ಯಾವ ಶಹರು ಯಾವ ಬೆಳಕು

Author : ಎಚ್.ಎಸ್. ಶಿವಪ್ರಕಾಶ್

Pages 112

₹ 120.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080- 2661 7100

Synopsys

‘ಯಾವ ಶಹರು ಯಾವ ಬೆಳಕು’ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅವರ ಕವನ ಸಂಕಲನ. ಈ ಕೃತಿಗೆ ಮೆಕ್ಸಿಕೋ ಬರಹಗಾರ್ತಿ ಮರ್ಲೀನ್ ಬೆನ್ನುಡಿ ಬರೆದಿದ್ದಾರೆ. ‘ಎಚ್.ಎಸ್. ಶಿವಪ್ರಕಾಶರ ಕಾವ್ಯವನ್ನು ಪ್ರವೇಶಿಸುವುದೆಂದರೆ ಬದುಕಿನ ಆಧ್ಯಾತ್ಮಿಕತೆ, ಪ್ರಕೃತಿ, ಪ್ರೇಮಗಳ ಆಳಗಳ ತುದಿಯ ತನಕ ಹೋಗುವ ಧೈರ್ಯ ಮಾಡುವುದು. ಇಲ್ಲಿನ ಜಾಗಗಳು, ದನಿಗಳು ಮೌನದಿರುಳುಗಳಲ್ಲಿ ಮರೆತು ಹೋದವರನ್ನು ಕೂಗಿಕರೆಯುತ್ತಾವಾದರೂ ಅದರಾಚೆಗಿನ ಪ್ರಜ್ಞಾವಂತ ಹೃದಯಗಳಲ್ಲಿರುವ ವಿವೇಕವು ಏಕಾಕಿತನದಲ್ಲಿ ಒಂದು ಶಬ್ದವನ್ನು ಬೆಳಕಿನ ಒಂದು ಪದ್ಯವನ್ನು, ಸಾಂತ್ವನವನ್ನು ಹುಡುಕುವವರ ಆತ್ಮಗಳನ್ನು ಹಿತವಾದ ಪಿಸುಮಾತಿನಂತೆ ಸ್ಪರ್ಶಿಸುತ್ತವೆ ಎನ್ನುತ್ತಾರೆ ಮರ್ಲೀನ್ . ಜೊತೆಗೆ ಈ ರೀತಿಯಲ್ಲಿ ಭಾರತದ ಈ ಮಹಾನ್ ಕವಿಯ ಕವಿತೆಗಳು ಶಾಂತ ಅಲೆಗಳಂತೆ ಪಿಸಪಿಸನೆ ಮರ್ಮರಿಸಿದರೂ ಗುಡುಗಿನ ಶಕ್ತಿ ಮತ್ತು ವೇಗದಿಂದ ನೆನಪಿನಲ್ಲಿ ಸದಾ ನೆಲೆಸುತ್ತವೆ. ಇತಿಹಾಸದ ಕ್ಷಣಗಳನ್ನು, ದೇವತೆಗಳನ್ನು ಸಿದ್ಧಪುರುಷರನ್ನು ತನ್ನ ಕಾವ್ಯಾತ್ಮಕ ಉಸಿರಿನಿಂದ ನೆನಪಿಸುತ್ತಾ ನಮ್ಮ ಮಾನವ ಪರಿಸ್ಥಿತಿಯ ನಡುವೆಯೂ ಗಗನವನ್ನು ಸೋಕುವ ಕಲಮದ ಗಂಧದಂತೆ ನಾವೂ ಅನಂತತೆಯನ್ನು ಮುಟ್ಟಬಹುದೆಂದು ಸೂಚಿಸುತ್ತದೆ ಎನ್ನುತ್ತಾರೆ.

ಇಲ್ಲಿ ಜೋಗುಳ, ಸೋಕು, ಎರಡು ಸೊನ್ನೆಗಳು, ಎಲ್ಲಿ ಬೇಕಾದರೂ ಹೀಗಾಗಬಹುದು, ನುಡಿಯ ನುಡಿ, ಗೊತ್ತಾಗಿದೆ ಈಗ ನನಗೆ, ಹೊಗಲುಬಿಡು ನಿನ್ನ ಹೃದಯವನ್ನು, ಶಿಶಿರವೇ ನನ್ನ ಋತು, ವಿಶ್ವರಂಗಭೂಮಿ ದಿನಾಚರಣೆಗೊಂದು ಕವಿತೆ, ಬುದ್ಧಗುರು ಅಂಗುಲಿಮಾಲನಿಗೆ ಹೇಳಿದ್ದು, ಬರುತ್ತೇನೆ ನಗರವೆ, ಥೀಬ್ಸ್ ನಗರಸ್ಥರಿಗೆ ತೈರ್ಸಿಯೆಸ್ ನೀಡಿದ ಎಚ್ಚರಿಕೆ, ಮೀದಿಯಾ ಪರಿಚ್ಛೇದ, ಕವಯತ್ರಿ ನಿದ್ದೆ ಹೋದಾಗ, ಹರಿದ ಸೀರೆ, ಮಹಾಕಾಳೀಸ್ತವರತ್ನ, ನಿಲುಗಡೆ, ರಿಯೋ ದಿ ಜೆನೆರೋದ ಏಸೂ ಮೂರ್ತಿ, ಕಪ್ಪುನದಿ, ಏಳು ಶಿವಪ್ರಕಾಶ ಏಳು, ಗುರುವಾಕ್ಕು-1, ಯಾವ ಷಹರು, ಯುಗಾದಿ ಹಿಂದಿನ ಸಂಜೆ, ಯಾಕೆ ಕವಿತೆ ಬರೆಯುವೆ, ಗೊಂಬೆ ಕತೆ, ತವರು, ಎಷ್ಟು ದೂರ ಹೋಗಬೇಕು ನಿನ್ನ ತೀರದಿಂದ, ಒಂದಾನೊಂದು ಕಾಲ, ಮಗಳಿಗೆ ಪಾಠ, ಯಾಯಾವ ರೂಪವನು ನಾನು ತಾಳಿದ್ದರೆ, ಕಾಡಿಗ್ಹೋದ ಪುಟ್ಟಿ, ಒಂದು ಗ್ರೀಕ್ ಪ್ರೇಮಕವಿತೆ, ಗದಗದ ತೋಂಟದಾರ್ಯರಿಗೆ ವಿದಾಯ, ವಿನ್ ಡಾರ್ ಎಂಬ ವಿಜ್ಞಾನಿಯ ಬೀಭತ್ಸ ಪ್ರಯೋಗ, ನಾನು ಬೆಕ್ಕಾದಾಗ, ತೆಲಮಂಕಾಗೆ, ಸಾಸಿವೆ, ಒಂದು ವಿರೂಪಿಕೆ, ಮೌನವಿಜ್ಞಾನ, ಸೇಬು ಮತ್ತು ವಿಲ್ಯಂ ಟೆಲ್, ಗಡಂಗು, ಬುದ್ಧ: ಸ್ವರಾದಿ ನಮನ, ಆ ಕವಯತ್ರಿ, ನನ್ನ ಆ ನಿದ್ದೆಯಿಂದ, ಬಾಬಾ ಸಾಹೇಬರ ದೀಕ್ಷಾಭೂಮಿ, ಭೂಕಂಪವಂತೆ, ನಿನ್ನ ತೀರ, ಓದಿಸಿಯೂಸ್ ಉವಾಚ, ಮತ್ತೊಂದು ಸ್ವಪ್ನನೌಕೆ, ಮಳೆ ಕೊಸ್ಟಾರಿಕಾದ ಸ್ಯಾನ್ ಹೋಸೆಯಲ್ಲಿ - ಸೇರಿದಂತೆ ಕಳಚಿಡು ನಿನ್ನ ಜೋಡುಗಳನ್ನು ಎಂಬ 51 ಕವನಗಳು ಸಂಕಲನಗೊಂಡಿವೆ.

