ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರ ಕವಿತೆಗಳ ಸಂಗ್ರಹ ಕೃತಿ ’ಅಭಾವ’.
ಅಭಾವ, ಗಾಂಧಿ ಮತ್ತು ಎಂಟನೇ ಹೆನ್ರಿ, ಬೇರೊಬ್ಬ, ಕಾವ್ಯದ ಆತ್ಮಾನುಸಂಧಾನ, ಕುದುರೆಗಳು, ಈ ನಮ್ಮ ಕಾಲದಲ್ಲಿ ಏನೇನು ಚೆಂದ?, ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃ ದೇವತೆಗೆ ಒಂದು ಹಾಡು, ಪಕ್ಷಿಗಾಗಿ ಕಾದು, ಏನೋ ಸಾವೆನ್ನುವ , ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ, ವೃಕ್ಷ, ಸಿಂಬಲಿಸ್ಟ್ ಕಾವ್ಯ,ಮಹಾ ನಾಯಕ, ಪ್ರಜಾ ತಾಂತ್ರಿಕ ನ್ಯಾಯಾಧೀಶ, ಸಾವಿನ ಸನ್ನೆ, ಸಂಸಾರಿ, ಪ್ರಣಯ ಪಂಚಮಿ, ಸಭ್ಯ/ಪೋಲಿ ಮುಂತಾದ ಕವಿತೆಗಳ ಸಂಗ್ರಹ ಈ ಕೃತಿಯಲ್ಲಿದೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE