ಡಾ. ಸುಷ್ಮಾ ಶಂಕರ್ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕಣ್ಣನಲ್ಲೂರ್ ಗ್ರಾಮದವರು. 1971ರ ಮೇ 1ರಂದು ಜನನ. ತಂದೆ ಎನ್ ಚೆಲ್ಲಪ್ಪನ್ ನಾಯರ್, ತಾಯಿ ಸುಭಾಷಿಣಿ. ಬಾಲ್ಯ ಶಿಕ್ಷಣ ಕಣ್ಣನಲ್ಲೂರ್ ಗ್ರಾಮದಲ್ಲಿ, ಪಿ. ಯು. ಸಿ ವಿದ್ಯಾಭ್ಯಾಸವನ್ನು ಕೊಲ್ಲಂ ಜಿಲ್ಲೆಯಲ್ಲಿ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪಡೆದುಕೊಂಡರು. ಪತಿ ಬಿ. ಶಂಕರ್ ಅವರಿಂದ ಕನ್ನಡ ಕಲಿತ ಇವರು, ನಂತರದ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾವ್ಯ, ಜಾಣ ಮತ್ತು ರತ್ನ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳುತ್ತಾರೆ. ಅನಂತರ ಮೈಸೂರಿನ ಕುವೆಂಪು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ. ಎ (ಕನ್ನಡ) ಪದವಿ, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ. ಫಿಲ್ (ಕನ್ನಡ) ಪದವಿ ಪಡೆದಿದ್ದಾರೆ. 30 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸದಾ ಕನ್ನಡ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಈವರೆಗೆ ಒಟ್ಟು ಎಂಟು ಕವನ ಸಂಕಲನ ಹಾಗೂ ಒಂದು ಕಥಾಸಂಕಲನ ಹೊರತಂದಿದ್ದಾರೆ.
ಕೃತಿಗಳು: ‘ಒಂದು ಅಧ್ಯಯನ' ಎಂಬ ಮಹಾಪ್ರಬಂಧ, 'ತೊದಲ್ನುಡಿ - ಚಿಣ್ಣರಿಗೊಂದು ನಲ್ನುಡಿ'(ಮಕ್ಕಳ ಸಾಹಿತ್ಯ ಪತ್ರಿಕೆ), ‘ಮೊದ ಮೊದಲ ಗೆರೆಗಳು', 'ಅನ್ನ ಕೊಟ್ಟ ಕನ್ನಡ ಮಣ್ಣು', 'ಜ್ಞಾನ ಮಲೆಯಾಳಿ', 'ಆಮ್ಮ ದೈವಂ’, 'ಆಧ್ರ ಸ್ನೇಹಂ' ಕವನಸಂಕಲನಗಳು. 'ಭೂಮಿಗೊಂದು ಚರಮಗೀತೆ' (ಮಲಯಾಳಂ- ಕನ್ನಡ), 'ಯುಗಶಬ್ಧಂ' (ಕನ್ನಡ - ಮಲಯಾಳಂ). 'ಕುಸಿದು ಬಿದ್ದ ಲೋಕ' (ಮಲಯಾಳಂ - ಕನ್ನಡ), 'ಕುಯಿಲ್ ಪಾಟ್ ಓರು ಮತಿಪೀಡ್' (ತಮಿಳು - ಮಲಯಾಳಂ), ಅಕ್ಷರ (ಮಲಯಾಳಂ - ಕನ್ನಡ) ಇವರ ಅನುವಾದ ಕವನಸಂಕಲನಗಳು. 'ನಿಳಲುಂ ನಿಲಾವುಂ'(ಕಥಾಸಂಕಲನ).