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Reviews

ವಸಾಹತೋತ್ತರಕಾಲದ ಪ್ರಶ್ನೆಗಳು ಮತ್ತು ಶಿವಪ್ರಕಾಶಕರ ಕಾವ್ಯ 

ಶಿವಪ್ರಕಾಶರು ನಮ್ಮ ಕಾಲದ ಕವಿ. ಅದರ ಜೊತೆಗೆ ಅವರು ಅನೇಕ ಬಗೆಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡವರೂ ಹೌದು. ಅವರ ನಿಲುವು ಈ ದೃಷ್ಟಿಯಿಂದ ಒಂದು ಸೀಮಿತವಾದ ಜಗತ್ತಿಗೆ ಸಂಬಂಧಪಟ್ಟದ್ದು ಅಲ್ಲ. ಹಾಗೆ ನೋಡಿದರೆ ಅವರಿಗೆ ಅತ್ಯಂತ ವ್ಯಾಪಕವಾದ ಒಂದು ಚೌಕಟ್ಟೂ ಇದೆ. ಅವರಲ್ಲಿ ಸಮಕಾಲೀನ ವಾಸ್ತವದ ನಿರೂಪಣೆ ಮತ್ತು ಅದರ ಸ್ವರೂಪದಲ್ಲಿ ವ್ಯತ್ಯಾಸವಿದೆ. ಹಿಂದೆ ಇದ್ದ ರೀತಿಯು ಅವರ ಕವನಗಳಲ್ಲಿ ಕಾಣುವುದಿಲ್ಲ. ಈಗಿನ ವಾಸ್ತವವಾದದಲ್ಲಿ ಕಾಲವು ವ್ಯತ್ಯಾಸವಾಗುತ್ತದೆ. ಅದು ಬೇರೆ ಪತ್ರ, ಅವರ ಮಿಲರೇಪ (1997) ಮತ್ತು ಇವತ್ತಿನ ಅವರ ಕಾವ್ಯ ಯಾವ ತರು ಯಾವ ಬೆಳಕು ( 2021) ಹಾಗೂ ಅವರು ಮಾಡುತ್ತಿರುವ ಅನುವಾದಗಳು ಅತ್ಯಂತ ಮಹತ್ವದವು. ಮತ್ತು ಅದರಲ್ಲಿ ಕಾಲ ಮತ್ತು ಅದರ ನಿರೂಪಣೆಯು ಹಾಗೂ ಅದರ ಲಕ್ಷಣಗಳು ವ್ಯತ್ಯಾಸವಾಗುತ್ತದೆ. ಅದರ ಅನುಕಮತೆಯು ಭಿನ್ನವಾಗುತ್ತದೆ. 'ಮಿಲರೇಪ' ಮತ್ತು 'ಮಳೆಬಿದ್ದ ನೆಲದಲ್ಲಿ ಬರುವ ಭಿನ್ನತೆಗಳು ಈ ಕಾರಣದಿಂದ ಮಹತ್ವದ್ದು, ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಅವರು ರೂಮಿಯನ್ನು ಓದುತ್ತಾರೆ, ಅವರು ಅದನ್ನು ಅನುವಾದ ಮಾಡಬಲ್ಲರು. ಅಕ್ಕ ಮಹಾದೇವಿಯ ವಚನವನ್ನು ಇಂಗ್ಲಿಷಿಗೆ ಕೊಡಬಲ್ಲರು. ಅವರ ಕವಿತೆಗಳ ಆಶಯವು ಕೂಡಾ ಅತ್ಯಂತ ಸೀಮಿತವಾದ ಒಂದು ಸಂಗತಿಯನ್ನು ಹೇಳುತ್ತದೆ ಎಂದು ಭಾವಿಸುವಂತೆ ಇಲ್ಲ. ಅವರ ಕಾವ್ಯವು ಕೂಡಾ ಆತ್ಯಂತ - ಮಹತ್ವದ ಅಂಶಗಳ ಕಡೆಗೆ ತನ್ನ ಗಮನವನ್ನು ನೀಡಿದೆ. ಅನುಭಾವ ಮತ್ತು ಆದರ ಸ್ವರೂಪ ಹಾಗೂ ಅದರ ಮುಖಾಂತರ ಹೇಗೆ ನಿತ್ಯವನ್ನು ಜಿಗಿಯಬಹುದು ಎನ್ನುವುದನ್ನು ಸಮಗಾರ ಭೀಮವ ಹೇಳಿದರೆ ಅದೇ ಪದ್ಯದಲ್ಲಿ ಹೆಣ್ಣಿನ ಮಾತೃತ್ವ ಮತ್ತು ಪುರುಷನ ಶಿಶುತನವು ಹೇಗೆ ಇರುತ್ತದೆ ಎಂದು ಹೇಳುತ್ತಾರೆ. ಹೆಣ್ಣಿನ ಎದುರು ಗಂಡು ಮಗುವಾಗುವುದು ಒಂದು ವಿಶಿಷ್ಟವಾದ ಚಿತ್ರವೂ ಹೌದು. ಒಮ್ಮೆ ಅವರ ಕವಿತೆಗಳನ್ನು ಓದಿದವರು ಅವರ ಕವಿತೆಗಳು ಮತ್ತೆ ಪುರಾಣದ ಕಡೆಗೆ ಹೋಗುವುದನ್ನು ಪ್ರಗತಿ ವಿರೋಧಿಯಾದ ಒಂದು ನಿಲುವು ಎಂದೂ ಹೇಳಿದ್ದು ಇಲ್ಲಿ ನೆನಪಿಗೆ ಬರುತ್ತದೆ. ಆದರೆ ವಿಷಯವು ಅಷ್ಟು ಸುಲಭವಲ್ಲ. ಇದು ಸುಮ್ಮನೆ ಬರುವ ಹೇಳಿಕೆಗಳು, ಇದು ಅವರ ಕವಿತೆಗಳ ಆಶಯವನ್ನು ಅತ್ಯಂತ ಸರಳ ಮಾಡಿದಂತೆ ಕಾಣುತ್ತದೆ. ಅವರಿಗೆ ಒಂದು ನಿರ್ದಿಷ್ಟವಾದ ತಾತ್ವಿಕ ಗ್ರಹಿಕೆಯೂ ಇದೆ. ಅದನ್ನು ನಾವು ಈವತ್ತಿನ ಅವರ ಕವಿತೆಗಳಲ್ಲಿಯೂ ಕಾಣುತ್ತೇವೆ. ಅವರ ಬರಹದ ಚೌಕಟ್ಟು ಅತ್ಯಂತ ದೊಡ್ಡದು ಹೌದು.

