್ನೇಹ ಎಂಬ ಭಾರ', 'ಒಂದು ಹಳೆಯ ಹಾಡು', 'ಸತ್ತಬೇರುಗಳು', 'ಹಸ್ತಲಾಘವ', 'ಫೀನಿಕ್ಸ್' ಕವನಗಳು ಒಳ್ಳೆಯ ಉದಾಹರಣೆಗಳು. ನಮ್ಮ ದೇಶದ ಎಲ್ಲಾ ಸಾಹಿತ್ಯ ಪ್ರಕಾರಗಳು ಉಳಿದ ಎಲ್ಲಾ ಭಾಷೆಗಳಿಗೆ ಅನುವಾದ ವಾಗಬೇಕಾಗಿರುವುದು ಅನಿವಾರ್ಯ. ಆ ನಿಟ್ಟಿನಲ್ಲಿ ದ್ರಾವಿಡ ಭಾಷೆಯ ಮಕ್ಕಳಾದ ಕನ್ನಡ ಹಾಗೂ ಮಲಯಾಳಂ ನಡುವೆ ಡಾ. ಸುಷ್ಮಾ ಶಂಕರ್ ಕಟ್ಟುವ ಈ ಸೇತುವೆ ದಿನೇ ದಿನೇ ಧೃಡವಾಗಲಿದೆ.

About the Author

ಸುಷ್ಮಾ ಶಂಕ‌ರ್
(01 May 1971)

ಡಾ. ಸುಷ್ಮಾ ಶಂಕ‌ರ್ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕಣ್ಣನಲ್ಲೂ‌ರ್ ಗ್ರಾಮದವರು. 1971ರ ಮೇ 1ರಂದು ಜನನ. ತಂದೆ ಎನ್ ಚೆಲ್ಲಪ್ಪನ್ ನಾಯರ್, ತಾಯಿ ಸುಭಾಷಿಣಿ. ಬಾಲ್ಯ ಶಿಕ್ಷಣ ಕಣ್ಣನಲ್ಲೂರ್ ಗ್ರಾಮದಲ್ಲಿ, ಪಿ. ಯು. ಸಿ ವಿದ್ಯಾಭ್ಯಾಸವನ್ನು ಕೊಲ್ಲಂ ಜಿಲ್ಲೆಯಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪಡೆದುಕೊಂಡರು. ಪತಿ ಬಿ. ಶಂಕರ್ ಅವರಿಂದ ಕನ್ನಡ ಕಲಿತ ಇವರು, ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾವ್ಯ, ಜಾಣ ಮತ್ತು ರತ್ನ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುತ್ತಾರೆ. ಅನಂತರ ಮೈಸೂರಿನ ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ. ಎ (ಕನ್ನಡ) ಪದವಿ, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ. ಫಿಲ್ (ಕನ್ನಡ) ಪದವಿ ...

READ MORE

Related Books