ಕವಿ ಬ. ಶಿವಮೂರ್ತಿ ಶಾಸ್ತ್ರಿಗಳು ಬರೆದ ಕವನ ಸಂಕಲನ-ಯುಗವಾಣಿ. ನಿಮ್ಮೆದುರೇ ದೇವನಿರುವಾಗ, ಯುಗವಾಣಿ, ಆತ್ಮಪಕ್ಷಿ, ಮೋಕ್ಷಮಾರ್ಗ, ಅನುಭವ ಮಂಟಪ, ಬಸವನ ಆದರ್ಶ ಮಾರ್ಗ, ನನ್ನದಾವ ಧರ್ಮ?, ದೇವ ನೀನೇಕೆ ಜನ್ಮ ಕೊಟ್ಟೆ? ಇಂತಹ ಪ್ರಶ್ನೆಗಳ ಮೂಲಕ ಕವಿತೆಗಳನ್ನು ಹೆಣೆದಿದ್ದು ಈ ಕವಿಯ ವಿಶೇಷ.
ಶರಣರ ವಚನಗಳ ಪ್ರಭಾವವನ್ನು ಇಲ್ಲಿಯ ಬಹುತೇಕ ಕವನಗಳಲ್ಲಿ ಕಾಣಬಹುದು. ಶರಣರಂತೆ ಅಧ್ಯಾತ್ಮವನ್ನು ವ್ಯಕ್ತಿಗತ ನೆಲೆಯಲ್ಲಿ ಸ್ವೀಕರಿಸಿ, ಸಾಮಾಜಿಕ ನೆಲೆಯಲ್ಲಿ ಆಡಂಬರ-ಡಂಭಾಚಾರಗಳನ್ನು ತಿರಸ್ಕರಿಸಿರುವುದು ಇಲ್ಲಿಯ ಕಾವ್ಯಗಳ ಮನೋಧರ್ಮವೂ ಆಗಿದೆ. ಒಟ್ಟು 25 ಕವನಗಳು ಸಂಕಲನಗೊಂಡಿವೆ.
ಶರಣ ಸಾಹಿತ್ಯ ವಿದ್ವಾಂಸ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿ ಪುತ್ರರು. ತುಮಕೂರಿನಲ್ಲಿ 23-2-1903 ರಂದು ಜನಿಸಿದರು. ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. 1936ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರಾದರು. ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಹೌದು. ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು.1966ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ, ...
READ MORE