ಹಾಗೆ ನೋಡಿದರೆ ಯಾವುದೇ ಸ್ಪಷ್ಟತೆಯು ಇಲ್ಲದೆ ಬರೀ ವಾದಕ್ಕಾಗಿ ವಾದವೆನ್ನುವ ನಿಲುವನ್ನು ಹೆಚ್ಚು ಜನರು ಕೊಂಡಾಡುತ್ತಾರೆ. ಅದರಲ್ಲಿ ಒಂದು ಸಿನಿಕತೆಯ ಕಾರಣವೂ ಇದೆ. ಶಿವಪ್ರಕಾಶರ ಹಾದಿ ಈ ಬಗೆಯದು ಅಲ್ಲ ಎನ್ನುವುದು ಹೆಚ್ಚು ಸ್ಪಷ್ಟ. ಅವರ ಕವಿತೆಗಳು ಮುಖ್ಯವಾಗಿ ಈವತ್ತು ನಮ್ಮ ಸಮಾಜ ಮತ್ತು ಸಂಸ್ಕೃತಿಯ ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತವೆ. ಅದನ್ನು ಗಂಭೀರ ಎಂದು ಪರಿಗಣಿಸುತ್ತವೆ. ಇವತ್ತು ನಾವು ಮತ್ತೆ ಮತ್ತೆ ಯಾಕೆ ಅವರ ಕವಿತೆಗಳನ್ನು ಓದಲು ಅತ್ಯಂತ ಮುಖ್ಯವಾಗಿರುವ ಕಾರಣವೂ ಇದೇ ಆಗಿದೆ. ಅವರ ತಾತ್ವಿಕ ದೃಷ್ಟಿಕೋನವು ಮತ್ತೆ ಒಂದು ಚೌಕಟ್ಟಿನಲ್ಲಿ ಇದೆ ಎಂದು ಯಾರೂ ತಿಳಿಯಬಾರದು, ಅದರಲ್ಲಿ ಸಂಕೇತಗಳು ಇವೆ. ವಾಸ್ತವತೆಯ ಚಿತ್ರಣಗಳೂ ಇವೆ. ಬ್ರಿಟಿಶರು ಹೋದರು. ಹೋಗುವಾಗ ಕೆಲವು ಸಂಗತಿಗಳನ್ನು ಬಿಟ್ಟು ಹೋದರು ಎನ್ನುವ ವ್ಯಂಗ್ಯವೂ ಇದೆ.

ವಾಸ್ತವವಾಗಿ ಅವರ ಕವಿತೆಗಳಲ್ಲಿ ತಾತ್ವಿಕತೆ ಮತ್ತು ಅದರ ದೃಷ್ಟಿಕೋನಗಳಿಗೆ ಅವುಗಳದೇ ಆದ ಆಯಾಮವೂ ಇರುತ್ತದೆ. ಅವರ 'ಮಿಲರೇಪ' ಬಂದುದು ಈ ಹಿನ್ನೆಲೆಯಲ್ಲಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು, (1977) ವಾಸ್ತವ ಮತ್ತು ಅದರ ಪಾರದರ್ಶಕತೆಯು ಅನೇಕ ಕಾರಣಗಳಿಂದ ಆಗುತ್ತದೆ. ಅವರ ಮೊದಲ ಕವನ ಸಂಕಲನದಲ್ಲಿ ಬರುವ 'ನಿಲ್ದಾಣದಲ್ಲಿ' ಕವಿತೆಯು ಇದನ್ನು ಹೇಳುತ್ತದೆ. ಅನುಭವ ಮತ್ತು ವಾಸ್ತವ ಹಾಗೂ ದೃಷ್ಟಿಕೋನವನ್ನು ಹೊಂದಲು ನಮಗೆ ತಾತ್ವಿಕತೆಯು ಬೇಕಾಗುತ್ತದೆ, ಆದರೆ ಯಾವಾಗ ನಾವು ಇದನ್ನು ಹೇಗೆ ನೋಡುತ್ತೇವೆ ಮತ್ತು ಯಾಕೆ ನೋಡುತ್ತೇವೆ ಎನ್ನುವುದೂ ಬಹಳ ಮುಖ್ಯವಾಗಿದೆ. ಅವರ 'ಅಣುಕ್ಷಣ ಚರಿತ್ರೆ'ಯ ಕೆಲವು ಪದ್ಯಗಳು ಪುರಾಣದ ಚೌಕಟ್ಟನ್ನು ಹೊಂದಿದೆ, ಹೋಗು ದಕ್ಷನ ಮಗಳೆ ಎನ್ನುವ ಅವರ ಕವಿತೆಯ ಸಾಲುಗಳು ವಿವರಿಸುವುದು ಬರೀ ಶಿವ ಮತ್ತು ಪಾಶ್ವತಿಯ ಸಂಬಂಧವನ್ನು ಅಲ್ಲ, ಅದರ ಮೂಲಕ ಅಲ್ಲಿ ಗಂಡಿನ ಅನಾಥತೆಯ ಪ್ರಶ್ನೆಯೂ ಬರುತ್ತದೆ. ವಾಸ್ತವವಾಗಿ ಇದನ್ನು ನೋಡುವಾಗ ಮತ್ತೊಂದು ಅಂಶವನ್ನು ನೋಡಬೇಕಾಗುತ್ತದೆ. ಪುರಾಣಗಳನ್ನು ನೋಡುವಾಗ ನಾವು ಅದನ್ನು ಬರೀ ಪುರಾಣವಾಗಿ ಮಾತ್ರವೇ ನೋಡಬೇಕಾ ಅಥವಾ ಅದನ್ನು ನೋಡಲು ಬೇರೆ ಕ್ರಮವು ಇದೆಯಾ ಅನ್ನುವುದೂ ಬಂದಿತ್ತು. ಆಗ ವೆಬರ್ ಇದನ್ನು ನೋಡುವಾಗ ಮತ್ತೊಂದು ಅಂಶವನ್ನು ನಮ್ಮ ಗಮನಕ್ಕೆ ತಂದಿದ್ದ. ಅವನದು ಬರೀ ಸಮಾಜಶಾಸ್ತ್ರದ ವಿವರಣೆಯು ಅಲ್ಲ. ಆದರೆ ಮನೋವೈಜ್ಞಾನಿಕವಾದ ಒಂದು ಸಂಗತಿಯನ್ನೂ ಅವನು ಹೇಳುತ್ತಾನೆ. ಅದನ್ನು ಅವನು ಹೇಳುವಾಗ ಅದರಲ್ಲಿ ಮತ್ತೆ ಬೇರೆ ಅಂಶಗಳನ್ನು ವಿವರಿಸಿದ್ದಾನೆ. ಆರೂ ತಾತ್ವಿಕ ಸಂಗತಿಯೇ ಆಗಿದೆ. ಅಂದರೆ ಅದನ್ನು ನಿರಾಕರಿಸಿಕೊಂಡು ನಾವು ಮತ್ತೆ ಯಾವುದೇ ಬದ್ಧತೆಯ ಅಗತ್ಯವಿಲ್ಲವೆಂದು ಹೇಳಬೇಕಾಗಿಯೂ ಇಲ್ಲ. ವೆಬರ್‌ನ ಪ್ರಕಾರ ಯಾವುದೇ ಪುರಾಣವು ನಮ್ಮ ನಂಬಿಕೆಯನ್ನು ಮಾತ್ರವೇ ಹೇಳುವುದಿಲ್ಲ. ಅವುಗಳು ಬರೀ ಧರ್ಮವೂ ಅಲ್ಲ, ಅದನ್ನು ನೋಡುವಾಗ ನಾವು ಅದರ ಹಿನ್ನೆಲೆಯಲ್ಲಿ ಇರುವ ಸಾಮಾಜಿಕ ಮತ್ತು ಚಾರಿತ್ರಿಕ ಹಿನ್ನೆಲೆಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ರಾಜಕಾರಣ ಮತ್ತು ಸಾಂಸ್ಥಿಕ ಹಿನ್ನಲೆಯೂ ಇರುತ್ತದೆ. ಆವುಗಳನ್ನು ರಾಜಕಾರಣವೂ ನಿಲ್ದಾಣ ಮಾಡುತ್ತದೆ. ಅದರಲ್ಲಿ ವರ್ಗಗಳ ವಿವರಣೆಯು ಇರುತ್ತದೆ. ಅವುಗಳು ಬರೀ ಭಾವನಾತ್ಮಕ ಸಂಗತಿಯೂ ಅಲ್ಲ ಇದರ ಅರಿವು ಶಿವಪ್ರಕಾಶರಲ್ಲಿಯೂ ಕಾಣುತ್ತೇವೆ. ಅವರ ನಾಟಕಗಳಲ್ಲಿಯೂ ಇದೇ ಬಗೆಯ ನಿಲುವನ್ನು ನಾವು ಕಾಣುತ್ತೇವೆ. ಸಿಲಪ್ಪದಿಕಾರಂ, ಮಂಟೇ ಸ್ವಾಮಿ ಇದನ್ನು ಹೇಳುತ್ತವೆ. ಅವರ ವಾದವೂ ಅತ್ಯಂತ ಖಚಿತ, ಅವರು ಬಲಪಂಥೀಯರು ಅಲ್ಲ. ಇದನ್ನು ಅವರ ಸ್ಪಷ್ಟವಾದ ನಿಲುವೂ ಹೌದು, ಯಾವುದೇ ಸ್ಪಷ್ಟತೆಯು ಇಲ್ಲದೆ ಬರೀ ವಾದಕ್ಕಾಗಿ ವಾದವನ್ನುವ ನಿಲುವನ್ನು ಹೆಚ್ಚು ಜನರು ಕೊಂಡಾಡುತ್ತಾರೆ. ಅದರಲ್ಲಿ ಒಂದು ಸಿನಿಕತೆಯ ಕಾರಣವೂ ಇದೆ.

