'ಆಯ್ದ ನಾಮಧಾರಿ ಕಥನಗೀತೆಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿನ ಅಧ್ಯಾಯಗಳು; ಅರ್ಜುನ ಜೋಗಿ - ದೇವಿ ಕೋಂ ಗಣಪಯ್ಯ ನಾಯ್ಕ ಗೇರಸೊಪ್ಪೆ, ಮಗಳು ನಾನೇ ಮಗನುವಾ ನಾನೇ - ಸೌ| ಮಾಸ್ತಿ ರಾಮನಾಯ್ಕ, ವಸ್ತಿ ಹೆಗಡೆ ಊರು, ಘಾತಕ ಅಣ್ಣ - ದಿ. ಗೌರಿ ಶಿವಪ್ಪನಾಯ್ಕ ಹೆಗಡೆ ಊರು, ನನಗೇ ಕುದ್ರಿಗೇ ವಂದೇ ಸೊಡ್ಲೇ - ಸೌ| ಮಾಸ್ತಿ ರಾಮನಾಯ್ಕ ಮೂರೂರು ವಸ್ತಿ: ಹೆಗಡೆ ಊರು, ದುಡುಕಿದ ಕೆಡುಕು - ತಿಮ್ಮಕ್ಕ ಕಂಚು ನಾಯ್ಕ ಹೆಗಡೆ ಊರು, ದುಡುಕಿದ ಕೆಡುಕು - ತಿಮ್ಮಕ್ಕ ಕಂಚು ನಾಯ್ಕ ಹೆಗಡೆ ಊರು, ಕೆಂಚಮ್ಮ - ದಿ. ಬೆಳಿಯಮ್ಮ ಪುಟ್ಟುನಾಯ್ಕ, ಹೊಸಾಕುಳ, ಅತ್ತೆ ಗೌರಮ್ಮ, ಸೊಸೆ ಹೊನ್ನಮ್ಮ - ದಿ. ಸೌ| ನಾಗಮ್ಮ ಮಾಸ್ತಿನಾಯ್ಕ, ಹೆಗಡೆ ಊರು, ಕೋಳಿ ಜನ್ಮ - ದೇವಿ ಗಣಪತಿ ನಾಯ್ಕ ಊರಕೇರಿ, ಕಾಸೀ ದೇಸಾಂತ್ರೇ ನೆಡುದಾನೇ - ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ, ಕಾಳಿಂಗರಾಯ - ದಿ. ನಾಗಮ್ಮ ನರಸ ನಾಯ್ಕ, ಮಿರ್ಜಾನ, ಸೂರ್ಯಚಕ್ರ; ದಿ. ನಾಗಮ್ಮ ಗೋವಿಂದ ನಾಯ್ಕ, ತಾರಿಬಾಗಿಲ, ಹೆಗಡೆ ಊರು ವಿಚಾರಗನ್ನು ನಾವು ಇಲ್ಲಿ ಕಾಣಬಹುದು.
ಜಾನಪದ ಭೀಷ್ಮ ಹಾಗೂ, ನಡೆದಾಡುವ ಜಾನಪದ ವಿಶ್ವಕೋಶ ಎಂದೇ ಖ್ಯಾತಿಯ ಡಾ.ಎಲ್.ಆರ್. ಹೆಗಡೆ ಅವರು ಜನಿಸಿದ್ದು1923ರಲ್ಲಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಅವರ ಹುಟ್ಟೂರು. ತಂದೆ ರಾಮಕೃಷ್ಣ ಹೆಗಡೆ, ತಾಯಿ ಮಹಾಲಕ್ಷ್ಮಿ. ಹೊಲನಗದ್ದೆಯಲ್ಲಿ ಪ್ರಾಥಮಿಕ ಶಿಕ್ಷಣ, ಗುಡೆ ಅಂಗಡಿಗಳಲ್ಲಿ ಹಾಗೂ ಕುಮಟಾದ ಗಿಬ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪಡೆದರು. 1946ರಲ್ಲಿ , ಮುಂಬಯಿ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. 1949ರಲ್ಲಿ ಬಿ.ಟಿ.ಪರೀಕ್ಷೆ ಉತ್ತೀರ್ಣರಾದರು ಹಾಗೂ 1950ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ...
READ MORE