About the Author

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು.

ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷ (1992-93), ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಅಧ್ಯಕ್ಷ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಪೂನಾ ಕೇಂದ್ರ ಸರ್ಕಾರದ ಫಿಲಿಂ ಇನ್ಸಿಟ್ಯೂಟ್ ಅಂಡ್ ಟೆಲಿವಿಷನ್ (2003) ಪೂನಾದ ಅಧ್ಯಕ್ಷರಾಗಿದ್ದರು.

ಇಂಗ್ಲಿಷಿನಲ್ಲಿ ಎಂ.ಎ. ನಲ್ಲಿ ಸ್ವರ್ಣಪದಕ ಪಡೆದ ಇವರು ಸಂಸ್ಕಾರ ಕಥೆಗೆ ಚಲನಚಿತ್ರ ಪ್ರಶಸ್ತಿ, (1970) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1983), ರಾಜ್ಯೋತ್ಸವ ಪ್ರಶಸ್ತಿ (1984), ಜ್ಞಾನಪೀಠ ಪ್ರಶಸ್ತಿ (1994),  ಡಿಲಿಟ್ ಗೌರವ (1995), ಶಿಖರ ಸನ್ಮಾನ್ (1995), ಪದ್ಮಭೂಷಣ (1998) ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

ಕನ್ನಡದಲ್ಲಿ ನವ್ಯಸಾಹಿತಿಯಾಗಿ, ವಾದವಿವಾದಗಳನ್ನೆಬ್ಬಿಸಿದಂಥ ಸಂಸ್ಕಾರ ಕಾದಂಬರಿಯನ್ನು ಬರೆದ ಅನಂತಮೂರ್ತಿ ಅವರು ಅನೇಕ ಕಥೆ ಕಾದಂಬರಿಗಳನ್ನು ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಕೃತಿಗಳಿವು : ಸಂಸ್ಕಾರ, ಭಾರತೀಪುರ, ಘಟಶ್ರಾದ್ಧ, ಅವಸ್ಥೆ, ದಿವ್ಯ (ಕಾದಂಬರಿಗಳು) ಸೂರ್ಯನ ಕುದುರೆ, ಆಕಾಶ ಬೆಕ್ಕು ವಡಾನಿ, ಪ್ರಶ್ನೆ (ಕಥೆಗಳು) ಆವಾಹನೆ (ನಾಟಕ) ಸನ್ನಿವೇಶ, ಸಮಕ್ಷಮ (ವಿಮರ್ಶೆ) ದಾವ್ ದ ಜಿಂಗ್ (ಭಾಷಾಂತರ) ಇತ್ಯಾದಿ. 2014ರ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ನಿಧನರಾದರು.

ಯು.ಆರ್. ಅನಂತಮೂರ್ತಿ

(21 Dec 1932-22 Aug 2014)

Books by Author

BY THE AUTHOR

ABOUT THE AUTHOR