ವಾಸ್ತವವಾದದಲ್ಲಿ ಬರುವ ಸಮಾಜವೂ ಒಂದು ಲಕ್ಷಣವು ಬದಲಾಗುತ್ತದೆ. ಆದರೆ ಅದನ್ನು ಅಧ್ಯಯನ ಮಾಡುವಾಗ ನಾವು ಸಮಾಜಶಾಸ್ತ್ರವನ್ನೂ ಬಳಸಿಕೊಳ್ಳಲು ಸಾಧ್ಯ. ವಾಸ್ತವವಾದಲ್ಲಿ ಒಂದು ಕುಟುಂಬ, ಜಾತಿ, ಧರ್ಮ ಮುಂತಾದವುಗಳಿಗೆ ಅವಕಾಶವಿದೆ. ಮತ್ತು ಅದನ್ನು ನಾವು ಹೇಗೆ ಬೇಕಾದರೂ ಗ್ರಹಿಸಬಹುದು. ಅಂದರೆ ಅದರಲ್ಲಿ ಪಾರದರ್ಶಕ ಭಾಷೆಯೂ ಇರುತ್ತದೆ. ಆಡಗುವಿಕೆಯು ಅದರಲ್ಲಿ ಇಲ್ಲ. ಮತ್ತು ಗ್ರಹಿಸಲು ನಮಗೆ ಅವಕಾಶವೂ ಹೇರಳವೂ ಇದೆ. ಅದರಲ್ಲಿ ಆಯಾ ಭಾವನೆಗಳು ಮತ್ತು ಅದರ ವಿವರಣೆಗೆ ಅವಕಾಶವೂ ಇರುತ್ತದೆ. ಭಾವನೆಯು ಕೂಡಾ ಆದರಲ್ಲಿ ಮಹತ್ವದ ಜಾಗವನ್ನು ಪಡೆಯುತ್ತದೆ. ಈ ಜಾತನಲ್ಲದವನಿಗೆ ಜಾತಿ ಯಾವುದು ತಾಯ ?' ಆದರೆ ಅದನ್ನೇ ಅವರ ವಾಸ್ತವವಾದಿ ಕವಿತೆಗಳಿಗೆ ಹೇಳುವಂತೆ ಇಲ್ಲ. ಸಮಗಾರ ಭೀಮವ್ವ ಕವಿತೆಯಲ್ಲಿ ಜಾತಿ ಮತ್ತು ಯೋಗಿಯನ್ನು ನೋಡುವ ಕ್ರಮವೇ ಬೇರೆ. ಆದರೆ ಮಿಲರೇಪದ ಮೊದಲ ಕವಿತೆಯಲ್ಲಿ ನವಿಲು ಒಂದು ರೂಪಕವಾಗುತ್ತದೆ.

ವಾಸ್ತವವಾದವು ತನಗೆ ಬೇಕಾದ ಸಂಜ್ಞೆಗಳನ್ನು ರೂಪಿಸುತ್ತವೆ. ಅದನ್ನು ವ್ಯಕ್ತಿಯು ಓದಲು ತನಗೆ ಬೇಕಾದ ಏಕಾಂತತೆಯನ್ನು ಪಡೆಯಬಹುದು. ಆದರೆ ನವ್ಯಕಾವ್ಯದಲ್ಲಿ ಇದು ಭಿನ್ನ. ಶಿವಪ್ರಕಾಶರ ಕವಿತೆಗಳು ವಾಸ್ತವವನ್ನು ಹೇಳುವಾಗಲೂ ಒಂದು ಭಿನ್ನವಾದ ನಿಲುವನ್ನು ತಳೆಯುತ್ತಾರೆ. ಆದರ ಸ್ವರೂಪವು ಬೇರೆಯಾಗಿದೆ. ಅವರು 'ಜನವರಿ ಒಂದು' ಎನ್ನುವ ಕವನವನ್ನು ಬರೆದಿದ್ದಾರೆ. ಅದರಲ್ಲಿ ಬರುವ ಸಂಗತಿಗಳು ವಾಸ್ತವವನ್ನು ಹೇಳುತ್ತವೆ. ಅದು ಮುಖ್ಯವಾದ್ದು ಎನ್ನುವುದು ಒಂದು ಅಂಶವಾದರೆ ಅದರ ಮತ್ತೊಂದು ಮುಖವು ವಾಸ್ತವವನ್ನು ದಾಟಿ ಕಾಲವನ್ನು ದಾಟುವ ಸಂಗತಿಯನ್ನು ಸೂಚಿಸುತ್ತಾ ಹೊಸ ಧ್ವನಿಯನ್ನು ಹೊರಡಿಸುತ್ತದೆ. ಅವರ 'ಚಂದ್ರ ಮತ್ತು ಗಡಿಯಾರ " ಕವಿತೆಯನ್ನು ಈ ದೃಷ್ಟಿಯಲ್ಲಿ ನಾವು ಗಮನಿಸಬೇಕು.

