ಯತ್ಕಿಂಚಿತ್ - ಜಯಶ್ರೀ ದೇಶಪಾಂಡೆ ಅವರ ಕವಿತೆಗಳ ಸಂಕಲನ. ಸಾಹಿತಿ ಚಿದಂಬರ ನರೇಂದ್ರ ಅವರು ಮುನ್ನುಡಿಯಲ್ಲಿ ಬರೆಯುತ್ತಾ ‘ಜಯಶ್ರೀಯವರು ಒಮ್ಮೊಮ್ಮೆ ಎಷ್ಟು ಅಪ್ಪಟ ಕನ್ನಡ ಶಬ್ದಗಳನ್ನು ಬಳಸುತ್ತಾರೆಂದರೆ ಈಗಿನ ಸಾಮಾನ್ಯ ಓದುಗನಿಗೆ ಪದಕೋಶದ ಸಹಾಯ ಬೇಕಾಗಬಹುದು ( ಅದಕ್ಕಾಗಿ ಅವರಿಗೆ ಅಭಿನಂದನೆಗಳು) ಮತ್ತು ಬಹಳಷ್ಟು ಬಾರಿ ಸಂಸ್ಕೃತ ಶಬ್ದಗಳ ಮೊರೆ ಹೋಗುತ್ತಾರೆ. ಈ ಪ್ರಯೋಗ ಕೆಲವೊಮ್ಮೆ ಕವನದ ಚೆಲುವನ್ನು ಹೆಚ್ಚಿಸಿದರೆ ಒಮ್ಮೊಮ್ಮೆ ಅನಗತ್ಯವೂ, ಬಲವಂತವೂ ಅನಿಸುತ್ತದೆ. ಇವು ಕವಿಯ ಪದ ಸಂಪತ್ತಿನ ಕೊರತೆಯಾಗಿರದೆ ಪ್ರಜ್ಞಾಪೂರ್ವಕವಾಗಿ ಮಾಡಿರುವ ಪ್ರಯೋಗಗಳಾಗಿರುವುದರಿಂದ ಇದರ ಸಫಲತೆಯನ್ನು ಓದುಗರೇ ನಿರ್ಧರಿಸಬೇಕು. ಪರಂಪರೆಯೊಡನೆ ಗುರುತಿಸಿಕೊಳ್ಳುವುದು, ಅದರೊಡನೆ ಸಂಧಾನ, ಬಂಡಾಯ ಕವಿಗೆ ಸದಾ ಸವಾಲಾಗುವ ವಿಷಯಗಳು. ಹೊಸ ಹೊಸ ಚಿಂತನೆಗಳಿಗೆ ತುಡಿಯುವ ಒಂದು ಪ್ರಗತಿಪರ ಮನಸ್ಸು ಈ ಸವಾಲನ್ನು ಗಂಭೀರವಾಗಿ ಪರಿಗಣಿಸಿ ಪರಂಪರೆಯ ಹಂಗಿಗೆ ಬೀಳದೆ, ವರ್ತಮಾನದ ಬೆಳಕಿನಲ್ಲಿ ಸಮಸ್ಯೆಗಳನ್ನು ನಿಕಷಕ್ಕೆ ಒಡ್ಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಜಯಶ್ರೀ ಅವರು ತಮ್ಮ ಹಲವಾರು ಕವಿತೆಗಳಲ್ಲಿ ಈ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ ಕೆಂದಾಯಿ ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ) ಹೌದದ್ದು ಅಲ್ಲ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ) ಇವು ಧಾರಾವಾಹಿಯಾಗಿ ...
READ MORE