ಸೌಂದರಾತ್ಮಕವಾದ ಸನ್ನಿವೇಶವೆಂದು ಹೇಳುತ್ತಾನೆ. ಈ ಅರ್ಥದಲ್ಲಿ ಅವರು ತಳೆಯುವ ನ ಕೂಡ ಅತ್ಯಂತ ಮುಖ್ಯವಾದು, ಶಿವಪ್ರಕಾಶದಲ್ಲಿ ಹಾಗೆ ಎನ್ನುವದು ತಾತ್ವಿಕ ಆಯಾಮದ ಬದು ಬರುತ್ತದೆ. ಆದ್ದರಿಂದಲೇ ಶಿವಪ್ರಕಾರರು ಕಾವ್ಯದಲ್ಲಿ ಮಂಡಿಸುವ ವಿಶಿಷ್ಟವಾದ ಈ ಅ ಅವರ ಮಾವಿನ ಕಾಲ' ಪದ್ಯವನ್ನು ಇಲ್ಲಿ ನಡುಮಾಡಿಕೊಳ್ಳಬಹುದು. ಅವರ ನಿಮ ಕವಿತೆಗಳು ನವವಲ್ಲ, ಅದನ್ನು ದಾಟಿದೆ, ಅವರ ಕವಿತೆಗಳು ಕಾವ್ಯದ ಹೊಸದಾದ ಸಾರ ಹೇಳಿದೆ. ಆದ್ದರಿಂದ ಅದು ಒಂದು ವಿಷಯನಿವಾದ ನೆಲೆಯಲ್ಲಿ ಮಾತ್ರವೇ ಆಶ್ರಮ ಪಡೆಯುವದಿಲ್ಲ. ಇಲ್ಲಿ ಆಧುನಿಕತೆಯನ್ನು ಕುರಿತು ಹೇಳಬೇಕು, ಆದರೆ ಯಾವುದನ್ನು ನಾವು ಇ ಆಧುನಿಕತೆಯೆಂದು ಹೇಳುತ್ತೇವೆಯೋ ಅದು ಬರಿ ವಿಷಯನಿಷ್ಟವಾದ ನಿಲುವನ್ನು ಪಡೆಯುತ್ತದೆ ಅಂದರೆ ಅದರಲ್ಲಿ ವ್ಯಕ್ತಿ ಮತ್ತು ಅವನ ಅಂತರಂಗಿಕವಾದ ನಿಲುವು ಮಾತ್ರವೇ ಇರುತ್ತದೆ, ಅತ್ಯಂತ ಪ್ರಗತಿಪರವಾದ ಯಾವುದೇ ನಿಲುವುಗಳು ವಾಸ್ತವವಾದದಲ್ಲಿ ಬೇರೆಯಾಗುತ್ತದೆ. ಅದರಲ್ಲಿ ಸಾಮಾಜಿಕ ಮತ್ತು ಚಾರಿತ್ರಿಕ ಮುಖಾಮುಖಿಯಾಗುತ್ತವೆ. ವಾಸ್ತವವಾದದಲ್ಲಿ ಭಾಷೆ ಮತ್ತು ಆದರ ನೀತಿಗಳು ಬೇರೆಯಾಗುತ್ತವೆ. ಮತ್ತು ಅದರಲ್ಲಿ ವಿಶಿಷ್ಟತೆಯು ಇರುತ್ತದೆ. ವಾಸ್ತವವಾದದಲ್ಲಿ ಲೇಖಕರ ಹೇಳುವ ವಿಚಾರಗಳು ಅದರಲ್ಲಿ ನೇರವಾಗಿಯೂ ವ್ಯಕ್ತವಾಗುತ್ತದೆ. ಅದು ಸಮಾಜ ಮತ್ತು ಅದರ ಸ್ವರೂಪವನ್ನು ಭಾಷೆಯಲ್ಲಿ ಹೇಳುತ್ತದೆ. ಸಮಾಜ ಮತ್ತು ಅದರ ಸತ್ಯಗಳು ವ್ಯಕ್ತವಾಗುತ್ತವೆ. ವ್ಯಕ್ತಿಯ ಆನುಭವಗಳು ಭಾಷೆಯ ಮೂಲಕ ಸಾರಜನಿಕವಾಗುತ್ತದೆ ಎಂದು ಲುಕಾಕ್ಸ್ ಹೇಳುತ್ತಾನೆ. ಯಾವುದಾ ಸಾಮಾಜಿಕ ಜೀವನದ ಸಮಗ್ರತೆಯೆನ್ನುವುದೂ ಈ ಮೂಲಕ ವ್ಯಕ್ತವಾಗುತ್ತದೆ, ಆದರೆ ಬಹುತ ಮತ್ತು ಅದರ ಸ್ವಭಾವಗಳನ್ನು ಭಕ್ತಿನ್ ಹೇಳುತ್ತಾನೆ. ಎಲ್ಲಿ ಬೇಕಾದರೂ ಹೀಗಾಗಬಹುದು ಮತ್ತು ನಿಲುಗಡೆ' ಇದನ್ನು ಹೇಳುತ್ತವೆ.

ಶಿವಪ್ರಕಾಶರಲ್ಲಿ ಸ್ಥಳ ಮತ್ತು ಅದರ ಪುರಾಣಗಳು ಯಾವತ್ತೂ ಬೇರೆಯಾಗಿದೆ. ಆದರ ಇದು ಇಪ್ಪತ್ತನೆಯ ಶತಮಾನದಲ್ಲಿ ನಡೆದ ಅನೇಕ ಚರ್ಚೆಗಳ ಕೇಂದ್ರವೂ ಹೌದು. ಶುರಾವೆಗಳಾಗಿವೆ. ಒಂದು ಸಂಘರ್ಷತಾಕವಾದ ಪರಿವರ್ತನೆಯನ್ನು ನಾವು ಕಾಣುತ್ತೇವೆ. ಇದರಲ್ಲಿಯೂ ಅಂತರ ಮತ್ತು ಅನನ್ಯತೆಯ ಪ್ರಶ್ನೆಯು ಬಹಳ ಮುಖ್ಯವಾಗಿದೆ. ಯಾವುದನ್ನು ನಾವು ಈವತ್ತು ವಸಾಹತು ಪೂರ್ವ ಎಂದು ಹೇಳುತ್ತೇವೆಯೋ ಅದು ಗತವಾಗಿದೆ. ಅದು ನಮ್ಮ ಭೂತಕಾಲವನ್ನು ಹೇಳುತ್ತದೆ. ಇದನ್ನು ಹೇಳುವಾಗಲೂ ಅನೇಕ ವಿಚಾರಧಾರೆಗಳು ಸ್ಥಳವನ್ನು ಬಿಟ್ಟು ವಿಶ್ವಾತ್ಮಕವಾದ ಸಂಗತಿಗಳನ್ನು ಕೈಗೆ ತೆಗೆದುಕೊಂಡಿವೆ. ಶಿವಪ್ರಕಾಶರಲ್ಲಿ ವಾದಗಳು ಸ್ಥಳ ಮತ್ತು ಕಾಲವನ್ನು ಮೀರಿವೆ. ಒಂದು ಸಂಘರ್ಷವನ್ನು ರೂಪಿಸುವಾಗ ಅದರ ಕಾರಣಗಳು ಏನು ಎಂದು ಯೋಚನೆಯನ್ನು ಮಾಡಿಸುತ್ತಾರೆ. ವಾಸ್ತವವಾಗಿ ಯಾವುದೇ ಸಂಘರ್ಷಗಳು ವಸಾಹತೋತ್ತರ ಸನ್ನಿವೇಶದಲ್ಲಿ ನಡೆದಾಗ ಅದರಲ್ಲಿ ವಸಾಹತು ಮತ್ತು ಅದರ ರಾಜಕಾರಣವು ಎದ್ದು ಕಾಣಿಸುವುದಿಲ್ಲ. ನಮ್ಮ ಆಧುನಿಕ ಜೀವನದ ಕ್ರಮಗಳು ಬದಲಾಗಿವೆ. ಮತ್ತು ಅವುಗಳು ರೂಪಾಂತರಗೊಂಡಿವೆ. ಇದನ್ನೇ ಶಿವಪ್ರಕಾಶರು ಹೇಳುತ್ತಿದ್ದಾರೆ. ಜಾಗತೀಕರಣವು ನಮಗೆ ಒಂದು ಬದಲನ್ನು ತಂದಿದೆ. ಅದರ ಪರಿಣಾಮವು ನಮ್ಮ ಸಂಕಥನಗಳ ಮೇಲೆಯೂ ಆಗಿದೆ. ಸಾಂಸ್ಕೃತಿಕ ಭಿನ್ನತೆಗಳು ಮತ್ತು ಅದರ ರೂಪಗಳು ಈವತ್ತು ಬೇರೆ ಬೇರೆ ಹಂತವನ್ನು ತಲುಪಿವೆ. ಸಂಸ್ಕೃತಿ ಮತ್ತು ಅನ್ಯದ ನಡುವೆ ಇರುವ ಅವಕಾಶಗಳನ್ನು ಈವತ್ತು ನಾವು ಅಷ್ಟು ಸುಲಭವಾಗಿ ನೋಡುವುದೂ ಸಾಧ್ಯವೇ ಇಲ್ಲ. ಹೊಸ ಮಾದರಿಯ ಸಂಕೇತಗಳು ನಮ್ಮ ನಡುವೆಯೇ ಇವೆ. ಒಂದು ಸಂಸ್ಕೃತಿ ಮತ್ತು ಮತ್ತೊಂದು ಸಂಸ್ಕೃತಿಯ ನಡುವೆ ಒಂದು ಅವಕಾಶವೂ ಇದೆ. ಆ ಜಾಗವನ್ನು ಈವತ್ತು ಭರ್ತಿ ಮಾಡುತ್ತಿರುವುದು ಯಾವುದು ಎನ್ನುವುದೇ ಮುಖ್ಯವಾದ ಪ್ರಶ್ನೆ. ಕೆಲವು ಜನಾಂಗಗಳು ಸಾಮೂಹಿಕವಾಗಿಯೂ ಬದಲಾಗಿವೆ. ರಾಷ್ಟ್ರ ಮತ್ತು ಅದರ ಅರ್ಥವನ್ನು ಈಗ ಯಾರು ಹೇಗೆ ಬೇಕಾದರೂ ಬಳಸಬಹುದು ಎನ್ನುವುದೂ ನಮಗೆ ದೊಡ್ಡ ತೊಡಕಾಗಿದೆ, ಜಾಗತೀಕರಣ ಮತ್ತು ಭವಿಷ್ಯತ್ತಿನ ಪರಿಣಾಮವನ್ನು ನಾವು ಈಗ ಹೇಗೆ ನೋಡಬಹುದು ಎನ್ನುವುದೂ ಮುಖ್ಯವಾದ ಪ್ರಶ್ನೆ. ಅವರು ವಾಸ್ತವವಾಗಿ ಸಂಸ್ಕೃತಿಯನ್ನು ಹೆಚ್ಚು ವೈಭವೀಕರಿಸಬೇಕಾಗಿಯೂ ಇಲ್ಲ, ಅವರ ವಿವರಣೆಗಳಲ್ಲಿ ಭಿನ್ನತೆಗಳು ಇವೆ, ಹಾಗೆಂದು ಅದು ಎಲ್ಲವನ್ನು ತುಂಬುವ ಗೋಣಿರ್ಚಿಲವು ಅಲ್ಲ. ನಮಗೆ ರಾಷ್ಟ್ರೀಯತೆಯು ಅನೇಕವನ್ನು ಹೇಳಿದೆ, ಅದು ಸಮೂಹವನ್ನು ಗುರುತಿಸಲು ಒಂದು ಮಾನದಂಡವನ್ನು ಕೊಟ್ಟಿರುವುದೂ ನಿಜ. ಒಂದನ್ನು ಸಮಷ್ಟಿಯಾಗಿ ನೋಡಿ ಎಂದೂ ವಿವರಿಸಿದೆ, ಸಂಸ್ಕೃತಿ ಮತ್ತು ಅದರ ಮೌಲ್ಯವನ್ನು ಅದು ನೋಡಿದ ಕ್ರಮವು ಬೇರೆಯಾಗಿದೆ. ಆದರೆ ಈವತ್ತು ರಾಷ್ಟ್ರವು ಆತಂಕಕಾರಿಯಾಗಿದೆ. ಕೆಲವರಿಗೆ ಮಾತ್ರವೇ ಇರುವ ರಾಷ್ಟ್ರವೆಂದು ಕೋಮುವಾದವು ಹೇಳುತ್ತದೆ. ಧರ್ಮ ಮತ್ತು ರಾಷ್ಟ್ರವನ್ನು ರಾಷ್ಟ್ರೀಯತೆಯ ಆಂದೋಲನವು ಹೇಳಿದ್ದಕ್ಕೂ ಈಗ ನಡೆಯುತ್ತಿರುವುದಕ್ಕೂ ಕೆಲವು ವ್ಯತ್ಯಾಸಗಳು ಇವೆ. ರಾಷ್ಟ್ರೀಯತೆಯು ಧರ್ಮವನ್ನು ಹೆಚ್ಚು ಸಾಮಾಜೀಕರಣ ಮಾಡಲು ಯತ್ನವನ್ನು ಮಾಡಿತು. ಆಗಿನ ರಾಷ್ಟ್ರೀಯತೆಯು ಆಗಿನ ಚಾರಿತ್ರಿಕ ತುರ್ತು, ಆದರೆ ಈಗ ಪರಿಸ್ಥಿತಿಯು ಬದಲಾಗಿದೆ. ಈಗ ಸಾಂಸ್ಕೃತಿಕ ಸಂಕರಗಳು ಬೇರೆ ಬೇರೆ ರೀತಿಯಲ್ಲಿ ನಡೆದಿವೆ. ಕೆಲವು ಜನಾಂಗಗಳು ಬೇರೆ ಪರಿವರ್ತನೆಯನ್ನು ಕಂಡಿವೆ. ಜನಾಂಗ ಮತ್ತು ಅದರ ಶ್ರೇಣೀಕರಣದ ರೂಪಗಳು ಬದಲಾಗುತ್ತಿವೆ. ಖಾಸಗಿ ಮತ್ತು ಸಾರ್ವಜನಿಕ ಎನ್ನುವುದೂ ಬದಲಾಗುತ್ತಿವೆ. ಸಾಂಸ್ಕೃತಿಕ ಸಂಕರತನವು ಬೇರೆ ಬೇರೆ ಪರಂಪರೆಯನ್ನು ಹುಟ್ಟು ಹಾಕುತ್ತವೆ. ಇದರ ಕಡೆಗೆ ಶಿವಪ್ರಕಾಶ್ ಗಮನವನ್ನು ಹರಿಸುತ್ತಾರೆ, ಆದ್ದರಿಂದಲೇ ಅವರ ಅನೇಕ ಕವಿತೆಗಳಿಗೆ ವಿವಿಧ ಆಯಾಮಗಳು ದೊರೆಯುತ್ತವೆ. ಒಂದು ಸಾಲನ್ನು ಇಲ್ಲಿ ಉಲ್ಲೇಖಿಸಬೇಕು:

'ಯಾವ ಕೂಸು ಅಳುತಾ ಇದೆ
 ಹಗಲಿರುಳು ಎನ್ನದೆ? '

ಯಾವುದು ಯಾವುದನ್ನು ಹೇಗೆ ಸ್ವೀಕರಿಸುತ್ತಿದೆ ಎನ್ನುವುದೇ ಈಗ ನಮ್ಮ ನಡುವೆ ಇರುವ ಸಮಸ್ಯೆಯೂ ಹೌದು. ಸಂಕರವೆನ್ನುವುದೇ ವಾಸ್ತವವಾಗಿ ಈಗ ಭಿನ್ನವಾದ ಪರಿಸ್ಥಿತಿಯನ್ನು ಸೂಚಿಸುತ್ತದೆ. ಯಾವುದು ಮಡಿ ಮತ್ತು ಯಾವುದು ಮೈಲಿಗೆ ಎನ್ನುವುದನ್ನು ಈಗ ಬೇರೆ ರೀತಿಯಲ್ಲಿಯೂ ಕಾಣಬೇಕಾಗುತ್ತದೆ. ಕೆಲವನ್ನು ಯಾವುದೋ ಒಂದು ಸ್ವೀಕರಿಸುತ್ತದೆ. ಆದರೆ ಸ್ವೀಕಾರವು ಅಷ್ಟು 'ಯುವುದೂ ಇಲ್ಲ. ಅದು ಒಂದು ಭಾಗ ಮಾತ್ರವೇ ಆಗಿದೆ. ಆದರೆ ಮತ್ತೊಂದು ರೂಪವು ಬೇರೆ ಇರಲು ಸಾಧ್ಯ. ಹೊಸ ಪರಂಪರೆಗಳು ಹುಟ್ಟುವ ವಿಧಾನವು ಮಾತ್ರ ಕುತೂಹಲಕಾರಿಯಾಗಿದೆ. "ನಾವು ಬೆಳೆದು ದೊಡ್ಡವರಾದ ಮೇಲೆ ಅವುಗಳಿಗೆ ಗುಲಾಮರಾಗಿದ್ದೇವೆ” ('ಯಾವ ಶಹರು, ಯಾವ ಬೆಳಕು) ಆದ್ದರಿಂದಲೇ ಇಲ್ಲಿ ಅವರು ವಾಸ್ತವವಾಗಿ ಯಾವುದು ಹೆಚ್ಚು ಶಕ್ತಿಯುತವಾಗಿದೆ ಮತ್ತು ಅದರ ಸ್ವರೂಪವೇನು ಮತ್ತು ಅದರ ನಿಯಮಗಳು ಯಾವುದು ಎಂದು ಕೇಳುತ್ತಾರೆ. (ಮದುರೆ, ಎದೆಯ ಗುಡಿಸಿನಲ್ಲಿ ಅದನ್ನು ಅವರು ಗುರುತಿಸುತ್ತಾರೆ, ಸಂಪ್ರದಾಯ ಮತ್ತು ಸಾರ್ವಜನಿಕವಾದ್ದರ ನಡುವೆ ಈಗ ಅಂತರವೂ ಇದೆ, ಆದರೆ ಹುಡುಕಾಟವನ್ನು ಅವರು ಬಹಳ ಹಿಂದಿನಿಂದಲೇ ಮಾಡುತ್ತಾ ಬಂದಿದ್ದಾರೆ. ವಸಾಹೋತ್ತರ ಕಾಲದಲ್ಲಿ ವ್ಯಾಕರಣಗಳು ಬದಲಾಗಿವೆ. ಹಾಗೆ ನೋಡುವುದಿದ್ದರೆ ಶಿವಪ್ರಕಾಶರು ಬರಹದ ಸಂಸ್ಕೃತಿಯನ್ನು ಮನ‌ ನಿಲ್ದಾಣವನ್ನು ಮಾಡಿದ್ದಾರೆ. ಮತ್ತು ಮನರ್ ಮೌಲ್ಯಮಾಪನವನ್ನೂ ಮಾಡಿದ್ದಾರೆ. ಅಂದರೆ, ಸಂಸ್ಕೃತಿಯನ್ನು ಅವರು ಹೇಗೆ ಗ್ರಹಿಸಿದ್ದಾರೆಯೋ ಆ ರೀತಿಯಲ್ಲಿ ನೋಡಿದ್ದಾರೆ. ಹಾಗೆ ನೋಡುವುದಿದ್ದರೆ ಈವತ್ತು ನಾವು ಬಹು ಸಂಸ್ಕೃತಿಯನ್ನು ಕುರಿತು ಮಾತಾಡುತ್ತಿದ್ದೇವೆ ಆದರೆ ಅದು ನಮಗೆ ಹೇಗೆ ಅನುಭವಕ್ಕೆ ಬರುತ್ತದೆ ಎನ್ನುವುದೂ ಮುಖ್ಯವೇ ಆಗಿದೆ. ಬಹು ಸಂಸ್ಕೃತಿಯನ್ನುವುದು ನಮಗೆ ಹೇಗೆ ಅನುಭವಕ್ಕೆ ಬರುತ್ತದೆ ಮತ್ತು ಅದರ ಸ್ವರೂಪವು ಯಾವ ಬಗೆಯದು ಆಯಾ ಸನ್ನಿವೇಶವನ್ನು ಆಧರಿಸಿಕೊಂಡು

ನಿರ್ಧಾರ ಮಾಡಬೇಕಾಗುತ್ತದೆ. (ಹೋಟರಾಮನ ಸಾವು) ಒಂದು ಜನಾಂಗ ಮತ್ತು ಅದರ ಭಾವನೆಗಳು ಈಗ ಬೇರೆ ಬೇರೆ ಕ್ರಮದಲ್ಲಿ ವ್ಯಕ್ತವಾಗುತ್ತದೆ.( ಶಂ-ಇ-ತಬ್ರೀಜ್ ) ಕಿಲವನ್ನು ಅದು ಅವರಿಂದ ಪಡೆಯುತ್ತದೆ. ಮತ್ತೆ ಕೆಲವನ್ನು ಅದು ತನ್ನಷ್ಟಕ್ಕೆ ಉಳಿಸಿಕೊಳ್ಳುತ್ತದೆ (ಯಾವ ಶವರು ಯಾವ ಬೆಳಕು” ಅವರ ವದ ಮಾರ್ಗದಲ್ಲಿ ಅನ್ನವಾದ ಒಂದು ಮರಿಯನ್ನು ಹುಡುಕಿದ್ದು ಇಲ್ಲಿ ಗಮನಾರ್ಹ ಸಾಂಸ್ಕೃತಿಕ ಅನನ್ಯತೆ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು ಎಂದು ಹೇಳಬಹುದು. ಆದರೆ ನಗರದ ಪರಿಸ್ಥಿತಿಗಳು ಬೇರೆಯಾಗಿವೆ. ನಗರದಲ್ಲಿ ಕೇಂದ್ರ ಮತ್ತು ಆಂಚಿನ ಪ್ರಶ್ನೆಗಳು ಬೇರೆಯಾಗುತ್ತದೆ (ಸದಾಶಿವ ನಗರದಲ್ಲಿ ನಗರದ ಆಧುನಿಕ ಮಾಧ್ಯಮ ಮತ್ತು ಅದರ ಬಂಡವಾಳದ ಸ್ವರೂಪವನ್ನು ರೂಪಿಸುವ ಸಂವಾದವನ್ನು ನೋಡಿದರೆ ಇದರ ಅರ್ಥಗಳು ಬೇರೆಯಾಗಿದೆ ಅದು  ಸಂಪರ್ಕಿಸುವುದು ಬೇರೆ ಬೇರೆ ವಿಧಾನದಲ್ಲಿ ಎನ್ನುವುದು ನನಗೆ ಸರಿಯಾಗಿ ತಿಳಿಯುತ್ತದೆ. ವಸಾಹೋತ್ತರಕಾಲದಲ್ಲಿ ನಡೆಯುವ ಸಂಕಥನಗಳು ಈಗ ಬೇರೆ ವಿಧಾನದಲ್ಲಿಯೂ ಇದೆ ( ಸೈಟಲ್ಲಿ) ಅವುಗಳು ಅನೇಕ ರೀತಿಯ ಸಂಕೇತಗಳನ್ನು ಬಳಸಿಕೊಳ್ಳುತ್ತವೆ. ಮಾಧ್ಯಮಗಳೂ ಸಾಂಸ್ಕೃತಿಕ ಸಂಕರಕ್ಕೆ ಕಾರಣವಾಗಿವೆ. ಒಂದು ಸಂಸ್ಕೃತಿಯನ್ನು ಬರೀ ಶುದ್ಧಾಂಗವಾದ ಸತ್ಯವೆಂದು ಹೇಳುವುದು ಮತ್ತು ಅದಕ್ಕೆ ಒಂದು ಖಚಿತವಾದ ಗಡಿಯನ್ನು ಹೇಳುವುದು ಅಸಾಧ್ಯವಾದ ಮಾತ್ರ ಆಗಿದ ಸ್ವಾತಂತ್ರೋತ್ತರ ಕಾಲದಲ್ಲಿ ಕೆಲವು ರೀತಿಯ ಅಸಮತೆಗಳು ಇವೆ. ಅದರಲ್ಲಿ ಅನೇಕರು ತಮ ಇನ್ನೂ ಸರಿಯಾದ ಅರ್ಥವಾಗಿಲ್ಲ, ದೊಡ್ಡದಾದ ನಿರೂಪಣೆಯ ಒಳಗೆ ಸಿಕ್ಕದೆ ಹೋಗಿರುವ ಅನೇಕ ಸಂಗತಿಗಳು ಇವೆ. ಆಧುನಿಕ ಚರಿತ್ರೆಯೊಳಗೆ ಅನೇಕ ಧ್ವನಿಗಳು ಇವೆ. ಇದನ್ನು ನಾವು ಅವರ ಕವಿತೆಗಳಲ್ಲಿ ಕಾಣುತ್ತೇವೆ. ಹಾಗೆ ನೋಡಿದರೆ ಅವರ ಕವಿತೆಗಳು ಇನ್ನೊಂದು ಕಾರಣಕ್ಕೂ ಮುಖ್ಯವಾಗಿದೆ. ಶಿವಪ್ರಕಾಶ್‌, ಅದನ್ನು ಹುಡುಕುತ್ತಿದ್ದಾರೆ.

ಆಧುನಿಕ ಕನ್ನಡದ ಕಾವ್ಯಕ್ಕೆ ಒಂದು ವಿಶಿಷ್ಟವಾದ ದಿಕ್ಕನ್ನು ಸೂಚಿಸಿದ ಕವಿಗಳಲ್ಲಿ ಶಿವಪ್ರಕಾಶರ ಒಬ್ಬರು. ಅವರು ಬರೆಯಲು ಪ್ರಾರಂಭ ಮಾಡಿದ ವೇಳೆಯಲ್ಲಿ ಒಂದು ಕಡೆಗೆ ಅಡಿಗರು, ಲಂಕೇಶ್, ಅನಂತಮೂರ್ತಿಯವರು ಇದ್ದರು. ಮತ್ತೊಂದು ಕಡೆಯಲ್ಲಿ ದಲಿತ ಲೇಖಕರು ತಮ್ಮ ನಿಲುವನ್ನು ಹೇಳಿದ್ದರು. ಎಡ ಮತ್ತು ಬಲ ಎನ್ನುವ ವರ್ಗೀಕರಣವೂ ಇತ್ತು. ವಸಾಹತುಶಾಹಿಯ ಪ್ರಭಾವವನ್ನು ಹೇಗೆ ಮೀರುವುದು ಎನ್ನುವ ಪ್ರಶ್ನೆಯು ವೈಚಾರಿಕರನ್ನು ಕಾಡಲು ತೊಡಗಿತ್ತು. ಮರಾಣ, ಐತಿಹ ನಂಬಿಕೆಗಳು ಆಧುನಿಕ ವಿಚಾರವಾದಿಗಳಿಗೆ ಪಥ್ಯವಾಗಲಿಲ್ಲ. ಇನ್ನೊಂದೆಡೆ, ಇವುಗಳಲ್ಲಿ ಸ್ಥಳೀಯತೆಯ ನೋಟದ ಹುಡುಕಾಟವೂ ಆರಂಭವಾದ ಹೊತ್ತಿನಲ್ಲಿಯೇ ಶಿವಪ್ರಕಾಶರು 'ಸಮಗಾರ ಭೀಮವ ಕವಿತೆಯನ್ನು ಬರೆದರು. ಸಿದ್ಧ ಜಾಡಿನಲ್ಲಿ ಹೋಗುತ್ತಿದ್ದ ಕನ್ನಡ ಕಾವ್ಯಕ್ಕೆ ಹೊಸ ಲಯವನ್ನು ನೀಡಿದ ಕವಿತೆಯಿದು. ಈ ಮೂಲಕ ಹೊಸದಾದ ತಾತ್ವಿಕ ಆಯಾಮವನ್ನೂ ಸೂಚಿಸಿದರು. ಪರಂಪರೆಯ ಜೊತೆಗಿನ ಭಿನ್ನ ಒಡನಾಟದ ದಾರಿ ಅವರದು.

'ಯಾವ ಶಹರು ಯಾವ ಬೆಳಕು' ಎಂಬ ಅವರ ಹೊಸ ಕವನ ಸಂಕಲನದಲ್ಲಿ ನಾವು ಕಾಯುತ್ತಿದ್ದ ಶಿವಪ್ರಕಾಶ್ ಮತ್ತೆ ಬಂದಿದ್ದಾರೆ:
ಎಲ್ಲಾ ಕಾಣಿಸುತ್ತಿದೆ ನನಗೆ
ನೀವು ಕೇಳುತ್ತೀರಿ ನನ್ನನ್ನು
ಯಾವ ಪಾಪಿಯ ಪಾಪ
ಈ ರೋಗ, ರುಜಿನ, ಕ್ಷಾಮ, ಡಾಮರದ ಶಾಪ ಕೊಟ್ಟಿದೆ.

ಈ ನೆಲಕ್ಕೆ ಜನ- ಜಾನುವಾರುಗಳಿಗೆ, ಮರ, ಗಿಡ, ಸಸಿಗಳಿಗೆ (ಥೀಬ್ಸ್ ನಗರಸ್ಥರಿಗೆ ತೈರ್ಸಿಯೆಸ್ ನೀಡಿದ ಎಚ್ಚರಿಕೆ) ಇದು ಮಹತ್ವದ್ದು, ಈ ನಿಲುವು ಅವರ ಬರಹಗಳ ದಿಕ್ಕನ್ನು ಹೇಳುತ್ತವೆ. ಅವರ ಮುಂದಿನ ಕವನ ಸಂಕಲನಕ್ಕೆ ಕಾಯುವಂತೆ ಮಾಡುತ್ತದೆ. ಬಹುಶಃ ಇಷ್ಟು ದೊಡ್ಡದಾದ ಒಂದು ಚೌಕಟ್ಟನ್ನು ಇಟ್ಟುಕೊಂಡು ಬರೆದವರು ಕನ್ನಡದಲ್ಲಿ ಈ ಕಾಲದಲ್ಲಿ ತುಂಬಾ ಕಮ್ಮಿ. 

(ಬರಹ : ಕೇಶವ ಶರ್‍ಮ ಕೆ., ಕೃಪೆ : ಪುಸ್ತಕಲೋಕ)

Related Books